ಪುಟ:ಅರಮನೆ.pdf/೭೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೭೨ ಅರಮನೆ ಹಂಗು ಹೋಗೇ ಬಿಟ್ಟಿತು. ಅದನ್ನು ಹುಡುಕಿ ತಂದುಕೊಟ್ಟವರಿಗಿಷ್ಟು. ಅದರ ಸುಳಿವು ನೀಡಿದವರಿಗಷ್ಟು ಯಂದು ಡಂಗೂರನ ಬ್ಯಾರೆ ಸಾರಿಸಿದ್ದರಲ್ಲ.. ಅದಕ ದವುಳೇರಾಗಬೇಕೆಂದೋ, ರಾಜನಿಷ«ಯಿಂದೋ.. ಚಿನ್ನಾಸಾನಿ ಮಾಲಣ ಪ್ರೀತಿಯಿಂದೊ SS... ಸದರಿ ಪಟ್ಟಣದ ಮಂದಿಯೊಂದೆ ಅಲ್ಲದ ಆಜೂ ಬಾಜೂಕಿದ್ದ ಗ್ರಾಮದ ಮಂದಿ ತರಾತುರೀಲೇ... ನಿಂತ ನಿಲುವೀಕೀಲೆ ಹೊಂಟು ನಿಂತರು.ಅವರವರ ಹೆಂಡಂದಿರು, ತಂದೆ ತಾಯಂದಿರು, ವಡಹುಟ್ಟಿದೋರು ಬ್ಯಾಡ, ಕೂಸಿನ ವುಸಾಬರಿಗೆ ಹೋಗಬ್ಯಾಡೂರಿ” ಯಂದು ಹೇಳುತ ತರುಬಲೆತ್ನವ ಮಾಡಿದರೂ ಅವರು ಹೆಂಗೆಂಗ ದಾರಿ ಗೋಚರ ಮಾಡುವುದೋ ಹಂಗಂಗ ಹೊಂಟೇ ಬಿಟ್ಟರು..... ಹುಡುಕಲಕ ಹೋದ ಗಂಡಂದಿರ ಕನವರಿಕೆಯಲ್ಲಿದ್ದ ಹೆಂಡಂದಿರ, ಹುಡುಕಲಕ ಹೋದ ಮಕ್ಕಳ ಕನವರಿಕೆಯಲ್ಲಿದ್ದ ತಂದೆ ತಾಯಂದಿರ, ಹುಡುಕಲಕ ಹೋದ ತಂದೆಗಳ ಕನವರಿಕೆಯಲ್ಲಿದ್ದ ಮಕ್ಕಳು ಮರಿಗಳ.. ಹುಡುಕಲಕ ಹೋದ ತಮ್ಮ ಸೂರಪರಾಕ್ರಮಿ ಪ್ರಿಯಕರರ ಕನವರಿಕೆಯಲ್ಲಿದ್ದ ಪ್ರಿಯಂವದೆ ಯರ.. ಹುಡುಕಲಕ ಹೋದ ಅಣ್ಣಂದಿರ ಕನವರಿಕೆಯಲ್ಲಿದ್ದ ತಮ್ಮಂದಿರ.. ಹುಡುಕಲಕ ಹೋದ ಗೆಳೆಯರ ಕನವರಿಕೆಯಲ್ಲಿದ್ದ ಜೀವದ ಗೆಣೆಕಾರರ.. ಹುಡುಕಲಕ ಹೋದ ಹರೇದ ಗಣುಮಕ್ಕಳ ಕನವರಿಕೆಯಲ್ಲಿದ್ದ ರುದ್ಧರ.. ಹುಡುಕಲಕ ಹೋದ ಶಿಷ್ಯಂದಿರ ಕನವರಿಕೆಯಲ್ಲಿದ್ದ ಗುರುಗಳ ಮನೋಯಾಕುಲವನ್ನು ಯೇನೆಂದು ವರಣನ ಮಾಡುವುದು ಸಿವನೇ... ಹೋದವರು ಹೋಗೇ ಬಿಟ್ಟಿರು ವರಲ್ಲಾ.. ಅವರಿಗೆ ಅವರವರ ಮನೆ ಸಮುಸಾರದ ಪುಸಾಬರಿ ವಂಥಟಗಾರ ಯಿರುವುದು ಬ್ಯಾಡವೇನು? ವಂದೆಲ್ಲು ದಿನ ಹುಡುಕಿದಾಂಗ ಮಾಡಿ ವಾಪಾಸು ಬರಲಕ ಅವರಿಗೇನು ದಾಡಿ.. ಯಂದು ಮುಂತಾಗಿ ಅವರೆಲ್ಲ ಗಳಿಗ್ಗಳಿಗೊಮ್ಮೆ ನಿಟ್ಟುಸುರು ಬಿಡುತಲಿದ್ದುದೇನು? ಜಾವ ಜಾವಕ್ಕೊಂದೊಂದು ಸಲ ಆಟು ದೂರ ಹೋಗಿ ಹುಬ್ಬಿಗೆ ಕಚ್ಚಿ ದೂರದವರೆಗೆ ನಿಟ್ಟಿಸುತಲಿದ್ದುದೇನು? ದುಡಿಯೋರೇ ಹೋದ ಮ್ಯಾಲ ತಮ ತಮ್ಮ ಮನಿಗಳ ಬಾಳೇವು ನಡಿ ಅಂದರ ಹೆಂಗ ನಡೆದೀತು.. ಯಂದು ಯೋಚಿಸುತ್ತಲೇ ಹೆಣ್ಣುಮಕ್ಕಳು ಅವರಿವರ ಹತ್ರಕಯ್ಕೆಗಡ ಸಾಲ ಸೋಲ ಮಾಡೇ ಮಾಡಿದರು. ಕೊಡೋರು ಯಷ್ಟಂತ ಕೊಟ್ಟಾರು? ಯಾರು ನಿಮ ನಿಮ್ಮ ಗಂಡಂದಿರ ಮೂಗಿಗೆ ಯಿನಾಮುಯಂಬುವ ತುಪ್ಪ ಹಚ್ಚಿ ಕಾಡಡವಿಗೆ