ಪುಟ:ಅರಮನೆ.pdf/೭೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦೮

ಅರಮನೆ

ಹೇಳಿಕೊಂಡವರಿಗೆ ಸಿಗುತಲಿದ್ದ ಗವುರವವೇನು? ಮಾನಮರುವಾದಿಯೇನು? ಯೀ ಪ್ರಕಾರವಾಗಿ ಕುದುರೆಡವುಯಂಬ ಪದವು ಕುಂತಳ ಸೀಮೆಯನ್ನು ಯೇಕ ಪ್ರಕಾರವಾಗಿ ಆಳುತಲಿದ್ದುದನ್ನು ವರಣನ ಮಾಡಲಕ ಆದಿಶೇಷನೇ ಬೇಕು ಸಿವನೇ.....

ಕುದುರೆಡವು ಸಂಸ್ಕರಣ ಮಾಡದಿದ್ದರಲ್ಲಿ ತಮ್ಮ ಮನೆಯೊಳಗ ತಿಕ್ಕಡಿಕಾಣಿಸಿಕೊಳ್ಳುವುದೋ? ಬೇಯುತ್ತಲೇ ಬಾನಲ್ಲಿ ಹಳಸಿ ಬಿಡುವುದೋ? ಕುಡಿವ ನೀರೊಳಗೆಲ್ಲಿ ಹುಳಕಾಣಿಸಿಕೊಳ್ಳುವವೋ? ತಮ್ಮ ಮನೆಯೊಳಗಿನ ಬಸುರಿಯ ಬಾಣಂತನ ಸುಸೂತ್ರವಾಗಿ ಆಗುವುದೋ ಯಿಲ್ಲವೋ? ತಮ್ಮ ಶತ್ರುಗಳಿಂದ ತಾವೆಲ್ಲಿ ಹತರಾಗುವೆವೋ? ರೋಗ ರುರ್ಜಿಣಿಗಳಿಗೆಲ್ಲಿ ತುತ್ತಾಗುವಮೋ? ತಮ್ಮ ಬೆಳೆ ತಮ್ಮ ಕಯ್ದ ಹತ್ತುವುದೋ ಯಿಲ್ಲವೋ? ಹೆಣ್ಣುಹುಟ್ಟುವಲ್ಲಿ ಗಂಡು ಹುಟ್ಟಿದರೇನು ಗತಿ? ಗಂಡು ಹುಟ್ಟುವಲ್ಲಿ ಹೆಣ್ಣು ಹುಟ್ಟಿದರೇನು ಗತಿ? ಸಾಲ ಪಡದೋರು ಬಡ್ಡಿ ಸಮೇತ ಕೊಡುವರೋ ಯಿಲ್ಲವೋ? ಯಂಬಿವೇ ಮೊದಲಾದ ಅನುಮಾನಗಳಿಂದಾಗಿ ಕುದುರೆಡವು ಕಡೇಕ ಮಡಿಯುಡಿಯಿಂದ ಬರಿಗಾಲೀಲೆ ನಡಕೊಂಡು ಹೋಗುತಲಿದ್ದವರು ವಬ್ಬರಾ ಯಿಬ್ಬರಾ... ವುಪಾಸ, ವನುವಾಸ, ಮವುನ ರೋತಾರೂಢರಾಗಿ ಹೋಗುತಲಿದ್ದವರು ವಬ್ಬರಾ.. ಉಬ್ಬರಾ. ಯೀ ಭಕುತಾದಿ ಮಂದಿಯ ದಟ್ಟಂಡಿ ದಾರಂಡಿ ಅಲೆದಾಟದ ಪರಿಣಾಮವಾಗಿ ಕುದುರೆಡವು ಕಡೇಕ ಮೂಡಿದ್ದ ಕಾಲು ಹಾದಿಗಳು ನೂರಾರಿದ್ದವು.... ಬಂದು ಹೋಗುವ ಯಾತ್ರಾಕ್ಷಿಗಳ ದಣುವು ಪರಿಹಾರಾರವಾಗಿ ದಾರಿವುದ್ದಕ್ಕೂ ಅಗೋ ಅಲ್ಲೊಂದು ಛತ್ರ... ಗೋ ಯಿಲ್ಲೊಂದು ಛತ್ರ... ಅಗೋ ಅಲ್ಲಿ ಅನ್ನದಾನ, ವಸ್ತ್ರದಾನ, ಯಿ ಯಿಲ್ಲಿ ಪಾನಕ ಅರವಟ್ಟಿಗೆಗಳು. ಅಗೋ ಅಲ್ಲಿ ಸಂಕೀರನ, ಯಿಗೋ ಯಿಲ್ಲಿ ಪುರಾಣ ಪುಣ್ಯ ಶ್ರವಣ... ಅಗೋ ಅಲ್ಲಿ ಯವರ ಮಂತ್ರೋಳಗೆ ಅವರು ಕಾಣಿಸಿಕೊಳ್ಳುತ್ತಾರೆ... ಯಿ ಯವರ ಮಂತ್ರೋಳಗೆ ಅವರು ಕಾಣಿಸಿಕೊಳ್ಳುತ್ತಾರೆ.. ಕಾಣಿಸಿಕೊಂಡವರು ಯಾತ್ರಾಕ್ಷಿಗಳ ಚಿಗದೊಡ್ಡಪ್ಪ ಮಾವ ಅತ್ತಂದಿರಾಗಿರಬಹುದು.. ಹಂಪಜ್ಜ ಗೊಲ್ಲಲೀರಯ್ಯ ಗೊಂಜಾಡಲರಡವಯ್ಯ, ಬಟಾಬಯಲವ್ವ ಮುಗುಲಯ್ಯ, ಬತ್ತಲವ್ವಂದಿರ ಆತುಮಗಳಾಗಿರಬಹುದು.. ಆ ಆತುಮಗಳೊಡ೦ಬಡಿಕೆಯಿಂದಾಗಿ ಅಕ್ಷರಸ್ಥರು ಅನಕ್ಷರಸ್ಥ ರಾಗುತಲಿದ್ದುದೋ? ಅನಕ್ಷರಸ್ಥರು ಅಕ್ಷರಸ್ಥರಾಗುತಲಿದ್ದುದೋ? ಅಳುಬುರುಕರು