ಪುಟ:ಅರಮನೆ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫೫ ಸರಿಸಾಟಿಯಾಗಿದ್ದನು. ಅವನಿಗೊಬ್ಬೇವಬ್ಬ ಮಗನಿದ್ದನು. ಹೆಸರು ಭಯವನಾಯಕ ಯಂಬುದಾಗಿತ್ತು. ನುಂಕೇಮಲೆ ಭಯವೇಶ್ವರನ ವರ ಪ್ರಸಾದ ಸಂಜಾತನೂ, ರೂಪದಲ್ಲಿ ಸ್ಪುರದ್ರೂಪಿಯೂ, ಕತ್ತಿವರಸೆಯಲ್ಲಿ ಅತುಲ ಪರಾಕ್ರಮಿಯೂ, ಕುದುರೆ ಸವಾರಿಯಲ್ಲಿ ನಿಸೀವನ ತಾನಾಗಿದ್ದನು. ರಣರಂಗದಲ್ಲಿ ಬಿರುಗಾಳಿಯಂತೆಯೂ, ಪ್ರೇಮ ಸಲ್ಲಾಪದಲ್ಲಿ ತಂಗಾಳಿಯಂತೆಯೂ ಸಂಚರಿಸುತಲಿದ್ದನು. ಅವನು ವಂದು ಕಡೆ ನೆಟ್ಟಗೆ ನಿಂತುದು ಯಿರಲಿಲ್ಲ, ವಂದು ಕಡೆಗೆ ಮಟ್ಟಗೆ ಕುಂತುದು ಯಿರಲಿಲ್ಲ. ನುಂಕೇಮಲೆ ದುರದ ಕಾನನದೊಳಗ ಕುದುರೆಯೊಂದು ಅಜೇಯವಾಗಿ ಅಂಡಲೆಯುತಲಿದ್ದಿತು. ಅದು ಕಮ್ಮಟ ದುರದ ಕೊಮಾರ ರಾಮನ ಕುದುರೆಯಾದ ಬೊಲ್ಲನ ವಮುಸಕ್ಕೆ ಸೇರಿದುದಾಗಿತ್ತು. ಗಂಡಸರಾದರೆ ತನ್ನನ್ನು ಹಿಡಿಯಲು ಬನ್ನಿ ಯಂದು ಕುಂತಳ ಪ್ರಾಂತದ ಯಲ್ಲಾ ರಾಜಕುಮಾರರ ಕಣಸುಗಳಲ್ಲಿ ಕಾಣಿಸಿ ಕೊಂಡು ಸವಾಲು ಹಾಕುತಲಿದ್ದಿತು. ಹಿಡಿಯಲೆಂದು ಬಂದ ರಾಜಕುಮಾರರ ಮೀಸೆಯನ್ನು ಹಣ್ಣಣ್ಣು ಮಾಡಿ ಮಣ್ಣಣ್ಣಿಸಿ ಪಲಾಯನ ಮಾಡಿಸುತಲಿದ್ದಿತು, ಭಯವನಾಯಕನು ಹೆತ್ತವರ ಆಸೀರುವಾದ ಪಡೆದು ಅದನ್ನು ಹಿಡಿಯಲೆಂದು ನುಂಕೇಮಲೆ ದುರಕ್ಕೆ ಬಂದ. ಹಗಲಿರುಳು ತಾಕಲಾಡಿ ಅದನ್ನು ಹಿಡಿದು ಪಳಗಿಸಿದ. ಅದಕ್ಕೆ ಜಟಾಯು ಯಂದು ನಾಮಕರಣ ಮಾಡಿದನು, ಆ ದಿವಸ ರಾತ್ರಿಭದ್ರವೇಸ್ವರ ಅವನ ಕಣಸೊಳಗ ಗೋಚರಮಾಡಿ ನಿನ್ನ ಕಯ್ಯ ವಸ ಆಗಿರುವಂಥಾ ಕುದುರೆಯು ಸಾಮಾನ್ಯವಾದುದಲ್ಲ ಕಂದಾ... ನಾನು ನನ್ನ ಹಣೆ ಬೆವರಿನಿಂದ ಅದನ್ನು ವುತ್ಪತ್ತಿ ಮಾಡಿರುವೆನು, ನೀನುಂಬುವುದನು ಅದಕ್ಕೆ ವುಂಬುಸು, ನೀನು ಕುಡಿಯುವುದನು ಅದಕೆ ಕುಡಿಸು, ಕಣ್ಣಳತೆ, ಕೂಗಳತೆಯೊಳಗ ಅದನು ಯಿಟುಕೊಂಡು ಸಾಕಿ ಸಲವು, ಅದು ಯಡವಿ ಕುಂಟು ಬಿದ್ದ ಜಾಗದಲ್ಲಿ ಅದರ ಜೀವ ಸಮಾಧಿ ಮಾಡು, ಸಾಮುರಾಜ್ಯ ಸ್ಥಾಪನೆ ಮಾಡು, ಯಂದು ಅಪ್ಪಣೆ ಕೊಟ್ಟನು. ಜನಿವಾರದಳ್ಳಿ ಅಗ್ರಹಾರದ ಪಂಡಿತ ಭೂಸುರೋತ್ತಮ ರಿಂದ 'ರಸಿಕ ಮನೋರಂಜನ' ಯಂಬ ಬಿರುದನ್ನು ಅಲಂಕರಿಸಿಕೊಂಡಿದ್ದಂಥ ಆ ರಾಜ ಕುಮಾರನು ಅದನ್ನು ತನ್ನ ಅರಮನೆ ತುಂಬಿಸಿಕೊಂಡು ಹಂಗೇ ಜೋಪಾನ ಜತುನ ಮಾಡಿಟ್ಟು ಕೊಂಡಿದ್ದನು. ಗುಡೇಕೋಟೆಗೆ ಹಲವು ಹರದಾರಿ ದೂರದಲ್ಲಿ ಸಿಡೇಗಲ್ಲು ಯಂಬ ಗ್ರಾಮಯಿರುವುದು. ಹಂಡೇ ಹನುಮಪ್ಪನಾಯಕನಿಗೆ ಸಾಪ ಕೊಟ್ಟು ಬಳ್ಳಾರಿ ದುರುಗವ್ವ ಬಂದು ಆ ಮರಲ್ಲಿ ನೆಲೆಗೊಂಡಿದ್ದಳು. ಪ್ರತಿ ಸಂವತ್ಸರ ಬನದುಣ್ಣುವಿ