ಪುಟ:ಅರಮನೆ.pdf/೭೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮೪ ಅರಮನೆ ಹಿಡಿದಿಟ್ಟಂಗಾಗಯ್ತಿ ನೋಡು.. ಸೆರೆಮನೆಯವಳಾದ ನಾನು ಮುಂದಿನ ಕೆಲವೇ ಕೆಲವು ದಿವಸಗಳೊಳಗ ಬಟಾಬಯಲವ್ವ ಆಗಿ ಪರಿವರನ ಹೊಂದಬಹುದು ನೋಡು ಮಗನೇ..” ಎಂದು ದುಕ್ಕದಿಂದ ಅಹವಾಲು ತಪ್ಪಿಸಿ ಬಿಕ್ಕಳಿಸುತ ಹೋದಂಗಾಗಲು.... ಯಿದರಿಂದ ಸಾವರಿಸಿಕೊಳ್ಳುತ್ತಿರುವಷ್ಟರಲ್ಲಿ ಮತ್ತೊಂದು ದುರೈಟನೆ ಕಡಪಾ ಪಟ್ಟಣದೊಳಗ ಸಂಭವಿಸಿತು. ಕಂಡಲ್ಲಿ ಗುಂಡು ಯಂಬ ಆಗೈ ಯಿದ್ದರೂನೂವೆ ಮಂದಿರಗಳೊಳಗ ಆಕಳ ಕಳೇಬರಗಳು, ಮಸೀದಿಗಳೊಳಗ ಹಂದಿ ಕಳೇಬರಗಳು ಪತ್ತೆಯಾಗುತಲಿದ್ದವಷ್ಟೆ. ಹಿಂದೂ ಮಂದಿ ಮುಸಲ್ಮಾನ ಮಂದಿ ಬಡಕೋತಿದ್ದರಷ್ಟೆ. ಯಿರುಪಕ್ಷದಲ್ಲಿ ಹತ್ತಾರು ಹೆಣಗಳು ವುರುಳುತಲಿದ್ದವಷ್ಟೆ.. ಯಂಥ ಬುದ್ಧಿಗೇಡಿ ಯಿದ್ದಾನು ಮೆಕ್ ಡೊನಾಲ್ಕನೆಂಬ ಸಬ್ ಕಲೆಟ್ಟರನು.. ಕುದ್ದಕೋಮುಗಳ ನಡುವೆ ಸಾಮರಸ್ಯ ಮೂಡಿಸಬೇಕೆಂದು ಆತ ವಂದಲ್ಲಾ ವಂದು ಪ್ರಯತ್ನ ಮಾಡುತ್ತಲೇ ಯಿದ್ದ. ಸಶಸ್ತ್ರಕಾವಲಿಲ್ಲದೆ ಯಲ್ಲಿಗೂ ಹೋಗಕೂಡದೆಂದು ತಾನು ಹೇಳಿದಾಗಲೆಲ್ಲ... ಯಿಪ್ಪತ್ನಾಲ್ಕರ ಹರೆಯದ ಆತನು ಮುಗುಳು ನಗೆಯೇ ಯಲ್ಲಾ ಆಯುಧಗಳಿಗಿಂತ ಬಲಾಡ್ಯ ಯಂದು ಹೇಳಿ ಬಾಯಿ ಮುಚ್ಚಿಸುತ್ತಿದ್ದ. ತನ್ನ ವುತ್ತರಾಧಿಕಾರಿಯಂದು ತಾನ್ಯಾವತ್ತೋ ಅಂದುಕೊಂಡಿದ್ದೆ. ಕಳೆದ ವರ ಮದ್ರಾಸಿನ ಕೆಥಡ್ರಾಲಿನಲ್ಲಿ ನಡೆದ ಆತನ ಮದುವೆಗೂ ತಾನು ಹೋಗಿ ಬಂದಿದ್ದೆ. ಆ ದಿನ ಯೇನಾಯಿತೋ ಸ್ಪಷ್ಟವಾಗಿ ತಿಳಿಯದು.. ಮೆಕ್ ನಾಕಾರು ಮಂದಿ ಜವಾನರ ನಡುವೆ ಡೋಲಿಯಲ್ಲಿ ಕುಳಿತು ಪ್ರಕ್ಷುಬ್ದತೆ ತುಂಬಿ ತುಳುಕುತಲಿದ್ದ ಜಾಗಕ್ಕೆ ಹೋದನಂತೆ.. ಡೋಲಿಯಿಂದ ಯಿಳಿದೊಡನೆ ಹಿಂದಿನಿಂದ ಬಂದ ಪಠಾಣನೋವ್ವ ಮಾರುದ್ದವಿದ್ದ ಖಡ್ಗ ಬೀಸಿ ಆತನ ರುಂಡ ಚೆಂಡಾಡಿದನಂತೆ. ಅಪಾರ ಸಂಖ್ಯೆಯಲ್ಲಿದ್ದ ಮುಸಲ್ಮಾನ ಮಂದಿ 'ಅಲ್ಲಾ ಹೋ ಅಕ್ಟರ್‌.. ಪಠಾಣ್ ಮೊಯಿದ್ದೀನ್ ಜಿಂದಾಬಾದ್' ಯಂದು ಜಯಘೋಷ ಮಾಡಿದ್ದು ಪಟ್ಟಣದ ತುಂಬೆಲ್ಲ ಮಾರನಿಸಿತಂತೆ. ಕಂಪನಿ ಸರಕಾರದ ಸಿಪಾಯಿಗಳು ಗುಂಡು ಹಾರಿಸಿ ಯಿಪ್ಪತ್ತುವ್ವತ್ತು ಮಂದಿ ಮತಾಂಧರನ್ನು ನೆಲಕ್ಕುರುಳಿಸದಿದ್ದಲ್ಲಿಮುಂದ್ಯಾವ ಅನಾಹುತ ಸಂಭವಿಸು ತಿತ್ತೇನೋ? ಮಂದಿ ಕಾವಲಲ್ಲಿ ತಲೆ ತಪ್ಪಿಸಿಕೊಂಡಿರುವ ಪಠಾಣ ನಾಳೆ ನಾಡಿದ್ದರಲ್ಲಿ ಕಂಪನಿ ಸರಕಾರಕ್ಕೆ ತಲೆನೋವಾಗುವುದರಲ್ಲಿ ಸಂದೇಹವಿಲ್ಲ... ಬಂಧಿಸಿ ಮರಣದಂಡನೆ ನೀಡದಿದ್ದಲ್ಲಿ ಸರಕಾರದ ಬಗ್ಗೆ ಪ್ರಜೆಗಳ ವಿಶ್ವಾಸ