ಪುಟ:ಅರಮನೆ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ಅರಮನೆ ಮುಗಿದ ಮಾಲ ಯಷ್ಟು ಹದಗೆಟ್ಟಿತೆಂದರೆ ವಂದಿಮಾಗದವರಿಗೆ, ರಾಜನರಕಿಯರಿಗೆ ಭಕ್ಷೀಸು ಕೊಡಲಾರದಷ್ಟು ಹದಗೆಟ್ಟುಬಿಟ್ಟಿತ್ತು. ದುಬಾರಿಯ ಸತ್ತುಸಾರ ಯಾಗ ಮಾಡಬೇಕೆಂಬ ಯಿರಾದೆ ರಾಜ ಕದಿರೆ ನಾಯಕನಿಗೆ ಖಂಡಿತ ಯಿರಲಿಲ್ಲ.. ಆಸ್ಥಾನ ಪುರೋಹಿತರಾದ ವಸಂಕರ ಸಾಸ್ತ್ರಿಗಳು ತಮ್ಮ ಬಂಧು ಬಳಗ ನೆಂಟರಿಷ್ಟರ ಜೀವನದ ಜೀರೋದ್ದಾರ ಮಾಡುವ ಸಲುವಾಗಿ ಯಿಂಥದೊಂದು ಸಲಹೆಯನ್ನು ತಮ್ಮ ನಾಯಕನ ಮುಂದಿಟ್ಟು ಅದರಿಂದಾಗುವ ಲವುಕಿಕ ಪ್ರಯೋಜನಗಳನ್ನು ಯಿವರಿಸಿ ವಪ್ಪುವಂತೆ ಮಾಡಿದ್ದರು. ದ್ವಾಪರಯುಗದಲ್ಲಿ ಪಾಂಡವರು ಮಾಡಿದ್ದ ರಾಜಾಸೂಯಯಾಗಕ್ಕೆ ಸರಿಸಮನಾದ ಸತ್ರುಸವಾರ ಯಾಗ ಯಂದರ ಸಣ್ಣ ಬಾಬತ್ತಿನದೇನು? ನವರಾತ್ರಿಗಳುದ್ದಕ್ಕೂ ನಡೆದ ಯಾಗಕ್ಕೆ ಯಷ್ಟು ಖಾಯಿತು? ಯೇನು ಕಥಿ? ಸಾವಿರದಾವಂದು ಬ್ರಾಹ್ಮಣರಿಗೆ ಧನಕನಕ ವಸ್ತಗಳನ್ನು ದಾನ ಮಾಡಲಾಯಿತಲ್ಲದೆ ಭೂರೀ ಭೋಜನದ ಯವಸ್ಥೆಯನ್ನು ಕಂದನೂಲು ಸ್ವೀಕರಾಚಾದ್ಯರ ನೇತ್ರುತ್ವದಲ್ಲಿ ಮಾಡಲಾಗಿತ್ತು. ಅಂದ ಮೇಲೆ ಹಣ ಕಾಸಿನ ಪರಿಸ್ಥಿತಿ ಚಿಂತಾಜನಕವಾಗದಿದ್ದೀತೇನು? ಭಕ್ಷೀಸು ಕೊಡೋ ಯಿಷಯದಲ್ಲಿ ರಾಜ ಕಯ್ಯ ಹಿಡಿದಿದ್ದರಿಂದಾಗಿ ವಂದಿಮಾಗಧರು ಹೊಗಳೊ ಯಿಷಯದಲ್ಲಿ ಗಂಟಲು ಬಿಗಿದರು. ರಾಜನರಕಿಯರು ರಾಜನಲ್ಲಿ ಹರೆಯ ಮರುಕಳಿಸುವಂತೆ ನೃತ್ಯ ಮಾಡದಾದರು. ಆಡೋ ಹುಡುಗರು ಸುಲಭವಾಗಿ ಯತ್ತಬಹುದಾದಷ್ಟು ಅರಮನೆಯ ತಿಜೋರಿಯು ಹಗುರಾಗಿಬಿಟ್ಟಿತ್ತು. ಯಿದೆಲ್ಲ ಯಂದಿನಂತೆ ಸಾಂಗೋಪಸಾಂಗವಾಗಿ ನಡೆಯಬೇಕಾದರೆ ತಾನು ಹೆಂಗಾದರೂ ಮಾಡಿ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವಂತೆ ಮಾಡಬೇಕು.. ಗುತ್ತಿಗೆ, ತೆರಿಗೆಗಳಿತ್ಯಾದಿಗಳನ್ನು ದುಪ್ಪಟ್ಟು ಮಾಡಬೇಕೆಂದರೆ ರಾಜ್ಯದೊಳಗೆ ಸಕಾಲಕ್ಕೆ ಮಳೆ ಬೆಳೆ ಆಗದ ಕಾರಣದಿಂಗಾಗಿ ಪ್ರಜೆಗಳು ವಂದೊತ್ತು ವುಂಡು, ವಂದೊತ್ತು ವುಪಾಸಯಿರುವರು. ಕುಂತಳ ಸೀಮೆಯೊಳಗಿರುವಂಥ ಯಲ್ಲಾಪ್ರಕೊರಚರಟ್ಟಿಯು ತಮ್ಮ ರಾಜ್ಯದೊಳಗಿಲ್ಲ. ಹಿಂದೆ ಪಡೆದಿರುವುದನ್ನು ಬಡ್ಡಿ ಸಮೇತ ಚುಕ್ತಾ ಮಾಡದ ಹೊರತು ಕುಂಪಣಿ ಸರಕಾರವು ವಂದು ದಮ್ಮಡಿಯನ್ನೂ ನೀಡುವುದಿಲ್ಲ.. ಯಂದು ರಾಜ ಕದಿರೆಪ್ಪನಾಯಕ ಚಿಂತಿಸಿ ಕಳವಳಗೊಂಡನು. ಬಲಿಪಾಡ್ಯದ ಮಿಶೇಷ ಪೂಜೆ ಮಾಡಲಕೆಂದು ಬಂದಿದ್ದ ಸಿವಸಂಕರ ಸಾಸ್ತ್ರಿಗಳನ್ನು ಯೇಕಾಂತಕ್ಕೆ ಬರಮಾಡಿಕೊಂಡು ಯಲ್ಲಯಿವರಿಸಿ ಅರಮನೆಯ ಹಣಕಾಸಿನ ಪರಿಸ್ಥಿತಿ ಹದಗೆಡಲು ಕಾರಣಕತ್ತರಾದ ನೀವೇ ಹಣ ಹರಿದು