ಪುಟ:ಅರಮನೆ.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ವಾದ ಹೇಳಿದನು. ಅರಮನೆಯವರು ಸಂದಾಯ ಮಾಡುತ್ತಿದ್ದ ಗವುರವ ಧನದೊಳಗೆ ಯಿಡೀ ಕುಟುಂಬವಡಗುವುದು ಅಸಾಧ್ಯವಾಗಿದ್ದುದರಿಂದಾಗಿ ಅವರೀರರು ಅಲ್ಲಿಂದ ತೊಲಗಲು ಮಾನಸಿಕವಾಗಿ ಸಂಸಿದ್ದರಾಗಿದು ದೊರೆಗೆ ಬುದ್ದಿವಾದ ಹೇಳುವ ಧಯ್ರ ಮಾಡಿದ್ದರು. ಮುನಿದು ಕಾಟನಾಯಕನು ತಮ್ಮನ್ನು ಅರಮನೆಯಿಂದ ಹೊರಹಾಕಬೌದೆಂದು ನಿರೀಕ್ಷೆ ಮಾಡಿದ್ದ ಅವರು ಅವನತಮುಖಿಗಳಾಗಲು ನಾಯಕ ಅಸಹಾಯಕತೆಯಿಂದ ಅವುಡುಗಚ್ಚಿ ತನ್ನ ದವಡೆಗಳ ಬಿಗುವನ್ನು ಸಣ್ಣ ಮಾಡಿಕೊಂಡನು... ಅಸಾಹಯಕತೆಯನ್ನೊಳಗೊಂಡ ಅಳುಕಿನಿಂದಾತನು ಹೇಳಿದ್ದೇನೆಂದರೆ “ಅಯ್ಯಾ, ಸೇವಾಸಕ್ತರೇ, ಯಿದು ಬಲವಂತದಿಂದ ಜರುಗೋ ಕೆಲಸವಲ್ಲ.. ಬುದ್ದಿವಂತಿಕೆಯಿಂದ ಮಾಡಬೇಕದೆ.. ಅದಕ್ಕೇನೇನು ಮಾಡಬೇಕೆಂದರೆ...” ಥಾಮಸು ಮನೋ ಸಾಹೇಬನು ಪುಲಿವೆಂದಲದಲ್ಲಿ ನಾಮಕರಣ ಕಾರ ಮುಗಿಸಿಕೊಂಡು ಜನರ ಸುಖದುಕ್ಕಗಳನ್ನಾಲಿಸಿ ಕಡಪ ಹಾದಿ ಹಿಡಿದಿರುವಾಗ್ಗೆ, ಹತ್ತಾರು ಮಂದಿ ಕೊಡ ಬಿಂದಿಗೆಗಳನ್ನು ತಮ್ಮ ತಮ್ಮ ಹೆಗಲು ಬಗಲುಗಳಲ್ಲಿಟ್ಟುಕೊಂಡು ದೇಕುತ್ತ ನಡೆಯುತ್ತಿದ್ದುದನ್ನು ಕಂಡನು. ಅವರ ಪಯ್ಕೆ ಹಿರೀಕನಿದ್ದ ಮುದೇತನು "ರಾಯಲ ಸೀಮಾನು ರತುನಾಲ ಸೀಮ ಅಂಟಾರು... ತಾಗಡಾನಿಕಿ ಗುಕ್ಕಿಡು ನೀಳ್ಳುಲೇದು” ಯಂದು ಮುಂತಾಗಿ ಪದ ಹಾಡು ತ್ತಿದ್ದುದನ್ನು ಕೇಳಿಸಿಕೊಂಡನು. ಆಗ ಆ ಮುದೇತನನ್ನು ಹತ್ತಿರ ಕರೆದು ನಿಮ್ಮ ಕಷ್ಟಗಳೇನು ಯಂದು ಯಿಚಾರಿಸಲು ಆತನಿದ್ದು “ಯೇ ರಾಜನು ಹೋಗಿ ಆ ರಾಜ ಬಂದ್ರೂನಮ್ಮೆ ಕುಡಿಲಕ ನೀರಿಲ್ಲ.. ನಮ್ಮುಚ್ಚನ ನಾವ್ ಕುಡುಕಂಡು ಬದುಕದೀವಿ” ಯಂದು ಹೇಳಿದನು. ಅದನ್ನು ಕೇಳಿ ಮಮ್ಮಲನ ಮರುಗುತ್ತಲೇ ಕಡಪ ಸೇರಿಕೊಂಡ ಮನೋ ಸಾಹೇಬನು ತನ್ನ ಅಧಿಕಾರಿಗಳನ್ನು ಆಸ್ಥಾನಕ್ಕೆ ಬರಮಾಡಿಕೊಂಡು ರಾಯಲಸೀಮದೊಳಗೆ ನೀರಿನ ಸ್ಥಾವರ ಯಲ್ಲಲ್ಲುಂಟು ಯಂಬುದನ್ನು ಪತ್ತೆ ಹಚ್ಚಬೇಕೆಂದೂ.. ವಂದೊಂದು ಗ್ರಾಮ ದೊಳಗ ಬಾವಿಗಳನ್ನು ತೋಡಿಸಬೇಕೆಂದೂ.. ಆದ್ರೆ ಮಾಡುತ್ತಿರುವಾಗ್ಗೆ.... ಅತ್ತ ಜರುಮಲಿ ರಾಜನು ತಾನು ದಂಡು ದವಲತ್ತು ಸಮೇತ ದಂಡೆತ್ತಿ ಬರಬೇಕೆಂದಿರು ವನೆಂದೂ, ಯೇಳು ದಿವಸದೊಳಾಗಿ ಕಪ್ಪ ಕಾಣಿಕೆ ತಂದು ಸರಣಾಗಿ ಪ್ರಾಣ ವುಳಿಸಿಕೊಳ್ಳ ಬೇಕೆಂದೂ ನಿಚ್ಚಾಪುರದ ರಾಜನಿಗೆ ಪರಮಾನು ಕಳಿಸುತ್ತಿರು ವಾಗ್ಗೆ.. ಮದ್ದಿಕೇರಿಯ ಸಂತರಸ್ತರ ಪಯ್ಕೆ ಗಂಡಸರು