ಪುಟ:ಅರಮನೆ.pdf/೬೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೪೭ ಯಂದು ಹವಾಮಾನ ತಗ್ನರು ನೀಡಿದ ಸಲಹೆಯನ್ನು ಕೇಳಿಸಿಕೊಳ್ಳುತ್ತಲೇ ಕೆಳಗಿಳಿದು ಅವರಿವರತ್ತ ಮುಗುಳು ನಗೆ ಚೆಲ್ಲುತ್ತ, ಜನಗಡಣದತ್ತ ಕಿ ತ್ತಿ ಬೀಸುತ್ತ, ಸ್ಫೋನ್, ವಾಟರ್, ವಿಂಡ್ ಮುಂತಾದವರಿಗೆ ಸೇಕೆಂಡು ಕೊಡುತ್ತ, ಬೊಕ್ಕೆಗಳನ್ನು ಪಡೆಯುತ್ತ... ನಿಸ್ತೇಜರಿಗೆ ಯಿಲೇವಾರಿ ಮಾಡುತ್ತ ಹೆಜ್ಜೆ ಹೆಜ್ಜೆಗೊಂದೊಂದು ಸಲಕ್ಕ ಯಡಕ ಬಲಕ ನೋಡುತ್ತ.. ವಬ್ಬೊಬ್ಬರ ಮುಖಗಳನ್ನು ಸಿಮಾವ ಲೋಕಿಸುವುದರೊಂದಿಗೆ ಅವರವರ ಕಡತಗಳನ್ನು ನೆನಪು ಮಾಡಿಕೊಳ್ಳುತ್ತ.. ನೆನಪಿಸಿಕೊಡುತ್ತ. ಹಲವರ ಯದಗಳೊಳಗಿಳಿಯುತ್ತ. ಹಲವರಯ್ದೆಗಳಿಂದ ಹೊರ ಬರುತ್ತ.. ಅಂಜಿಕೊಂಡವರ ಬಳಿ ಸಾರು ಕ್ಷೇಮಲಾಭ ಯಿಚಾರಿಸುತ್ತ ತಾಯಂದಿರ ಕಂಕುಳೊಳಗಿದ್ದ ಕಜ್ಜಿ ಪುಳ್ಳೆ ಕಂದಮ್ಮಗಳನ್ನು ಯತ್ತಿಕೊಂಡು ಮುದ್ದಾಡುತ್ತ.. ಡಿಸೀಜ್ ಥಾಮಸ್ ಮನ್ನೋ ಯಂದು ಮನವರಿಕೆ ಮಾಡಿಕೊಡುತ್ತ.. ಹುವಿನೊಂದಿಗೆ ಮಕ್ಕಳನ್ನು ಹತ್ತಿರ ಕರೆಯುತ್ತ.. ತನ್ನೊಂದಿಗೆ ಹೆಜ್ಜೆ ಹಾಕಿರೆಂದು ಹೇಳುತ್ತ.. ಬಂಗಲೆ ಸೇರಿಕೊಂಡೊಡನೆ ತನ್ನ ಸರೀರ ಸವುಖ್ಯ ನೋಡಿಕೊಂಬದೆ ಥಾಮಸು ಮನೋನು ಕಡತಗಳ ಗುಡ್ಡವನ್ನು ಯದುರಿಗೆ ಯಳಕೊಂಡು ದಸರತ್ತು ಮಾಡುತ ಯಿಲೇವಾರಿ ಮಾಡಿದನು. ಯರಡು ಮಯುದ್ದ ನಿಂತುಕೊಂಡಿದ್ದ ಪ್ರಜೆಗಳ ಸಂಕಟ ಕಷ್ಟಗಳನ್ನಾಲಿಸಿ ವಬ್ಬೊಬ್ಬರಿಗೂ ವಂದೊಂದು ಕ್ರಮ ಕಯ್ಯಕೊಂಡನು. ತನ್ನೊಳಗೆ ದುಬಾಯಿಸು ಕಾಠ್ಯಪವುರುತ್ತರಾಗಿದ್ದ ಕಾರಣಕ್ಕೆ ಅಗತ್ಯಕ್ಕಿಂತ ಕಡಿಮೆ ಅಲಂಕರಿಸಿಕೊಂಡು ಕುದುರೆ ಹೋಗುವ ಕಡೇಕ ಕುದುರೆ ಮಾಲೂ.. ನಡಕೊಂಡೇ ಹೋಗುವ ಕಡೇಕ ನಡದುಕೊಂಡೇ ಹೋಗುತ ಸಂಚಲನ ಸ್ರುಷಿ« ಮಾಡಿದನು. ರಾತರಿ ಮಲಗಿರುವಾಗ ಯಾಕೋ ನಂದರ ಮಾಲ ವಂದರಂತೆ ಕಣಸುಗಳನು ಕಾಣಲಾರಂಭಿಸಿದನು.. ಅದ್ಯಾವ ಸೀಮೆ ಪಟ್ಟಣಗಳೊ.. ಸೌಧಗಳೋ.. ಜನಗಳೊ.. ಅದಾವುದೂ ಲವುಕಿಕಕ್ಕೆ ಸಂಬಂಧಿಸಿಧಂಗಿಲ್ಲ.. ಅನುಭವಕ್ಕೆ ನಿಲುಕುವಂತಂದ್ದಿದ್ದಂಗಿಲ್ಲ... ಅದೆಲ್ಲವುಗಳ.. ಅವರೆಲ್ಲರ ನಡೂಲಕಿಂದ ಮುತ್ತಯಿದೆಯೋಲ್ವಳು ನಡಕೋತ ನಡಕೋತ ತನ್ನ ಕಡೀಕೆ ಬರುತ್ತಾ ಅವಳೆ.. ಯಲ್ಲಾರಿಗಿಂತ ಯತ್ತರಕವಳೆ.. ಮುಂಗಾಲಿಗೆ ಕಡಗ.. ಬೆರಳುಗಳಿಗೆ ವುಂಗುರಗಳ ತೊಟ್ಟವಳೆ.. ಹಸಿರು ಸೀರೆ ವುಟ್ಟವಳೆ.. ಹಸಿರು ಕುಬುಸ ತೊಟ್ಟವಳೆ.. ಕೊರಳೊಳಗೆ ತರಾವರಿ ಸರಗಳನ ಧರಿಸವಳೆ.. ದವಡೆಯೊಳಗೆ ತೊಂಬಲದುಂಡೆಯನ್ನಿಟ್ಟವಳೆ.. ಕೆಂಪಾನ ತುಟಿ ಮ್ಯಾಲ