ಪುಟ:ಅರಮನೆ.pdf/೬೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯಿದ್ದವರನ್ನೇ ಇಂದರ ಚಂದರ ಅಂತ ಹೊಗಳೋ ಕಲಿಕಾಲದೊಳಗ ಯೂ ತೆರನ ಚಹರೆವುಳ್ಳವರನ್ನು ಕೇಳೋರು ಯಾರು? ಭಂಗಾರಯ್ಯನ ವಮುಸಸ್ಥನಾದ ಸಿಂಗಾರಯ್ಯ ನಿದಕ ಹೊರತಲ್ಲ.. ಸಾಂಬಯ್ಯ ಮಾಕನಡುಕು ಕಡೆಗೆ ಮುಖ ಮಾಡಲು ಕುದುರೆಡವು ಕರುಳನ್ನು ಗಂಟಲಿಗೆ ತಂದುಕೊಂಡು, ಕರುಮಯ್ಯ, ಅಡುವಯ್ಯ ಮೊದಲಾದ ಮುದೇರು ಬೆಂಗಾವಲಿಗೆ ಹೊಂಟು ನಿಂತರು. ಸರನೆ ಹೋಗಯ್ಯ ಬಿರನೆ ಬಾರಯ್ಯ ಯಂದು ಮಂದಿ ಬೀಳುಕೊಟ್ಟರು. ಸಾಂಬಯ್ಯನ ವುರುಸು ಫಲಾನ ದಿವಸದಂದು ಹೊಂಟು ಫಲಾನ ದಿವಸದಂದು ಸಿಂಗಾರಗೊಂಡಿದ್ದ ಮಾಕನಡುಕನ್ನು ತಲುಪಿತು. ಅಲ್ಲಿ ಗೇಣು ಗೇಣಿಗೊಂದೊಂದರಂತೆ ತಳಿರು ತೋರಣಗಳಿದ್ದವು, ಹತ್ತತ್ತು ಹೆಜ್ಜೆಗೊಂದೊಂದರಂತೆ ಹುಬ್ಬಿನ ಮಂಟಪಗಳಿದ್ದವು, ಸಾಧು ಸಂತಾವವಧೂತ ಮಂದಿ ವಾರವೀಡಿ ಸೇದಿ ಬಿಟ್ಟಿದ್ದ ಭಂಗೀ ಹೊಗೆ ಕಾರು ಮೋಡೋಪಾದಿಯಲ್ಲಿ ಅತಂತರದ ಅಟ್ಟೆಗಳನ್ನು ನಿರುಮಿಸಿತ್ತು, ನೂರಾರು ಕುರಿ ಮೇಕೆಗಳ ಮೆಹಹಹೇ ಮಂಗಳ ನಿನಾದದ ಗುಂಟ ಸಾಂಬಯ್ಯ ಕೂಕಂಡಿದ್ದ ಬೆಳ್ಳಿ ಪಾಲಕಿಯ ಮೆರವಣಿಗೆಯು ಫಲಾನ ಗಳಿಗೆಯಲ್ಲಿ ಆರಂಭಗೊಂಡು ಫಲಾನ ಗಳಿಗೆಯಲ್ಲಿ ಮುಗುತಾಯ ಕಂಡಿತು. ಅಲ್ಲಿಂದ ಅಡಕಲ ಯಂಬ ಮರಿಗೆ, ಅಲ್ಲಿಂದ ಬಡಕಲ ಯಂಬ ಮೂರಿಗೆ, ಅಲ್ಲಿಂದ ಡಬ್ಬಲಕ ಯಂಬ ಮೂರಿಗೆ.. ಹಿಂಗೆ ಹೊತಾ ಹೋತಾ ಹೋಗಿ ಸಾಂಬಯ್ಯನ ವುರುಸು ಕುಂತಳ ಸೀಮೆ ದಾಟಿ ಯಿಸಿಲ ಯಂಬ ಪಟ್ಟಣವನ್ನು ತಲುಪದೆ ಯಿರಲಿಲ್ಲ... ಹೋದ ಕಡೇಲೆಲ್ಲ ಭಕುತಾದಿ ಮಂದಿ ಧನಕನಕ, ವಡವೆವಸ್ತ್ರ ಯವೇ ಮೊದಲಾದ ಕಾಣಿಕೆ ಮೊಗದಿಗಳನ್ನು ಸಮಕ್ಷಿಸದೆ ಯಿರಲಿಲ್ಲ.. ಆ ಎಲ್ಲ ಚರ ಸಂಪತ್ತನ್ನು ಕತ್ತೆ ಕುದುರೆಗಳ ಮ್ಯಾಲ ಹೇರಿಕೊಂಡು ವುರುಸು ಯೇಸೋ ದಿವಸಗಳಾದ ಮ್ಯಾಲ ಪುನಃ ಕುದುರೆಡವನ್ನು. ಸಿವಸಂಕರ ಮಾದೇವಾ... ಮೋ ಮಯ್ ಗಾಡ್! ಯಂದುದ್ಧಾರ ಮಾಡುತ ಫಲಾನ ದಿವಸದಂದು ಅನಂತಪುರವನ್ನು ವದಲಿ ಫಲಾನ ದಿವಸದಂದು ಮನೋ ಸಾಹೇಬನು ತಲುಪಿದ ಕಡಪಾ ಪಟ್ಟಣವು ದೂರುವ ಕಾಲಿದ್ದು ಸಿವನೇ.. ಆ ಕಡಪಾ ಸೀಮೆಯಂಬುದು ಜೋಕಾಲದಲ್ಲಿ ಸಿವನೇ.. ಪೂರುವ