ಪುಟ:ಅರಮನೆ.pdf/೭೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦೦ ಅರಮನೆ ಪೀಡಿಸತೊಡಗಿದೊಡನೆ ಮನೋ ವಂಛಣ ವಿವೇಚನೆ ಕಳೆದುಕೊಂಡ. ಅವನು ಹಿಂದೆಂದೋ ಸಲ್ಲಿಸಿದ್ದ ಡಾಕ್ಟರಿನ್ನನ್ನು ಕುಂಪಣಿ ಸರಕಾರದ ವರಿಷ್ಟರು.. ಮುಖ್ಯವಾಗಿ ಹೆಸ್ಟಿಂಗ್ಯೂ... ವೆಲ್ಲೆಸ್ಲಿ... ಯಾವ ರೀತಿ ವಜಾ ಮಾಡಿದ್ದರೋ.. ಆ ರೀತಿ ಯಿವಯ್ಯನು ಯಡಗಯ್ಯಂದ ಆ ತುತ್ತನ್ನು ತಳ್ಳಿದೊಡನೆ.... ಯಡ ಬಲಕ ನಿಂತಿದ್ದ ನೂರಾರು ಮಂದಿ 'ಅಯ್ಯೋ ನತದ್ರುಷ್ಟ ಮಂಡ್ರಯ್ಯಾ... ಯಿನ್ನು ನಿನಗಾರು ದಿಕ್ಕು? ನಿನ್ನ ಶೇಷಾಯುಷ್ಯವನ್ನು ನಿನ್ನ ಕಯ್ಯಾರ ನೀನೇ ಮಣ್ಣು ಪಾಲುಮಾಡಿ ಬಿಟ್ಟೆಯಲ್ಲ.” ಯಂದನಕಂತಲೇ ಮಣ್ಣನೆಲದ ಮೇಲೆ ವುರುಳುರುಳಿ ಬಿದ್ದಿದ್ದ ಅನ್ನದ ಅಗುಳುಗಳನ್ನು ಮುತ್ತು, ರತುನ, ವಜ್ರ ವಯಢರವೇನೋ ಯಂಬಂತೆ ಪರಿಭಾವಿಸಿ ಆಯ್ದುಕೊಂಡು ತಮ ತಮ್ಮ ಬಾಯೊಳಗಿಟ್ಟುಕೊಳ್ಳಲಾರಂಭಿಸಿದೊಡನೆ.. ಮುಗಿಲಿಗೆ ಮುಖ ಮಾಡಿ ಮಳಿಡಲಾರಂಭಿಸಿದ ನಾಯಿ ನರಿಗಳೆಷ್ಟೋ? ಭೂ ಮಾಪನ ಕರಚಾರಿಗಳಂತೆ ಹಾರಾಡಲಾರಂಭಿಸಿದ ಹದ್ದು, ರಣಹದ್ದುಗಳೆಷ್ಟೋ? ಪಿತುರುಣಮೋ..? ಪಿಂಡದ ಕೂಳೋ? ಯಂಬಂತೆ ನಿಂತಿದ್ದ ಮಂಡ್ರಯ್ಯನತ್ತ ನೋಡುತ್ತ ಕಾss ಕಾss ಯಂದು ರುಣವಿಮೋಚನಾ ಮಂತ್ರಜಪಿಸಲಾರಂಭಿಸಿದ ಕಾಗೆಗಳೆಷ್ಟೋ...? ಮುದುಕಿ ಕ್ರಮೇಣ ತನ್ನ ಸರೀರದಾಕಾರವನ್ನು ಕಿರಿದುಗೊಳಿಸಿ ಮೂಲಸ್ಥಿತಿಗೆ ತಂದುಕೊಂಡಿತು.. “ಮುಂದಿನ ಜನುಮದಲ್ಲಿ ನಿನ್ನ ಹೊಟ್ಟೇಲಿ ಹುಟ್ಟಲಿರೋ ನನ್ನನ್ನು ಅದೆಂಗ ಸಂಬಾಳಿಸುತ್ತೀಯೋ ಯಂದು ಕಣೋಟ ಮಾತ್ರದಿಂದ ನುಡಿಯಿತು. ಮಂದಿ ಕಡೆ ತಿರುಗಿ... - “ಮಕ್ಕಳಾ.. ಮುಂದಿನೇರುಪಾಟು ಮಾಡಿರಪ್ಪಾ.. ನೀವ್ಯಾರೂ ಅಳೋಗಬಾರದss ಮತ್ತಾss.” ಯಂದು ಹೇಳುತ್ತ.... ಅದರ ನಾಲಗೆ ಮ್ಯಾಲ ಕುಂತಿದ್ದವರು ಯಾರೋ? ಕಾರಣಿಕವನ್ನೆಲ್ಲ ನುಡಿಸಿದವರು ಯಾರೋ? ಸನಾತನತೆಯ.. ಲೋಕಾರೂಢಿ ಮಾಲಿನ್ಯ ಗಲೀಜಿನ ವಿಶೇಷ ಸಂಚಿಕೆಯಂತಿದ್ದ ಮುದುಕಿಗೂ.. ಆಧುನಿಕತೆಯು ವಿಶೇಷ ಪುರವಣಿಯಂತಿದ್ದ ಮನೋಗೂ ನಡುವೆ ಯಾವ ಅವಿನಾಭಾವ ಸಂಬಂಧವಿತ್ತೋ? ಹಳಸಿದ ಅನ್ನದೊಳಗೆ ಯಾವ ಹಕೀಕತ್ತಿತ್ತೋ? ತಾನು ಅಪ್ಪಿಕೊಳ್ಳಲಿರುವ ಮಣ್ಣು ಪತ್ತಿಕೊಂಡದ್ದೆಂದು ಮನೋ ಖಂಡಿತ ಭಾವಿಸಿರಲಿಲ್ಲ.. ತನ್ನ ಕಣ್ಣೆಳಗೆ ಬೀಡು ಬಿಟ್ಟಿದ ಯಂಜಲೆಯ ಛಾಯಾ