ಪುಟ:ಅರಮನೆ.pdf/೬೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬೦ ಅರಮನೆ ಮಾತಾಪುಗಳೆಷ್ಟೋ..? ಹೆಣ ಯತ್ತ ಬ್ಯಾಡಿರಿ.. ಅವರು ಬರೋರಿದ್ದಾರೆ. ಹೆಣ ಯತ್ತ ಬ್ಯಾಡಿರಿ ಯಿವರು ಬರೋರಿದ್ದಾರೆ. ಮಣ್ಣು ಕೊಡುವ ಭಾಗ್ಯ ಯಾರಿಗುಂಟು ಯಾರಿಗಿಲ್ಲ.. ಅಂಬುದಕ್ಕೆ ಪುರಾವೆಯಾಗಿ ಹೆಣವನ್ನು ಯದುರಿಗೆ ಕಣ್ಣಣಿಯೆ ಯಿಟುಕೊಂಡು ವಂದಿವಸಾತು.. ಯಲ್ಲು ದಿವಸಾತು.. ಬರೋರು ಬರುತಲೇ ಅಯ್ತಾರೆ.... ಯಿನ್ನೂ ಬರೋರು ಮಸ್ತು ಮಂದಿ ಅಯ್ತಾರೆ. ಅವರೆಲ್ಲ ಬರೋದು ಬ್ಯಾಡುವಾ.. ಚಿನ್ನಾಸಾನಮ್ಮನ ಅಂತಿಮ ದರುಸನ ಪಡಕೊಳ್ಳೋದು ಬ್ಯಾಡುವಾ.. ಹಿಂಗು ವಂದು ಮಾತಾSS ವಂದು ಕಥಿಯಾ ಸಿವನೇ…….... ತಮ್ಮ ತಮ್ಮ ಮೂಗತುರಿಕೇನ ತಮಣಿ ಮಾಡಲಕಂತ ಕೆಲವು ಮಂದಿ ಕಳೇಬರದ ಸನೀಕ ಅಂದರ ಸನೀಕ ಹೋಗುವುದು ಮೂಸುವುದು ಮಾಡುತಲಿದ್ದರು. ಮೊದಲೇ ಅವು ದಡ್ಡನೋಡಿ ಮಂದಿ.. ವಾಸಣೆ ಬರುವುದಾದರೂ ಹೆಂಗೆ? ಅದೇನು ನಮನಿಮ್ಮಂಗ ಸಾಮಾನ್ಯ ಹೆಣುಮಗಳಾ? ಸಾಕ್ಷಾತ್ ಚಿನ್ನಾಸಾನೀದು.. ಯಂಬ ಅಲವುಕಿಕ ಸಂಗತಿ ಆ ಲವುಕಿಕ ಮಂದಿಗೆ ಹೆಂಗ ಅಡ್ಡಾದೀತು? ವಂದಿವಸಾತು ಯಲ್ಲುದಿವಸಾತು.. ಬರೋರೆಲ್ಲ ಬರುತಲೇ ಯಿದ್ದರು. ನಿನ್ನೆ ದಿವಸವೇ ತಟಾಯ ಬೇಕಿದ್ದ ಹೆನ್ರಿಸಾಹೇಬನು ಮದ್ಯಾಣವೇ ತಿಮಲಾಪುರ ದಾಟಿ ಚಿಲಕನಹಟ್ಟಿ ತಲುಪನಿರುವನಂತೆ. ಚಂಜಿ ಹೊತ್ತಿಗೆಲ್ಲ ಡಣಾಪುರ ಸೇರಿಕೊಳ್ಳಬಹುದು. ಆತ ಒಂದೇ ಒದು ಹನಿ ನೀರು ಮುಟ್ಟಿಲ್ಲವಂತೆ, ಒಂದಗುಳ ಅನ್ನವನ್ನು ತಿಂದಿಲ್ಲವಂತೆ.. ಅವುದು... ಹುತಾತುಮಗೊಂಡಂಥ ಅಂಜಿಣಿ ಗಂಟಲೊಳಗಿದ್ದ ಪ್ರೇಮ ಸಂಬಂಧೀ ಭಾವನೆಗಳು ಮೊನ್ನೆ ತಾನೆ ಅವನ ಸರೀರದೊಳಗೆ ಆಶ್ರಯ ಪಡಕೊಂಡು ಕಲ್ಲಾವುಲ್ಲಿ ಶ್ರುಷ್ಟಿಸಿ ಬಿಟ್ಟಿರುವುವು. ಆತ ಹೆಜ್ಜೆ ಹೆಜ್ಜೆಗೊಮ್ಮೊಮ್ಮೆ ಸಲಕ್ಕೆ ಚಿನ್ನಾ.. ರುದಯ ವಲ್ಲಭೇ.. ಪ್ರಾಣಸಖಿ ಅಂಬುತಿರುವನು.. ಯೇಳೆಂಟು ಹೆಜ್ಜೆಗಳಿಗೊಂದೊಂದು ಸಲ ಮೂರೈ ಹೋಗೋದೂ.. ಯದ್ದು ನಡೆಯೋದನು ಮಾಡುತ್ತಿರುವನು.. ಯಿರಲಿ.. ಬಂದೇ ಬರುತಾನೆ.... ಚಿನ್ನಾಸಾನಿ ನಮನಿಮ್ಮಂಗ ಸಾಮಾನ್ಯ ನರಮಾನ್ನವಳಾಗಿರಲಿಕ್ಕಿಲ್ಲ.. ಸಾಕ್ಷಾತ್ ದಯವಾಮುಸ ಸಂಭೂತಳಾಗಿದ್ದಿರಬೇಕು.. ಯಂದು ಮುಂತಾಗಿ ಯೋಚನೆ ಮಾಡುತಾss ಮಾಡೂತ ಸರಣೆ ತಾಯೀ.. ನೀನು ನಿಜಸರಣೆ