ಪುಟ:ಅರಮನೆ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಸಂಕೇತಾಕ್ಷರಗಳ ಮೂಲಕ ತಿಳಿಸಿ ಆಕೆ ತನ್ನನ್ನಲ್ಲಿಗೆ ಕರೆತಂದಿದ್ದಂಥ ದಾಸಿಯರೊಂದಿಗೆ ಹೊರಟು ಹೋದಳು. ಆಕೆ ಬೇರಾರೂ ಆಗಿರಲಿಲ್ಲ, ಜರಿಮಲೆಯ ಚಿನ್ನನುಮಪ್ಪನಾಯಕನ ಮಗಳು ತಾನಾಗಿದ್ದಳು. ರಾಯದುರದ ಕುಗ್ಗಪ್ಪನಾಯಕನಿಗೆ ಬೆಂಬಲ ಕೊಡುವುದೋ, ತಾಳ್ಳಕೇರಾದ ಗಾದೆರನಾಯಕನಿಗೆ ಬೆಂಬಲ ಕೊಡುವುದೋ ಯಂಬ ಯಿಷಯದಲ್ಲಿ ಜರಿಮಲಿ ನಾಯಕರಿಗೂ, ಗುಡೇಕೋಟೆ ನಾಯಕರಿಗೂ ಆ ಕಾಲದಲ್ಲಿ ವಯ್ಯನಸು ಹುಟ್ಟಿಕೊಂಡು ಯೀ ಕಾಲದಲ್ಲಿ ಮಾರುಕ್ಷವಾಗಿ ಬೆಳೆದುಬಿಟ್ಟಿತ್ತು. ಜರಿಮಲೆಯ ಹೆಸರೆತ್ತಿದರೆ ಗುಡೇಕೋಟೆಯವರು, ಗುಡೇಕೋಟೆಯ ಹೆಸರೆತ್ತಿದರೆ ಜರಿಮಲೆಯವರೂ ಬುಸುಗುಟ್ಟುತಲಿದ್ದರು. ಯಿವತ್ತು ಯುದ್ಧ ಆದೀತು, ನಾಳೆ ಯುದ್ಧ ಆದೀತು ಯಂಬುವಷ್ಟರ ಮಟ್ಟಿಗೆ ಅವರಿಬ್ಬರ ನಡುವೆ ವಯತ್ವ ಬೆಳೆದು ಬಿಟ್ಟಿತ್ತು. ಸಂಕೇತಾಕ್ಷರದ ವಗಟುಗಳನ್ನು ಜಾಣುಮೆಯಿಂದ ಬಿಡಿಸಿ, ಆಕೆ ಯಾರು? ಯತ್ತ? ಯಂದು ರಾಜಕುಮಾರನು ಖಾತರಿ ಮಾಡಿಕೊಂಡ. ಆಕೆಯಲ್ಲಿಗೆ ಕಳುವಿನಿಂದ ಹೋಗೋದು, ಬರೋದು ಮಾಡುತಲಿದ್ದ. ಅವರಿಬ್ಬರು ವಬ್ಬರನ್ನೊಬ್ಬರು ಬಿಟ್ಟು ಯಿರದಂಗಾದರು. ತಾವಿಬ್ಬರು ಲಗ್ಗುನ ಆಗಲೇಬೇಕೆಂಬ ನಿರಣಯಕ್ಕೆ ಬಂದರು. ತನ್ನ ತಂದೆಗೆ ಖುದ್ದಾಮ ಹೇಳಿ ವಪ್ಪಿಸುವ ಧಯರ ಆಕೆಗೂ (ಮೋಬುಳಾಂಬೆ) ಯಿರಲಿಲ್ಲ. ತನ್ನ ತಂದೆಗೆ ಖುದ್ದಾಮ ಹೇಳಿ ವಪ್ಪಿಸುವ ಯದೆಗಾರಿಕೆ ಯೇತಗೂ ಯಿರಲಿಲ್ಲ. ಗುಡೇಕೋಟೆ ರಾಜ ತನ್ನನ್ನು ಯಲ್ಲಿ ಕೊಲ್ಲುತಾನೋ ಯಂಬ ಜೀವ ಭಯ ಜರಿಮಲೆ ನಾಯಕನಿಗೂ ಯಿತ್ತು. ತಮ್ಮ ತಮ್ಮ ತಂದೆಗೋಳ ಮೀಸೆ ಹಣ್ಣಾದ ಮ್ಯಾಲ ಹೇಳೋದು ಕೇಳೋದು ಮಾಡಿದರಾತು ಯಂಬ ನಿರಣಯಕ್ಕೆ ಆ ಪ್ರೇಮಿಗಳಿಬ್ಬರೂ ಬಂದರು. ಆದರೂ ಯುವರಾಜ ಭದ್ರವ ನಾಯಕನು ರಾತ್ರಿಹೊತ್ತು ಯಲ್ಲಾರು ಗಪಚುಪ್ಪಂತ ಮಲಗಿದ ಮ್ಯಾಲ ಜಟಾಯು ಯೇರಿ ಜರಿಮಲೆ ಪಟ್ಟಣವನ್ನು ಪ್ರವೇಶಿಸಿ ಕಳುವಿನಿಂದ ಅರಮನೆಯ ಅಂತಾಪರ ಹೊಕ್ಕು ರಾಜಕುಮಾರಿ ಮೋಬುಳಾಂಬೆಯೊಂದಿಗೆ ಬೆಳ್ಳಿ ಮೂಡೋ ಮಟ ಯಿದ್ದು ವಾಪಾಸಾಗು ತಲಿದ್ದನು. ದಾಸಿಯೂ, ಅಂತಃಪುರದ ಗೂಢಾಚಾರಣಿಯೂ ಆದಂಥ ವಯ್ಯಾರವ್ವನ ಮೂಲಕ ಯೀ ಯಿಷಯ ತಿಳಿದು ಚಿನ್ನನುಮಪ್ಪನಾಯಕನು ಕೆಂಡಮಂಡಲ ವಾದನು. ಜೀವಂತವಾಗಿ, ಯಲ್ಲವೆ ಅವನ ಹೆಣ