ಪುಟ:ಅರಮನೆ.pdf/೬೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೬೩ - ಆ ಕಡೆ ಸೂರೈಾಮ.. ಕಡೆ ಚಂದ್ರಾಮ.. ಯಿವರೀರೊಟ್ಟಿಗೆ ಸಾವುರಾರು ನಚ್ಚತ್ರಗಳು ಕಣ್ಣೀರು ಸುರಿಸುತಲಿದ್ದ ಹಗಲು ಕಳೇಬರ ನೆಲ ಬಿಟ್ಟು ಮ್ಯಾಲಕೆದ್ದಾಗ ಯಲ್ಲಿತ್ತೋ ಲೀವಾಗಲೂ ಅಲ್ಲೇ ಯಿತ್ತು. ಕುಂತಳ ಸೀಮೆಯ ಸಮಸ್ತ ಸುಂದರಕ್ಕೇ ವಡತಿಯಾಗಿದ್ದ ಚಿನ್ನಾಸಾನಿಯ ಅಂತಿಮ ದರುಸನ ಪಡೆಯಲಕೆಂದಲ್ಲಿಗೇ ಬಂದಿತ್ತು. ಮಣ್ಣು ಕೊಡಲಿರುವವರಿಗೆ ತೊಂದರೆಯಾಗದಿರಲೀ ಅಂತ ಹಸಿವು ತ್ರುಷೆ ಆಯಾಸಗಳಿತ್ಯಾದಿ ತಾಪತ್ರಯಗಳೆಲ್ಲ ಡಣಾಪುರದಿಂದ ಪಿತುಗಿ ಅನತಿ ದೂರಯಿದ್ದ ಹನುಮಾನಪುರದ ಪುರಾತನ ಆಲದ ಮರದ ಕೊಂಬೆ ರೆಂಬೆಗುಂಟ ಜೋತು ಬಿದ್ದಿದ್ದವು ಸಿವನೇ... ಈ ಹಿಂಗಾಗಿ ಮೆರವಣಿಗೆ ವಂದಿಂಚು ಕದಲಲಕ ವಂದೊಂದು ತಾಸು ತಗಂಡೂs ತಗಂಡು ಪರಂಧಾಮ ಯಂಬುಪನಾಮಧೇಯ ಮುಡಕೊಂಡಿದ್ದ ಮಸಣವನ್ನು ಸೇರಿಕೊಂಡಿತೆಂಬಲ್ಲಿಗೆ ಸಿವಸಂಕರ ಮಾದೇವಾss.. ಮುಂದ ಕಳೇಬರ ಮಣ್ಣಾದುದರ ಬಗ್ಗೆ, ನೂರಾರು ಮಂದಿ ತಾವು ಮಡ್ಕೊಳಗ ಮಣ್ಣಾಗಲಕಂತ ಮಡ್ಕೊಳಗ ವುರುಳಾಡಿದುದರ ಬಗ್ಗೆ, ಗಂಡ ಕಲಿಯಿರ ನಾಯಕನು ಚಿತಾಪ್ರವೇಸ ಮಾಡಿದುದರ ಬಗ್ಗೆ.. ಹಾಲಗಲ್ಲಿನ ಗುಡಿಯೊಂದು ಸಮಾಧಿ ಮ್ಯಾಲ ಮೂಡಿದುದರ ಬಗ್ಗೆ.. ಅದರೊಳಗೆ ಆಳೆತ್ತರ ಮೂರುತಿ ಸ್ಥಾಪಿಸಿ ಅದಕೆ ಚಿನ್ನಾದೇವಿಯಂದು ನಾಮಕರಣ ಮಾಡಿದುದರ ಬಗ್ಗೆ. ರಾಜಮಾಹಾರಾಜರೇ ಮೊದಲಾದ ಪಿಂಚಣಿದಾರರು ಪಯಿಪೋಟಿಗೆ ಬಿದ್ದು ಧನ ಕನಕ ಭೂಮಿಗಳನ್ನದಕ ದಾನ ಮಾಡಿದುದರ ಬಗ್ಗೆ ಕಾಲಾನುಕಾಲಕ ಪುರಾಣ ಪುಣ್ಯ ಪ್ರವಣ ನಡೆಸಲಾರಂಭಿಸಿದುದರ ಬಗ್ಗೆ.. ಚಿನ್ನಾದೇವಿ ತನಗೆ ನಡಕೊಂಡವರ ಮನೆಯೊಳಗ ತುಪ್ಪದ್ದೀವಿಗೆಯಾಗಿ ಬೆಳಗಲಾರಂಭಿಸಿದುದರ ಬಗ್ಗೆ.. ಮುಂದೆ ಭಕುತ ಕೋಟಿಯ ವತ್ತಾಯದ ಮೇರೆಗೆ ಡಣಾಪುರಕ್ಕೆ ಚಿನ್ನಾದೇವಿಪುರಯಂದು ಪುನಾಮಕರಣ ಮಾಡಿದುದರ ಬಗ್ಗೆ.. ಚಿನ್ನಾದೇವಿ ಜಾನಪದ ಕಥೆ, ಕಾವ್ಯಗಳೊಳಗೆ ಸಾಸ್ವತವಾಗಿ ಬದುಕಿದ್ದು ಬೆಳೆಯಲಾರಂಭಿಸಿದ ಬಗ್ಗೆ ಹೇಳೂತ ಹೋದಲಲಿ ಸಿವಸಂಕರ ಮಾದೇವಃ... ಅತ್ತ ಕುಂತಳ ಪ್ರಾಂತಕ್ಕಧಿಕವೆನಿಸಿದ್ದ, ಬ್ರಾಝುತ್ವ ಸಂಬಂಧೀ ವಾಚಕಗಳ ಆಡುಂಬೋಲವಾಗಿದ್ದ. ಸಾಧು ಸಂತಾವಧೂತ ಮಂದಿ ಕಣ್ಣಮಲೊಳಗ ರಾರಾಜಿಸುತಲಿದ್ದ ಕುದುರೆಡವು ಪಟ್ಟಣ ಕಾಲಿಲ್ಲದೇನೆ ಕುಂತಳ ಸೀಮೆಯಾದ್ಯಂತ ಅಡ್ಡಾಡುತಲಿದ್ದಿತು.. ಬಾಯಿಲ್ಲದೇನೆ ಮಾತಾಡುತಲಿದ್ದಿತು, ಕಲ್ಲಿದೇನೆ