ಪುಟ:ಅರಮನೆ.pdf/೭೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೪ ಅರಮನೆ ಮನೋಭಿಷ್ಟಂಗಳನು ಊಡೇರಿಸಲಿ.. ಅಂಥವರ ನವಚಿರಂಜೀವಿಗಳು ಸಾರ್ವಕಾಲಿಕವಾದ ಆರೋಗ್ಯದಿಂದ ನೂರು ಕಾಲ ಬಾಳಿ ಬದುಕಲಿ.. ಕುಬೇರನ ಐಶ್ವರ್ಯ ಪ್ರಾಪ್ತವಾಗಲಿ.. ಬ್ರಹುಸ್ಪತಿಯ ಪಾಂಡಿತ್ಯ ಲಭಿಸಲಿ.. ರೂಪ ಲಾವಣ್ಯ ಸವುಂದರ ಸವುಕುಮಾರಾಧಿಗಳಿಗೆ ವಡೆಯರಾದ ಅಶ್ವಿನಿ ದೇವತೆಗಳು ವಲಿಯಲಿ.. ಮೋದಿದ ತಂದೆ ತಾಯಿಗಳ ಮಕ್ಕಳು ಸಂಪತ್ತಿನಿಂದೊದಗೂಡಿ ಸುಕ್ಲಪಕ್ಷದ ಬಿದಿಗೆಯ ಚಂದ್ರಾಮನಂತೆ ವರಿಷ್ಣುಗಳಾಗಲಿ.. ಮೋದುವ ಭ್ರಮಾಚಾರಿಗಳಿಗೆ ಮದುವೆಯಾಗುವ ಬವಕೆ ಮೂಡಿ ಕುಲರೂಪ ಗುಣ ಚಾರಿತ್ರ್ಯವುಳ್ಳ ಕನ್ಯಯರು ಪಾಣಿಗ್ರಹಣವಂ ಮಾಡುವಂತಾಗಲಿ.. ಸುಪುತ್ರ ಪುತ್ರಿಯರನ್ನು ಪಡೆವಂತಾಗಲಿ.. ಸಿವ ಸಂಕರ ಮಾದೇವಾ......... ಯೊ ನವೀನ ವಚನ ಕ್ರುತಿಯಲ್ಲಿ ಶಬ್ದಾರಗಳೊಳ್ ಬುದ್ದಿ ಪ್ರಮಾದದಿಂದ ಬಂದ ನ್ಯೂನಾಧಿಕ ಭಾವ ಯಿದ್ದಲ್ಲಿ ಸಕಲ ಕಲಾಭಿಜ್ಞರಾದ ಲೇಖಕ, ವಾಚಕರು ತಿದ್ದಿ ಮೋದುತ್ತ ದೋಷವನ್ನೆಣಿಸದೆ ಗುಣವಂ ಕಂಡು ಆನಂದವಂ ಪಡುವುದು. ಆಸೀರುವಾದವಂ ಮಾಡುವುದು ನಂಬಲ್ಲಿಗೆ ಹೂ ಅರಮನೆಯಂಬ ಅಯ್ತಿಹಾಸಿಕ, ಪವುರಾಣಿಕ, ಸಾಮಾಜಿಕ ಕಥಾನಕವು ಪರಿಸಮಾಪ್ತಿಯಾದುದು ಸಿವ ಮಂಗಳಂ ನಿತ್ಯ ಸುಭ ಮಂಗಳಂ..