ಪುಟ:ಅರಮನೆ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ಅರಮನೆ ಪಟ್ಟಣವು, ಗದು ನೆಲದಡಿ ಆಯಿತೆಂದು ಹೇಳುತ್ತಾರೆ, ಬಿಸಳರಾಜನ ಚೊಚ್ಚಲು ಮಗ ಹಿರೇಬೊಮ್ಮಂತ ರಾಜನು ಹಲವು ಕಾಲ ಯಿರಲಾಗಿ ನರಪತಿ ವಮುಸಕ್ಕೆ ಅಳಿಯನಾಗಿದ್ದಂಥ ಮಲಕರಿ ನಾಯಕನು ಗುಡೇಕೋಟೆ ಯಿಮ್ಮಡಿ ಭದ್ರವ ನಾಯಕನಿಗೆ (ಅಂದರ ಬೀಗ ತಾನೆ ಕುಂಪಣಿ ಸರಕಾರಕ್ಕೆ ಸಾಲವಂದಿಗನಾಗಿರೋ ಜಗದೆಪ್ಪನಾಯಕನ ಗಿರಿಗಿರಿ ಮುತ್ತಾತನು) ಮದಕರಿ ಶೀಮೆಯ ವಳಿತವಾದ ಯೀ ಪ್ರದೇಶಕ್ಕೆ ಬಂದು ಬೀಡು ಬಿಟ್ಟಿದ್ದ ಸಮಯದಲ್ಲಿ ರುದ್ರಭೀಕರ ಕಣಸುಗಳನ್ನು ಕಂಡು ಯಿದು ಗಂಡುಮೆಟ್ಟಿನ ಭೂಮಿ ಯಿದ್ದಂಗಯ್ಯ ಯಂದು ವುದ್ದಾರ ಮಾಡಿದನು. ವಂದಾನೊಂದು ಕಾಲದ ಮಾತು. ಯೇ ಜಗೇವದಲ್ಲಿ ಸಿಮ್ಯವನ್ನು ನಾಯಿ ಅಟ್ಟಯಿಸಿಕೊಂಡು ಹೋಯಿತಿತ್ತಂತೆ.. ನಾಯೀನ ಮೊಲ ಅಟ್ಟಯಿಸಿಕೊಂಡು ಹೋಯಿತ್ತಂತೆ, ಮಾಗ್ವಾಲ ಅರಚಿದರ ಸಾಝಲ ಹೆದರಕಂತಿತ್ತಂತೆ. ಯಾರೂ ಯೀ ಪ್ರದೇಶಕ್ಕೆ ಸುಲಭವಾಗಿ ಬರಂಗಿರಲಿಲ್ಲ, ಬಂದೋರು ಹೊರ ಹೋಗಂಗಿರಲಿಲ್ಲ, ಯಿಲ್ಲಿಗೆ ಬರಲಕ ಹೆದರುತ್ತಿದ್ದರು, ಯಿರಲಕ ಹೆದರುತ್ತಿದ್ದರು, ಕಾರಣ ಸುತ್ತಮುತ್ತ ಪಂಚಪಾಂಡವರಂಗ ಅಯ್ಯು ಗುಡ್ಡಗಳಾದವ. ಅವು ಯಾವಪಾ ಅಂದರ ಯರಗುಡ್ಡ, ಕುರುಗುಡ್ಡ, ದ್ಯಾವರಗುಡ್ಡ, ಕೋಳಿಗುಡ್ಡ ಮತ್ತು ಬೂದಿಗುಡ್ಡ... ಯತ್ತರಕ, ಅಗಲಗಲಕ ಹಿಂಗ ವಂದೊಂದು ವಂದೊಂದು ನಮೂನಿ ಅದಾವ, ಯಿಂದರ ದಿಕ್ಕಿನಲ್ಲಿ ಕೆಂಪು ಕೆಂಪನೆಯ ಕಲ್ಲು ಗುಂಡುಗಳಿಂದ ವಟ್ಟರಿಸಿರುವ ಕಾರಣಕ್ಕದಕ ಯರಗುಡ್ಡ ಅಂಬುತಾರ, ದ್ವಾಪರಕಾಲದೊಳಗ ಕುಂತಿ ಅದ್ಭುನನನ್ನು ಪಡಕೊಂಡ ಮಾಲ ತನ್ನ ಬಾಯೊಳಗ ವುಳಕೊಂಡಿದ್ದ ಮಂತರವನ್ನು ದಬ್ಬನದ ಕಡೇಕ ವಗದಳಂತೆ, ಅದು ಯಿಲ್ಲಿಗೆ ಬಂದು ಬಿದ್ದು ಚಿಗಿತೂ ಚಿಗಿತೂ ಗುಡ್ಡದಾಕಾರ ಪಡಕಂತಂತೆ, ಮಂತರದ ವತ್ತಕ್ಷರಗಳೆಲ್ಲ ಕೋಡುಗಲ್ಲುಗಳಾದವಂತೆ, ಮಂತರದ ಸೊನ್ನೆಗಳೆಲ್ಲ ಕಲ್ಲುಗುಂಡುಗಳಾಗಿ ಮರಿ ಹಾಕುತಾ ಹಾಕುತ್ತಾ ಹೋದವಂತೆ, ಯಮದಿಕ್ಕಿನಗುಂಟ ಅಡ್ಡಾದಿಡ್ಡಿ ಮಲಕ್ಕಂಡಿರೋ ದೇವರಗುಡ್ಡದ ಮ್ಯಾಲ ಮಲ್ಲಿಕಾರುನ ಸೋಮಿಯು ಸೀಸದ್ಗದಿಂದ ಬಂದು ಮಣಿಮಲ್ಲಾಸುರನೆಂಬ ರಾಕ್ಷಸನನ್ನು ಸಮಾರ ಮಾಡಿದನಂತೆ, ಯಿನ್ನೊಂದು ದಿಕ್ಕಿನಗುಂಟಾ ಹೆಂಗ ಬೇಕಂದರ ಹಂಗ ಯಿರುವ ಕುರು ಗುಡ್ಡಕೆ ಆ ಹೆಸರು ಯಾಕ ಬಂತಪಾ ಅಂದರ ಅದಕ್ಕೆ ಬಂತೂ ಕನರಪ್ಪಾ, ದ್ವಾಪರ ಕಾಲದ ಗಾಂಧಾರಿ ತಾನು ಸಾಯೋಗಂಟ ಹಡಕಂತಾಲೇ ಯಿದ್ದ ಮಕ್ಕಳು ಅಲ್ಲಿ ಕಲ್ಲಾಗಿ ನಿಂತಾವಂತೆ,