ಪುಟ:ಅರಮನೆ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೯ ನಾಳೆ ಬರದೆ ಯಿರಾಕಿಲ್ಲ.. ಯಂದನಕಂತ.. ಯೇನುಂಬುತೀಯವ್ವಾ.. ಟ್ಯೂನು ಕುಡಿದು ಬದುಕುತೀಯವ್ವಾ. ಯಂದು ಕೇಳಿದ್ದಕ್ಕೆ ಸಟಕ್ಕಂತ, ಹಂಗಾರ ಬೀಗ ಸದ್ಯಕ್ಕೆ ನೀನು ಯಲ್ಲಿ ವಸ್ತಿಯಿರುತೀ ತಾಯಿ ಯಂದು ಮಂದಿ ಅಂದುದಕ ವುತ್ತರವಾಗಿ ಆ ಪರಮ ಸಾದ್ವಿ ಪಡುವಲಕ ನೋಡಲಲ್ಲಿ.... ಅಲ್ಲೇ ಅಂದರೆ ಅಲ್ಲೇ, ವುಂಡು ಬಾಯಿ ಮುಕ್ಕಳಿಸಿ ವುಗುಳಿದರೆ ನೀರುಯಷ್ಟು ದೂರ ಹೋತದೋ ಅಷ್ಟು ದೂರದಲ್ಲಿ ನಲಮುಗುಲಿಗೇಕಾಗಿ, ಯಡ ಬಲಕಿದ್ದ ಹಿಂದಲಕ ಮುಂದಲಕಿದ್ದ ಬಯಲನ್ನು ತನ್ನ ತೆಕ್ಕೆಗೆ ತಕ್ಕೊಂಡು, ನೂರಾರು ಧರುವ ಛತ್ರಗಳಂತಿದ್ದ ತನ್ನ ನೂರಾರು ರೆಂಬೆ ಕೊಂಬೆಗಳಲ್ಲಿ ಹತ್ತಾರು ಯಿಧದ ಪಕ್ಷಿಗಳು ತಮ್ಮ ತಮ್ಮ ಸಮುಸಾರ ಸಮೇತ ನೆಲಹಲಕ ಅನುವು ಮಾಡಿಕೊಟ್ಟಿದ್ದಂಥ.. ಯಳೆಕಂದಮ್ಮ ಬಿಡುವ ವುಸುರಿಗೆ ತಲೆದೂಗುತಲಿದ್ದ.. ಸದಾ ಹಸಿರು ಮುಕ್ಕಳಿಸುತಲಿದ್ದ ಅಗಾಧ ಗಾತುರದ ಬೇಯಿನ ಮರವು ಗೋಚರ ಮಾಡಿತು. ತಾನೀ ತೂರಿಗೆ ಕಾಲಿಟ್ಟ ಗಳಿಗೇಲಿ ಮುಂದ ದಣಿವವರಿಗೆ ನೆಳ್ಳು ನೀಡಲಂತ, ತೂಕಡಿಸೋರು ವಂಚಾವತ್ತು ಮಲಕ್ಕಂಡು ನಿದ್ದೆ ಮಾಡಲಂತ, ಪಚ್ಚಿಗಳು ಅದರ ತುಂಬೆಲ್ಲ ನೆಲಸಲಂತಲ್ಲವಾ ತಾನು ತನ್ನ ತವರೂರಿನಿಂದ ತಂದಿದ್ದ ಸಸಿಯನ್ನಲ್ಲಿ ನೆಟ್ಟಿದ್ದು. ದಿನಾಲು ವಂದೊಂದು ಕೊಡ ನೀರೆರೆಯುತ್ತಿದ್ದುದು, ಅದೆಲ್ಲ ಯದ ಮಟ ಬೆಳೆಯೋವರೆಗೆ, ಆ ಮ್ಯಾಲ ತಾನು ತನ್ನ ಗಂಡ, ಬಾಳೇವು, ಬದುಕಿನ ದ್ಯಾಸದಲ್ಲಿ ಅದರ ಯೇಕರಿಕೆ ದೇಕರಿಕೇನ ತಾನು ನೋಡಿಕೊಂಡುದ್ದುಂಟಾ? ಯೇಟೆತ್ತರ ಬೆಳೆದಂತ್ತಲ್ಲಾ ತನ್ನ ತವರೂರಿನ ಕುಡಿ.. ಮಾತ್ರುವಾತ್ಸಲ್ಯದಿಂದ ಅದನ್ನು ಕಣ್ಣ ಹೆಡಿಗೇಲಿ ತುಂಬಿಕೊಂಡಳು. “ನಾನಿದ್ದೀನಿ ಕನವ್ವಾ” ಯಂದದು ಮಯ್ಯ ತೊನೆದು ಕರದಂಗಾತು.. ಬಟ್ಟೆ ಬರೆ ಗಂಟು ಕಟ್ಟಿಕೊಂಡು ಅದರ ಸನೀಕ ಹೋದಳು. ಅದರ ನೆಳಲ್ಲಿ ನಿಂತು ಕುಂತು ದಣುವಾರಿಸಿಕೊಂಡಳು. ಯಷ್ಟೋ ನೆಮ್ಮದಿ ಅನ್ನುಸುತು ಜೀವಕ್ಕೆ.. ಬುಡತಂಕ ಬಂದಿದ್ದ ಆಕೆ ದೊಡ್ಡ ಮುಟ್ಟಿ ಸಣುಮಾಡಿ “ಯವ್ವಾ. ಮರದವ್ವಾ, ಚೋಟುದ್ದ ಯಿದ್ದಾಕಿ ತಲೆದೂಗೋ ಹಂಗ ಬೆಳಕಂಡಿರುವಿ... ೦ಟಿದ್ದರೂ ನೀನು ಮಿಚೇರಿ ಮಡ್ಕೊಳಗ ಮೊಳತಾಕಿ.. ಕಣ್ಣು ಕಿಸರಾಗಂಗದೀ.. ಸಾವುರಾರು ಪಚ್ಚಿಗಳು ವಾಸ ಮಾಡಲಕ ಅನುವು ಮಾಡಿಕೊಟ್ಟಿದ್ದೀ.. ದಣಕೊಂಡು ಬಂದೋರಿಗೆ ನೆಳ್ಳೆಂಬುವ ತಣ್ಣೀರು ಕೊಟ್ಟು ಆಯಾಸಾನ ಪತ್ಕಾರ ಮಾಡ್ತಿದ್ದೀ... ನಿನ್ನ ತಂದಿಲ್ಲಿ ನೆಟ್ಟಿದ್ದಕ್ಕೆ ನನ್ನೊಡಲು