ಪುಟ:ಅರಮನೆ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಮಾಡುವವರಿಲ್ಲ... ನೀನು ಪಡಕೊಂಡು ಬಂದಿರೋದೇ ಯಿಷ್ಟು ಕನವ್ವಾ.. ನೀನು ಹ್ಯಾದ ಜೆಲುಮದಲ್ಲಿ ಮಾಡಿರೋ ಕರುಮವನ್ನು ಯೀ ಜುಮದಲ್ಲಿ ತೀರಿಸಬೇಕಯ್ಯವ್ವಾ.. ನೀನು ಬಲ, ನಿನ್ನ ಗಂಡ ಬಲ ಕನವ್ವಾ... ಮೂರೊಳಗಿದು ಕೊಂಡು ವನವಾಸ ಅನುಬೋಸವ್ವಾ. ಮಂದಿ ನಡುವೆ ಯಿದುಕೊಂಡು ಅಗಾತ ವಾಸ ಅನುಭೋಸವ್ಯಾ. ನಿನ್ನ ಸರೀರದೊಳಗೆ ಮೋಬಯ್ಯ ಅದಾನಂದರ ಅದಾನವ್ವಾ. ಯಲ್ಲಾಂದರ ಯಿಲ್ಲಕನವ್ವಾ.. ನಿನಗೂ ಅವಗೂ ನಡುವೆ ಅಲವುಕಿಕ ಮಾಯ ಮುಸುಕಮ್ರವ್ಯಾ. ಅದು ಕರಗದ ಹೊರತು ನಿನ್ನ ಕಣ್ಣೆಳಗಿನ ವುದುಕ ಬತ್ತೋದಿಲ್ಲವ್ವಾ.. ಮುಂದ ವಂದಲ್ಲಾ ವಂದಿವಸ ಗಂಡ ಹೆಂಡಿರು ವಂದಾಗುತೀರವ್ವಾ.. ಅಲ್ಲಿಗಂಟಾ ಜೀವ ಹಿಡಕಳ್ಳವ್ವಾ.. ಕಣ್ಣೀರು ಸುರಿಸಿ ಕಲ್ಲು ಕರಗಿಸವ್ವಾ.. ಕರುಣೆ ಹುಟ್ಟಿಸವ್ವಾ.. ಹಿಂಗ ವಬ್ದಬ್ಬರದು ವಂದಂದು ಮಾತು.... ಬೇಯಿನ ವರದವ್ವನ ಬುಡದಲ್ಲಿ ಜಗಲೂರೆವ್ವ ಮಲಗವಳಂದರ ಮಲಗವಳೆ, ಕಣ್ಣು ಮುಚ್ಚವಳಂದರ ಮುಚ್ಚವಳೆ.. ವಡಲೊಳಗೆ ಮಣ ಮಣ ಸಂಕಟ ತುಂಬಿಕೊಂಡಿರೋ ಆಕೆಯ ಕಣ್ಣಿಗೆ ಗಪ್ಪಂತ ನಿದುರೆ ಹತ್ತುವಲ್ಲದು.. ಚಣಚಣಕೊಂದಾವರಿ ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ ತನಗೆ ತಾನು ಮರುಗುತ ನಿಂದಿಸಿಕೊಳ್ಳುತ ರೆಪ್ಪೆಗೆ ರಪ್ಪ ಅಂಟಿಸೋದು, ತೆರೆಯೋದು ಮಾಡುತವಳೆ.. ಕಣ್ಣೀರು ಹನದೂ ಹನದೂ ನೆಲ ವಜ್ಜಲು ಮಾಡುತವಳೆ, ಸಿವಸಂಕರ ಮಾದೇವಾss. ಮಂದಿ ಯಂಬುವ ಮಂದಿ ತನ್ನನ್ನು ನಡೋ ನೀರಿನಾಗ ಕಯ್ಯ ಬಿಟ್ಟಾರ.. ಆದರ ಅನುಗಾಲ ದಿಕ್ಕುಗಳಿಗೆ ದಿಕ್ಕು ತೋರಿಸೂತ.. ಆಕಾಸ ಮಾರಗದಲ್ಲಿ ಮಿಣುಕು ಮಿಣಕು ಮಿನುಗೂತಲಿರುವ ಚುಕ್ಕಿಗಳಿಗಾರ ತನ ಮ್ಯಾಲ ಕನುಕರ ಯಿಲ್ಲದಂಗಾಯ್ತಲ್ಲ. ಅವುಗಳ ಮಾಲ ತಾನು ಬಿದ್ದು ಸಾಯುತಿದ್ದೆನಲ್ಲಾ.. ವಂದೊಂದು ಚುಕ್ಕಿನ ಮಾತಿನೇಣಿ ಯಿಂದ ಭೂಮಿಗಿಳಿಸಿಕೊಂಡು ಬಂದು ಕಥಿ ಕಟ್ಟಿ ಹೇಳುತ್ತಿದ್ದೆನಲ್ಲಾ.. ನೆಲ ಮುಗುಲ ನಡುವಿನ ದೂರ ಕಮ್ಮಿ ಮಾಡಿದ್ದೆನಲ್ಲಾ.. ತನಮ್ಯಾಲ ಅವುಕಾರsss.... ಹ್ಯಾಂಗ ಹೇಳುದು ಬರೋದೇ ತಾಯಿ S... ನೀನು ತಿಳಕೊಂಡಿರೋವಷ್ಟು ಭೂಮಿ ನಮಗ ಸನೇವಿಲ್ಲ.. ವಂದರ ಮುಂದ ಲಕ್ಷ ಸೊನ್ನೆಗಳನ್ನಿಟ್ಟರೆ ಯಷ್ಟಾಗತಯೋ ಅಷ್ಟು ದೂರ ಅದೀವಿ ಕನವ್ವಾ.. ನಮ್ಮ ಕಣ್ಣಿಂದ ವುದುರೋ ನೀರು ನೆಲಕ ತಗಲಲಕ ಯೋಸೋ ವರುಷ ತಗಂತಯ್ಕೆ ಕನವ್ವಾ.. ನಾವಾಡೋ ಮಾತು ನಿನ ಕಿವಿ ತಗಲಲಕ...