ಪುಟ:ಅರಮನೆ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಸಾಕಾತು, ಜ್ವಾಪಾನ ಜತುನಾ ಮಾಡೀನಂತ ಹೇಳಿ ನಿನ್ನಾ ಹಂಗಿಸಿಲ್ಲವ್ವಾ ನನ್ನುಪಕಾರ ನಿಂಗೆ ನೆಪ್ಪಿದ್ದಲ್ಲಿ.. ನೀನು ಸರಣಾಗತ ರಚ್ಚಕಿ ಆಗಿದ್ದಲ್ಲಿ ಗಂಡ ಬಿಟ್ಟಿರೋ ನನ್ನ ನಿನ್ನ ಬುಡದಾಗಿಟಕಂಡು ಕಾಪಾಡಬೇಕು ತಾಯಿ” ಯಂದೊಂದೇ ಮಾತಲ್ಲಿ ಕೇಳಿಕೊಂಡಳು. ಆಕೆಯ ಮಾತು ಕೇಳಿ ಮರದ ಕರುಳು ಕರಗಿತು. ಜಗಲೂರೆವ್ವನ ಮಯ್ಯ ಬೆವರಿನ ವಾಸನೆ ಕುಡುದೂ ಕುಡುದು ತನಗೀ ಬಣ್ಣ ಕಸುವು ಲಭಿಸಯ್ತ. ಅಲ್ಲಿದ್ದ ತನ್ನನ್ನು ಯಲ್ಲಿಗೆ ತಂದು ಪಾಲಿಸಿ ಘೋಷಿಸಿರುವಳು, ಮೇಕೆಯ ಬೇಡಿಕೇನ ತಿರಸ್ಕರಿಸಿ ರಿಣಗೇಡಿ ಆಗಬಾರದು ಯಂದು ಮುಂತಾಗಿ ರುಕ್ಷ ಯೋಚಿಸಿತು. ಆದರ ಸಡನ್ನಂತ ನಿಲ್ದಾರ ತೆಗೆದುಕೊಳ್ಳಲದಕ ಸಾಧ್ಯಯಿರಲಿಲ್ಲ. ತಾನು ಹೇಳಿ ಕೇಳಿ ತಾಯಿ ಸಾಂಬವಿಯ ಆಗ್ರಾನುವಂಯು, ಆಕೆಯ ಹಂಗು ಅನುಗ್ರಹಗಳಿಂದ ತುಂಬಿ ತುಳುಕಾಡುತಿರುವ ತಾನು ಸೊಸಂತರಾಲೋಚನೆ ಮಾಡಲಕ ಯಷ್ಟರವಳು? ತನ ಗಂಡನ ಸರೀರವನ್ನು ಮುಟ್ಟುವ ಹಕ್ಕನ್ನು ಕಳೆದುಕೊಂಡು ನಿರಾಶ್ರಿತಳಾಗಿರುವ ಜಗಲೂರೆವ್ವಗೆ ತನ್ನ ಬುಡದಲ್ಲಿ ಪುನರೊಸತಿ ಕಲುಪಿಸಿ ಕೊಡೋದು ಯಾವುದೇ ರುಕ್ಷದ ಧರುಮವು, ಕೆಲದಿವಸಗಳ ಯಿದ್ಯಾಮಾನಗಳನ್ನು ನೋಡುತ್ತಿದ್ದರೆ ತಾಯಿ ಸಾಂಬವಿಯ ವಲುಮೆ ಮೇಕೆಯ ಮಾಲ ಯಿರುವುದೊ ಯಿಲ್ಲವೋ ಯಂಬ ಅನುಮಾನ ಬರುವುದು. ಯೇನೇ ಆಗಲಿ, ವಂದು ಮಾತು ತಾಯಿನ ಕೇಳಿದ ಮ್ಯಾಲೆಯೇ ಮುಂದಿನಾಲೋಚನೆ ಮಾಡುವುದೆಂದು ಈ ರುಕ್ಷವು ನಿಲ್ದಾರ ಮಾಡಿತಂತೆ... ತನ್ನೊಂದು ಬೇರನ್ನು ರಾಯಭಾರಿಯನ್ನಾಗಿ ಮೋಬಯ್ಯನ ಸರೀರದೊಳಗಿದ್ದ ಸಾಂಬವಿಯ ಬಳಿಗೆ ಕಳಿಸಿತಂತೆ. ಬೇರು ಅಡಬಿದ್ದು “ತಾಯಿ ಸಾಂಬವೀ.. ನಿನ್ನಂಗೆ ಜಗಲೂರವ್ವ ಕೂಡ ವಂದು ಹೆಣ್ಣು ಅಂಬುದನು ಮರೀಬ್ಯಾಡಪ್ಪಾ”ಯಂದು ಬಖಯಿರು ಸಲ್ಲಿಸಿತಂತೆ. ಬಖಯರ ನ್ನಾಲಿಸಿದ ತಾಯಿಯು.. “ಆಕೆ ದೂರವ ಜಲುಮದಲ್ಲಿ ಪಾಪ ಮಾಡಿರುವಾಕಿ.. ಅಲ್ಲದ ತಾನು ಹೆಣ್ಣಾಗಿ ಜಗಲೂರಜ್ಜನ್ನ ಕುಂತರೂ ನೆನೀತಾಳ.. ನಿಂತರೂ ನೆನೀತಾಳ. ಆಕೆಯಂಥ ಹೆಣುಮಕ್ಕಳಿಗೆ ಬುದ್ದಿ ಕಲಿಸುವ ಸಲುವಾಗೇ ನಾನಾಕೆಯ ಗಂಡನ ಸರೀರದಲ್ಲಿ ವಸ್ತಿ ಮಾಡಿರೋದು. ನಾನಾ ಯದವಾದ ಪರೀಕ್ಕೇಲಿ ಗೆದ್ದ ಮಾಲೀss ಆಕೆಗೆ ಸುಕ ಸಾಂತಿ ದೊರಕೋದು.. ಅಲ್ಲಿಗಂಟಾ ಆಕೆ ಬಿಸಿಲಾಗಿದ್ದು ತಾಪ ಪಡಲೀ.. ನೆಳ್ಳಾಗಲೀ, ಆಶ್ರಯ ಆಗಲಿ ಕೊಡಕೂಡದಂತಾ ಮರದವ್ವಗೆ ಹೇಳು” ಯಂದು ಹೇಳಿದಳಂತೆ. ಅದಕಿದ್ದು ರಾಯಭಾರಿಯು “ತಾಯಿss...