ಪುಟ:ಅರಮನೆ.pdf/೭೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಹೇಳೋ ಮಾತಲ್ಲ ಅಂತನ್ನುವುದು ಹ್ಯಾಂಗ ಸಿವನೇ.. ಯಿದು ಕೇಳೋ ಮಾತಲ್ಲಾಂತನ್ನುವುದು ಹ್ಯಾಂಗ ಸಿವನೇ... ಅದರ ಕಡೀಕ ಧ್ಯಾಸ ಮಾಡಿಕೋ ಬ್ಯಾಡಿರಿ.. ಪುರಾಣ ಪುಣ್ಯ ಶ್ರವಣದ ಕಡೇಕ ಗಮನ ಕೊಡಿರಿ ಯಂದು ಮುಂತಾಗಿ ಅರಮನೆಯವರು ಡಂಗುರ ಸಾರಿಸಿದ ನಂತರವವಾಟಗಾರ ಕೂಸು ನೀರು ಸುರಿಂತೊ ಹಂಡೇವಿನೊಳಗ., ಕಾಳುಕಡಿಯಿಡೋ ಅಡಕಲ ಗಡುಗೆಗಳೊಳಗ.. ಕೂಳು ಬೇಯೋ ಚರಕಲಿಗಳೊಳಗ.. ವುಂಬುವ ತಟ್ಟೆಗಳೊಳಗ.. ಕುಡಿಯೋ ಲೋಟ್ಯಾಗಳೊಳಗ.. ಕಯ್ಯಗೆತ್ತಿಕೊಂಡ ತುತ್ತುಗಳೊಳಗ.. ಹೇಗಿದ ಡೇಗುಗಳೊಳಗ.. ಮಮ್ಮ ಚೆಲ್ಲೋ ಹಾಸಿಗೆಗಳೊಳಗ.. ಹೊದ್ದುಕೊಳ್ಳೋ ದುಪ್ಪಟೆಗಳೊಳಗ.. ಹಿಂಗss ಯಲ್ಲಂದರಲ್ಲಿ ಕಾಣಿಸಿಕೊಳ್ಳಲಾರಂಭಿಸಿದಂತಾಗಲು ಮಂದಿ ಹಂಡೇಗಳೊಳಗೆ ನೀರು ಸುರಿಯೋದನ್ನು ಬಿಟ್ಟರಂತೆ.. ಲೋಟ್ಯಾಗಳೊಳಗಿಂದ ನೀರು ಕುಡಿಯೋದನ್ನು ಬಿಟ್ಟರಂತೆ. ಅಡಕಲ ಗಡುಗೆಗಳನ್ನು ಯತ್ತಾಡುವುದನ್ನು ಬಿಟ್ಟರಂತೆ.. ಬಾನ ವುಂಭೋದನ್ನು ಬಿಟ್ಟರಂತೆ. ಡೇಗುವುದನ್ನು ಬಿಟ್ಟರಂತೆ.. ಹೂಸುವುದನ್ನು ಬಿಟ್ಟರಂತೆ. ಹಾಸಿಗೆಗಳ ಮ್ಯಾಲ ವುರುಳೋದನ್ನು ಬಿಟ್ಟರಂತೆ.. ದುಪ್ಪಟೆಗಳ ಹೊದ್ದುಕೊಳ್ಳುವುದನ್ನು ಬಿಟ್ಟರಂತೆ.. ರೆಪ್ಪೆಗೆ ರೆಪ್ಪೆ ಅಂಟಿಸುವುದನ್ನು ಬಿಟ್ಟು ಅಲ್ಲಿಂದಿಲ್ಲಿಗೆ, ಯಿಲ್ಲಿಂದಲ್ಲಿಗೆ ಅಂಡಲೆಯುತ್ತಿದ್ದುದನ್ನು ಯೇನೆಂದು ಹೇಳಲಿ ಸಿವನೇ.. ಯಿದು ಅರಮನೆಯ ಮಂದಿಗೆ ಬಲು ಜೋಜಿಗಯಂಬಂತೆ ಕಂಡಿತು. ಸುತ್ತನ್ನಾಕಡೇಲಿದ್ದ ನಾನಾಯಿಧದ ತಂತ್ರಗಾರರನ್ನ.. ಮಂತ್ರಗಾರರನ್ನು ಕರೆಯಿಸಿಕೊಂಡು ಅವರೊಂದಿಗೆ ಸಮಾಲೋಚನೆ ನಡೆಸಿದರು. ಅದನ್ನು ಕೇಳಿ ಆ ವಾಮಯಿದ್ಯಾಯಿಸಾರದರು ಕೂಸು ಮರ ಮೇರೆ ದಾಟದಂಗೆ ನಿರಂಧಿಸಲು ಹಾದಿ ಹಾದಿಗೊಂದೊಂದರಂತೆ ಯಿದ್ದ ಕರಗಲ್ಲುಗಳಿಗೆ ಪ್ರಾಣ ಬಲಿಕೊಟ್ಟು ಹೋಮ ಹವನ ಮಾಡಿ ಭೂತಾಳ, ಬೇತಾಳ, ಕಂಕಾಳಗಳನ್ನು ಕಾವಲಿಟ್ಟರು.. ಪಟ್ಟಣದ ಮೇರೆಗುಂಟ ಸರಗ ಚೆಲ್ಲಿದರು.. ಕುಡಿಯೋ ನೀರಿಗೆ ವುಂಬುವ ಬಾನಕ್ಕೆ, ದವಸ ಧಾನ್ಯಗಳಿಗೆ.. ಮಯೂ ಚೆಲ್ಲೋ ಹಾಸಿಗೆಗಳಿಗೆ, ಹೊದ್ದುಕೊಳ್ಳೋ ದುಪ್ಪಟಗಳಿಗೆ ಹಾಕಲಕಂದು ವುದುಕನ ಮಂತ್ರಿಸಿ ಕೊಟ್ಟರಂತೆ ಸಿವನೇ......... ಯಿದೆಲ್ಲ ಆದ ಅರಗಳಿಗೆ ತರುವಾಯು ಸದರಿಪಟ್ಟಣದೊಳಗ ಯಿದ್ದಂಥ ತಾಂತುಂದಿರು ಕೂಸೆಂದು ತಮ್ಮನೆಯೊಳಗೆ ಬೋರಾಗಿ