ಪುಟ:ಅರಮನೆ.pdf/೭೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮ ಅರಮನೆ ಟೊಳ್ಳಾಯೀss ಛೋಳ್ಕೊಳ್ಳಾಯೀ SS... ಹಿಂಗss ಕೂಸಿನ ಸುದ್ದಿ ವಂದೊಂದು ಗ್ರಾಮದಲ್ಲಿ ತನ್ನ ಪರಮಾಧಿಕಾರ ಚಲಾಯಿಸುತ ಭಯ ಬಿತ್ತುತ್ತ ಭೀತಿ ಬೆಳೆಯುತ್ತ... ತಾನು ಅಂಬೆಗಾಲಿಟ್ಟ ಕಡೇಲೆಲ್ಲಿ ವಸಾಹತು ಸ್ಥಾಪಿಸುತ್ತ. ಹೋಬಳಿಯಿಂದ ಹೋಬಳಿಗೆ.. ತಾಲ್ಲೂಕಿನಿಂದ ತಾಲ್ಲೂಕಿಗೆ.. ಜಿಲ್ಲೆಯಿಂದ ಜಿಲ್ಲೆಗೆ.. ರಾಜ್ಯದಿಂದ ರಾಜ್ಯಕ್ಕೆ.. ದೇಸದಿಂದ ದೇಸಕ್ಕೆ.. ಪರಪಂಚದಿಂದ ಪರಪಂಚಕ್ಕೆ ನಿಗುರಾಡ ತೊಡಗಿದುದರ ಬಗ್ಗೆಯೇನೆಂದು ಹೇಳಲಿ ಸಿವನೇ.... ಅತ್ತ ಹರಪನಹಳ್ಳಿ ಪ್ರಾಂತದೊಳಗ ಹೆಡ್ಡಿಂಗನದೇನು ಹೇಳುವುದು..? ಭರಮನ ಗವುಡನ ಕಡೆಯವರನ್ನೆಲ್ಲ ಹುಡುಕಾಡಿ ಹಿಡಿಹಿಡಿದು ತಂದು ಶಿರಚ್ಚೇಧನ ಮಾಡಿಸಿ ಮಾಡಿಸಿ ಸುಸ್ತಾಗಿದ್ದ... ಬರೋಬ್ಬರಿ ತೊಂಭತ್ತೊಂಭತ್ತು ಮಂದಿಯನ್ನು ಯಶಸ್ವಿಯಾಗಿ ಯಮಲೋಕಕ್ಕೆ ಅಟ್ಟಿದ್ದ ಖಂಡೇರಾಯನು ನೂರನೇ ಅಪರಾಧಿಯ ತಲೆ ಕತ್ತರಿಸಲು ಹಿಂಜರಿದು “ನನ ಕಯ್ದಾಗಲ್ಲ ಮಹಾ ಪ್ರಭೋ.. ಬೀಗಲೇ ಮಸ್ತು ಪಾಪ ಸುತ್ತಿಕೊಂಡಯ್ಕೆ.. ನನಗ ಕುಂಪಣಿ ಸರಕಾರದ ಮಳಿಗ ಬ್ಯಾಡ.. ಪಗಾರಾನು ಬ್ಯಾಡ” ಯಂದು ಪರಿಪರಿಯಿಂದ ಕೇಳಿಕೊಂಡನು. ಹೆಡ್ಡಿಂಗನು ಬಲವಂತ ಮಾಡಿದ್ದಕ್ಕೆ ತನ್ನೆರಡು ಕಯ್ಕೆಗಳನ್ನು ತಾನೆ ಕಡಿದುಕೊಂಡು ಸ್ಥಳೀಕ ಬಾಯಿಯಿಂದ ವುಫ್ ಅನ್ನಿಸಿಕೊಳ್ಳುತ್ತ ವಿಜಾಪುರ ಸೀಮೆ ಕಡೇಕ ಹೋದನಂತೆ ಸಿವನೇ... ಅತ್ತ ಕುಂಪಣಿ ಸರಕಾರದ ಕಯ್ಯವಶಗೊಂಡ ಸಮುಸ್ತಾನ ಪಾಳ್ಮೆ ಪಟ್ಟುಗಳು ವಂದೇ ಯರಡೇ, ಬೀದಿ ಪಾಲಾದ ರಾಜವಮುಸಗಳು ವಂದೇ ಯರಡೇ? ಕೂಲಿ ಕುಂಬಳಿಗಿಳಿದ ರಾಜ ಪರಿವಾರದವರು ವಬ್ಬರಾ ಯಿದ್ದೀರಾ.. ಆತುಮಾಭಿಮಾನ ಕಳಕೊಂಡಿನ್ಯಾಕೆ ಬದುಕಬೇಕೆಂದು ತಮ್ಮನ್ನು ತಾವು ಕೊಂದುಕೊಂಡು ಸತ್ತಂಥ ರಾಜಾಧಿರಾಜರು ವಬ್ಬರಾ ಯಿಬ್ಬರಾ.. ಅರಮನೆಗಳಿಂದ ಹೊರದೂಡಲ್ಪಟ್ಟ ಪರಿಣಾಮವಾಗಿ ವಾಸ್ತವವನ್ನು ಯದುರಿಸಲಿಕ್ಕಾಗದೆ ಮತಿ ಭ್ರಾಂತರಾಗಿ ಅಲೆಯತೊಡಗಿದ್ದಂಥ ರಾಜರು ವಬ್ಬರಾ, ಯಿಬ್ಬರಾ! ಸಿಮಾಸನಗಳಿಂದಿಳೀತಲೆ ತಮ್ಮ ತಮ್ಮ ಪ್ರಜೆಗಳಿಂದ ಹಲ್ಲೆಗೀಡಾಗಿ ಸತ್ತ ರಾಜರು ವಬ್ಬರಾ ಯಿಬ್ಬರಾ.. ಕುಂತಳ ಪ್ರಾಂತದೊಳಗ ಯೋಸೋ ಸಿಮಾಸನಗಳು ಪ್ರಜೆಗಳ ಕಾಲಿನಿಂದೊದೆದು ಮಾಮೂಲು