ಪುಟ:ಅರಮನೆ.pdf/೭೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೬೮೧ ಮಾಲೂ ಕುಂಪಣಿ ಸರಕಾರವು..... ಹಿಂದೊಂದಿವಸ ಅಬಡಾ ತೊಬಡಾ ಕಡಪಾಪಟ್ಟಣವ ಸೇರಿಕೊಂಡಿದ್ದವ ಯಾವಾತಂತೀರಿ ಸರ್ ಥಾಮಸು ಮನೋ ಸಾಹೇಬನಂತೀರಾ, ತೆನುಗು ಮಾತನಾಡೋ ಆಂಧ್ರದ ಮಂದಿ ಬಾಯಿತುಂಬ ಕರೆಯುತಲಿದ್ದ ಮಂತೋಳ ಸಾಬನಂತೀರಾ.. ಕಾದ ಕಾವಲಿ ಮ್ಯಾಲ ಕೋಳಿಮರಿ ನಿಂತಂಗಾಗಿತ್ತಾತನ ಪರಿಸ್ಥಿತಿ. ಹಸುವಾಯಿತಂತ ವುಣ್ಣುವಂಗಿರಲಿಲ್ಲ. ಬಾಯಾರಿಕೇಂತ ನೀರುಕಾಳು ಬಾಂರೊಳಗ ಹಾಕ್ಕೊಳ್ಳುವಂಗಿರಲಿಲ್ಲ... ನಿದುರೇಂತ ರೆಪ್ಪೆಗೆ ರೆಪ್ಪೆ ಅಂಟಿಸುವಂತಿರಲಿಲ್ಲ.. ಸಳಿ ಆತಝಂತ ದುಪ್ಪಟೇನ ಹೊದ್ದುಕೊಳ್ಳುವಂತಿರಲಿಲ್ಲ... ಸೆಕೆ ಆತಯಂತ ದುಪ್ಪಟ ಸರಿಸುವಂತಿರಲಿಲ್ಲ... ಸಿರಿವಂತರ ಪಾಲಿಗೆ ವುಪದ್ರವಿಯೂ, ಬಡಬಗ್ಗರ ಪಾಲಿಗೆ ನಿರುಪದ್ರವಿಯೂ ಆದಂಥ ಮಂತೋಳ ಸಾಹೇಬನಿಗೆ ಯದುರಾಗಿದ್ದ ವುಪದ್ರವಗಳು ವಂದೇ ಯರಡೇ, ಕಲ್ಕತ್ತಾದಲ್ಲಿ ವಿಲಿಯಂ ಬೆಂಟಿಕ್ಕನೆಂಬ ವುಪದ್ರವಿಯೂ, ಮದ್ರಾಸಿನಲ್ಲಿ ವೆಲ್ಲೆಸ್ಲಿಯಂಬ ವುಪದ್ರವಿಯೂ, ಕಂಭಂನಲ್ಲಿ ತನಗೆ ಹಿಂಬಡ್ತಿ ನೀಡುವ ಸಲುವಾಗಿ ಮುಂಬಡ್ತಿಗಾಗಿ ಯದುರು ನೋಡುತಾಯಿರುವ ಡಬ್ಲ್ಯೂ ಡಬ್ಲ್ಯೂ ಚಾಪ್ಲಿನ್ ಯಂಬುವ ವುಪದ್ರವಿಯೂ.. ತನ್ನನ್ನವುಣ್ಣುತ್ತ ತನಗೇ ಬತ್ತಿ ಯಿಡಿಲು ಯೋಚಿಸುತ್ತಿರುವ ಕ್ಯಾಂಪ್‌ಬೆಲ್, ಮ್ಯಾಥ್ಯ... ಹೇಡನ್ ಯೆಂಬ ಹೆಸರಿನ ವುಪದ್ರಗಳು.. ಯಿಂಥಪ್ಪ ಸಾವುರದೆಂಟು ವುಪದ್ರಗಳ ಸೆರೆಯೊಳಗೆ ಬಂಧಿಯಾಗಿದ್ದ ಮಂತೋಳ ಸಾಹೇಬ ಸುಖವಾಗಿರು ಅಂದರ ಹೆಂಗ ಸುಖವಾಗಿದ್ದಾನು ಸಿವನೇ.. ಕಡಪಾ ಪ್ರಾಂತದ ಸೀಮೆವಳಗೆ ಎಲ್ಲಂದರಲ್ಲಿ ನಿಟ್ಟುಸಿರ ಸುಂಟರಗಾಳಿಗಳು ಸುಯ್ಯಂತ ಸುತ್ತಲಕ ಹತ್ತಿದ್ದ ಮೋss ಆಕ್ರಂದನಗಳು ಬಿರುಗಾಳಿಯೋಪಾದಿಯಲ್ಲಿ ಭರೂಂತ ಬೀಸಲಕ ಹತ್ತಿದ್ದಮೋss ವಂದೊಂದು ಮೂರ ಅಗಸೆ ಬಾಗಲಲ್ಲಿ, ವಂದಲ್ಲಾ ಎಂದು ಮರಗಳ ಕೊಂಬೆ ರೆಂಬೆಗಳಗುಂಟ ತೂಗಾಡು ತಲಿದ್ದ ಹೆಣಗಳೋ?.. ಹೊಳೆ ಹಳ್ಳಗಳಲ್ಲಿ ತೇಲಾಡುತಲಿದ್ದ ಕಳೇಬರಗಳೋ? ಚೆನ್ನೂರು, ವಲ್ಲೂರು, ಪಂಢಿಮರಿ, ಗಾಂಡೂರು, ಯೇತೂರು ಕಡೇಲಿದ್ದ ಕೊರಚರು ಹಾದಿ ಬಡುಕರಾಗಿ ಪರಿವರನಗೊಂಡುದರ ಕುರಿತು ಬುಗ್ರಕಥದೊಳಗೆ ಹೇಳೋರೆಲ್ಲ ದಾರ? ಪುಲ್ಲಮಪೇಟೆ, ಸಿದ್ದವುಟ,