ಪುಟ:ಅರಮನೆ.pdf/೭೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧೨

ಅರಮನೆ

ಥಲಿ ಮ್ಯಾಲ ಕುದುರೆಡವೆಂಬ ಪಟ್ಟಣ, ಆ ಪಟ್ಟಣದ ಥೈಲಿ ಮ್ಯಾಲ ಕೂಕಂಡು ಅಟ್ಟಹಾಸಗಯ್ಯುತಲಿದ್ದ ಸಾಧು ಸಂತಾವಧೂತ ಮಂದಿ ವಬ್ಬಿರಾ ಯಿಬ್ಬರಾ.. ರಣ ಮಹಲ ಬಯಲೊಳಗೆ ಸಲ್ಲೇಖನಾ ರೊತಾರೂಢನಾಗಿ ಆ ರೂಢ ಪದವೀನ ಗಿಟ್ಟೆಯಿಸಿಕೊಂಡಿದ್ದ ಸುಡುಗಾಡೆಪ್ಪಾಧೂತ. ತಾನು ಯಾವುದನ್ನು ವಾಹನ ಮಾಡಿಕೊಂಡು ಆಗಮಿಸಿದ್ದನೋ ಅದೇ ಮೋಟುಗೋಡೆಯೊಳಗ ಅಂತಸ್ಥಾನಗೊಂಡಿದ್ದಂಥ ನಾಗಲಿಂಗ ತಾತ, ತನ್ನ ವಾಹನವಾದ ಹುಲಿಸಯ್ಯ ನೆಲದೊಳಗ ಯಿಂಗಿ ಹೋದ ಕಾಡುಸಿದ್ದಪ್ಪ ತಾತ, ಕಂಬಳಿ ಕೆಳಗಡೆ ಗಪ್ಪಂತ ಮಾಯವಾಗಿದ್ದ ಗೂಳ್ಳಾದ ಗಾದಿಲಿಂಗಪ್ಪ ತಾತ, ಯಿವರೊಂದೇ ಅಲ್ಲದೆ ಕರಡಿ ಗುಡ್ಡದ ಮಂಗಮ್ಮವ್ವ ವುಪಾಸತ್ವ ವನುವಾಸವ್ವ ತಂಗಳವ್ವ ತಿಂಗಳವ್ವಂದಿರೇ ಮೊದಲಾದ ಸರಣ ಸರಣೆಯರ ಸಮಾಧಿಗಳು ಅಗೋ ಅಲ್ಲಿ.. ಯಿಗೋ ಯಿಲ್ಲಿ.. ಅವಿವಕ್ಕೆಲ್ಲ ಕಳಸವಿಟ್ಟಂತೆ ಯಂಜಲೆಲೆ ಯಲ್ಲಮ್ಮಾಯಿ ಸದರೀ ಪಟ್ಟಣದೊಳಗ ಅಂತರಾನಗೊಂಡಿರುವ ಸಂಗತಿಯು.. ಅವರೊಟ್ಟಿಗೆ ಆಡಿದ ಬಾಯಿಗಳು, ಕೇಳಾಡಿದ ಕಿವಿಗಳು, ಪೇಟ, ರುಮಾಲು, ಜಡೆ, ಗಡ್ಡ ನೇವರಿಸಿದ ಕಯ್ಯಗಳು... ಲಚುಮವ್ವನ ತೋಪಿನ ತನಕ ಅಡ್ಡಾಡಿದ ಕಾಲುಗಳು.. ಅವರನ್ನೆಲ್ಲದ ಶಿವರಿಯದೆ ನೋಡಿದ ಕಣ್ಣುಗಳು, ಬಿಟ್ಟೆಂಜಲುಂಡ ಬಾಯಿಗಳು.. ರೋಮಾಂಚನಗೊಂಡಿದ್ದ೦ಥ ಮಂತ್ತೊಗಲುಗಳಿವೇ ಮೊದಲಾದ ಅಂಗೋಪಾಂಗಗಳು.. ಯಿವುಗಳೊಂದೇ ಅಲ್ಲದ ಕೇರಿಸೇಷರುಪಯೋಗ ಮಾಡಿ ಬೀಸಾಡಿದ ಲೋಟ, ತಳಿಗೆ, ತಾಟು, ಬೆತ್ತ, ಬಾಚಣಿಗೆ, ಸೀರುಣಿಗೆ, ಗುಡುಗುಡಿ ಸೇದೆಸೆದ ಚಿಲುಮೆಗಳು, ಹೆಂಡ ಕುಡಿದೆಸೆದ ಮಗಿ ಕುಡಿಕೆಗಳು, ಅಂಗಿ, ಚಲ್ಲಣ, ಕಾಚ, ಗುಂಡಿ, ಕಾಲ್ಕರಿ ಯವೇ ಮೊದಲಾದ ನಸ್ವರವಸ್ತು ಯಿಸೇಷಗಳೂ ದಝಿಕ ಸ್ಥಾನ ಮಾನವನ ಪಡಕೊಂಡು ಬಿಟ್ಟಿದ್ದವು ಸಿವನೇ.. ಅವರಿವರು ಯಿವರವರ ಸರೀರಗಳನು ಕಬ್ಬಾ ಮಾಡಿಕೊಂಡು ಪ್ರಕಟವಾಗುತಲಿದ್ದುದೇನು? ತಾನು ಪಲಾನ ಯಿಂಥಾತನೆಂದು ಸಾರಿ ಹೇಳುತಲಿದ್ದುದೇನು? ವಂದೊಂದು ಸಮಾಧಿ ಸುತ್ತಮುತ್ತ ಯೇಳುತಲಿದ್ದ ಪ್ರಹರಿ ಗೋಡೆಗಳೇನು? ಅವರಿವರಿಗೆ ಯಿವರವ ಪಂಗಡಗಳು ಹುಟ್ಟಿಕೊಳ್ಳುತಲಿದ್ದುದೇನು? ಅಹರಿಶಿ ಪೂಜೆ ಪುನಸ್ಕಾರ ನಡೆಯುತಲಿದ್ದುದೇನು? ಯಿಡೀ ಪಟ್ಟಣದ ತುಂಬೆಲ್ಲ ದೂಪದೀಪ ಲೋಬಾನದ ಹೊಗೆ ದಟ್ಟಯಿಸುತಲಿದ್ದುದೇನು? ತಮ್ಮೊಂದೊಂದು ಕಾಯಿಲೆ, ಕಸಾಲೆ ಕಷ್ಟ ಕಾರಣೇವುಗಳ ನಿವಾರಣಾರ ಸಲುವಾಗಿ, ತಮ್ಮ ತಮ್ಮೆದೆಗಳೊಳಗೆ ಚಕ ಚಕನೆ