ಪುಟ:ಅರಮನೆ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ನಿನಗೆ ಜಗಲೂರವನ ನಿಜ ಸಂಗತಿ ತಿಳದಂಗಿಲ್ಲ. ಆಕೆ ಬಲು ಕುಕ್ಕುಲಾತಿ ಹೆಣ್ಣು ಮಗಳಯಾಳ.. ಆಕೆಯ ಹೊಟ್ಟೆಯೊಳಗೆ ಸಾವುದ ಗಾವುದ ವುದ್ದದ ಕರುಳಯ್ಕೆ.. ಆಕೆಯ ಯದೆಯೊಳಗೆ ಭೂಮಿತೂಕದ ರುದಯ ಅಯ್ಕೆ.. ದುಕ್ತ ಮಾಡೋರ ಕಣ್ಣೀರು ವರಸುತಾಳ.. ಹೆಗಲಿಗೆ ಹೆಗಲು ಕೊಡುತಾಳ.. ಬಗಲಿಗೆ ಬಗಲು ಕೊಡುತಾಳ.. ನಮ್ಮ ಯಜಮಾನಿ ಬೇಯಿನ ಮರದವ್ವನ್ನ ತನ್ನ ತವರೂರಿಂದ ತಂದು ನೆಟ್ಟಿಲ್ಲಿ ಪಾಲಿನ ಪೋಷಣೆ ಮಾಡಿದಾಕಿ ತಾನಿದ್ದಾಳ.. ನಮ್ಮಂಥ ಗಿಡ ಮರಗಳಂದರ ಆಕೆಗೆ ಪಂಚ ಪ್ರಾಣ ಕಣತಾಯಿ, ಆಕೆ ಯಿರದಿದ್ದಲ್ಲಿ ನಾವೆಲ್ಲರು ಯಂದೋ ಸರುವ ನಾಸಣ ಆಗುತಿದ್ದೆವು. ಅಂಥಾಕೀನ ಬೇಬಿಷ್ಟೆ ಮಾಡಿದಲ್ಲಿ ಲೋಕ ಯೇನಂದೀತು.. ಅದಕ ಆಕೀನ ಬಲಗಣ್ಣಿಂದ ನೀನು ನೋಡಲಕ ಬೇಕವ್ವಾ” ಯಂದು ಪರಿಪರಿಯಿಂದ ಬೇಡಿಕೊಂಡಿತಂತೆ. ಆದರ ತಾಯಿ ರುದಯ ವಂಥಟಗಾದರೂ ಕರಗಿ ತೊಟ್ಟಿಕ್ಕಲಿಲ್ಲವಂತೆ.. ಬ್ಯಾಡ ಅಂದರೆ ಬ್ಯಾಡ ಅಂತ ನಿಷು«ರದಿಂದ ಹೇಳಿದಳಂತೆ.. ಮತ ಮತ್ತ ರಾಯಭಾರಿಯು ರುಕ್ಷೇ ರಕ್ಷತಿ ರಕ್ಷಿತಃ ಅಂತ ಹಿರೇರು ಹೇಳುತಾರವ್ಯಾ. ಮತ್ತೊಮ್ಮೆ ಯೋಚನ ಮಾಡು” ಯಂದು ಕೇಳಿಕೊಂಡಿತಂತೆ. ಸಹವರಿಯಾಗಿ ಬಂದಿದ್ದ ಸಾಲುಮರದವನೂ ಜಗಲೂರವ್ವನ ಪರಗಟ್ಟಿ ಹೇಳಿದಳಂತೆ.. ಆದರ ಮಾತಾಯಿ ಜುಮ್ಮನ್ನಲಿಲ್ಲವಂತೆ. ಆಗ ಬೇರಪ್ಪ ನಿನ್ನಿಷ್ಟ ತಾಯಿ, ನೀನು ಲೋಕಗ್ನಾನವುಳ್ಳಾಕಿ, ನಿನಗ ಯದರುತ್ತರ ಕೊಡೋ ಸಗುತಿ ನನಗಿಲ್ಲ.. ಯಿದ್ದದ್ದು ಯಿದ್ದಂಗ ನಮ ಬೇಯಿನ ಮರದವ್ವಗ ಹೇಳುತೀನಿ.. ಆಕಿ ಬಲ.. ನೀನು ಬಲ.. ಸರಣು” ಯಂದು ವಾಪಾಸಾತಂತೆ.... ಬೇರಪ್ಪ ಹೇಳಿದ್ದು ಕೇಳಿ ಬೇಯಿನ ಮರದವ್ವ ಮಮ್ಮಲ ಮರುಗಿದಳಂತೆ. ಬರೋದು ಬರಲಿ ಯಂದು ನಿಲ್ದಾರ ಮಾಡಿದಳಂತೆ. ಜಗಲೂರೆವ್ವ ಲವುಕಿಕ ಲೋಕದ ಸರಣೆದಾಳ, ಮೇಲಾಗಿ ಮಾ ಪತಿವುರೊತೆ ಅದಾಳ.. ಪತಿವುರೊತಾ ಧರುಮದ ಮುಂದ ದಯವಿಕ ಸಕ್ತಿಯೇನೂ ಅಲ್ಲ. ಬೇಯಿನ ಮರದವ್ವ 'ತಾಯಿ ಜಗಲೂರವ್ವ. ನೀನು ಅನುಗಾಲ ನನ್ನ ನೆಳೊಳಗ ಯಿದ್ದು ಕಳ್ಳವ್ವಾ.. ನೀನು ಗುಡುಲು ಹಾಕ್ಕೋತೀನಂದರ ನಾನು ನನ್ನ ಕೊಂಬೆ ರೆಂಬೆ ಸೊಪ್ಪು ಸೆದೆ ಕೊಡುತೀನಿ, ವಲೆ ವುರುವಲಿಗೆ ಕಟ್ಟಿಗೆ ಕೊಡುತೀನಿ.. ನೀನು ಹೇಳಿದಂಗ ಕೇಳಬೇಕಂತ ನನ್ನ ಮ್ಯಾಲ ವಾಸ ಮಾಡುತಿರೋ ಸಕಲೊಂದು ಪಕ್ಷಿಗಳಿಗೆ ಹೇಳುತೀನಿ ಯಂದು ಹೇಳಿದಂಗಾಗಲು ನಿದ್ದೆಯೊಳಗಿಂದ ಸಡನ್ನ ಯದ್ದು ಕೂತಳು ಜಗಲೂರವ್ವ. ಯಂಥ ಕನುಕರದಾಕಿ ಕನವ್ವಾ ಯಂದು ಮರದ