ಪುಟ:ಅರಮನೆ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯಡಬಲ ಅಲ್ಲಿ ಸೂಲದ ಹಬ್ಬವು ಬಲು ಯಿಜ್ರಂಭಣೆಯಿಂದ ನಡೆಯುತಲಿತ್ತು. ಅದು ಮಾಮೂಲಿ ಸೂಲವಾಗಿರಲಿಲ್ಲ. ಭೂಲೋಕ ಕೃಧಿಕವೆನಿಸಿದ್ದ ಕುಂತಳ ಪ್ರಾಂತದ ಆಸ್ತೀಕರನ್ನು ನೋಡುವ ಸಲುವಾಗಿ ಪರಮೇಶ್ವರನು ಹೆಂಡತಿ ಮಕ್ಕಳ ಸಮೇತ ರುಷಭ ವಾಹನವನ್ನು ಯೇರಿ ಆಕಾಸ ಮಾರವಾಗಿ ಹೋಗುತ್ತಿರ ಬೇಕಾದರೆ ಆತನ ಕಯ್ಯಲ್ಲಿದ್ದ ತ್ರಿಶೂಲ ಆಯ ತಪ್ಪಿ ವುದುರಿ ನೆಲದ ಮ್ಯಾಲ ಸಿಕ್ಕೊಂಡಿತ್ತಲ್ಲ.. ಅದೇ ಯಿದಾಗಿತ್ತು. ಅದಕ್ಕೆ ಬಿದ್ದು ಬಲಿಗೊಂಡವರಿಗೆ ಸೂಕ್ತ ಪ್ರಾಪ್ತವಾಗುತ್ತದೆ ಯಂಬ ನಂಬಿಕೆಯಿಂದಾಗಿ ಅನಾದಿ ಕಾಲದಿಂದಲೂ ದೂರ ದೂರದಿಂದ ಅಲ್ಲಿಗೆ ಆಗಮಿಸಿ ಅದಕ್ಕೆ ಆತುಮಾಕ್ಷಣ ಮಾಡಿಕೊಂಡು ಸೋರಿಕದ ಕಡೆ ನಡೆದಿದ್ದರು. ಯಂಥ ಸ್ಥಳ ಪುರಾಣ ದಿಂದಲಂಕ್ರುತಗೊಂಡಿದ್ದ ಸಿಡೇಗಲ್ಲಿನ ಸೂಲದ ಹಬ್ಬವನ್ನು ನೋಡಲೆಂದು ಚಿಗುರು ಮೀಸೆಯ ಭದ್ರವ ನಾಯಕನೂ ಮಾರು ಯೇಷದಲ್ಲಿ ಅಲ್ಲಿಗೆ ಹೋಗಿದ್ದನು. ಅಲ್ಲಿ ಜನವೋ ಜನ, ಅದರ ಮ್ಯಾಲೆ ಬಿದ್ದು ತಮ್ಮ ದೇಹದ ನಶ್ವರತೆಗೆ ಮಂಗಳ ಹಾಡಲಕೆಂದು ದೊಡ್ಡ ದೊಡ್ಡ ಮನೆತನ ಹಿರೀಕ ಮಂದಿಯೂ ಅಲ್ಲಿಗೆ ಬಂದಿದ್ದರು. ಅವರು ನಾ ಮುಂದು ತಾ ಮುಂದು ಅಂತ ಕಿರೀಕರನು ಪೀಡಿಸುತಲಿದ್ದರು. ಹೋದ ಸಲ ಬಾಗುಳಿಯ ರಾಜಮಾತೆಯಾದ ವುಚ್ಚಂಗೆವ್ವ ತಾನೊಬ್ಬಳೆ ಪಾದ ಯಾತ್ರಹೊಂಟು ಬಂದು ಜಯನಮಂಪಾರೋತಿ ಪತಿ ಹರಹರ ಮಾದೇವ ಯಂದು ಕೂಗುತ್ತ ಸೂಲದ ಮ್ಯಾಲ ಬಿದ್ದು ಆತುಮಾಹುತಿ ಮಾಡಿಕೊಂಡಿದ್ದಳು. ಆದ್ದರಿಂದ ಮರುಸೊಪ್ಪತ್ತಿನಲ್ಲಿ ಸಿಡೇಗಲ್ಲು ಕುಂತಳ ಪ್ರಾಂತದ ಸೀಮೋಲ್ಲಂಘನೆ ಮಾಡಿ ಪ್ರಸಿದ್ಧವಾಗಿತ್ತು. ದೂರ ದೂರದ ಊರುಗಳಿಂದ ಜನರು ಬಂದು ಕಲೆತಿದ್ದರು. ಹರೇದ ಹುಡುಗರು ಜನರನ್ನು ರಂಜಿಸಲಕೆಂದು ಅನೇಕ ಕಸರತ್ತುಗಳನ್ನು ಪ್ರದರ್ಶನ ಮಾಡುತಲಿದ್ದರು. ಗೆದ್ದು ಯಿನಾಮುಗಳನ್ನು ಪಡಕೊಳ್ಳುತಲಿದ್ದರು, ಮಾರು ಯೇಷದಲ್ಲಿದ್ದ ಭದ್ರವನಾಯಕನೂ ಹಿಂದೆ ಬೀಳಲಿಲ್ಲ, ಕುಸ್ತಿ, ಕತ್ತಿವರಸೆ ಬಡಗೆ ತಿರುವೋದು, ಮೋಡೋದು ಜಿಗಿಯೋದು, ಸರಸರನೆ ಹತ್ತೋದು, ಭರಭರನೆ ಯಿಳಿಯೋದು ಯವೇ ಮೊದಲಾದ ಪಂದ್ಯಾಟಗಳಲ್ಲಿ ಭಾಗವಹಿಸಿ ಯಿನಾಮುಗಳನ್ನು ಗೆದ್ದು ಸೋತವರಿಗೆ ಕೊಟ್ಟು ಯಲ್ಲಾರ ರುದಯಗಳನ್ನು ಗೆದ್ದು ಸಮ್ಮಿ ಅನ್ನಿಸಿಕೊಂಡನು. ಆತನು ಹಂಗೇ ಸಾಂಪ್ರತು ಪರಿಶಯೊಳಗೆ ತಿರುಗಾಡುತ್ತಿರುವಾಗ್ಗೆ ತರುಣಿಯೋಲ್ವಳ ರೂಪ ಲಾವಣ್ಯಕ್ಕೆ ಮರುಳಾದನು. ಆಕೆಯೂ ಅವನ ತಾರುಣ್ಯದಯಿಸಿರಿಗೆ ಮನ ಸೋತಳು, ತಾನಿಂಥವರ ಮಗಳೆಂಬುದನ್ನು