ಪುಟ:ಅರಮನೆ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರ್H ಇದೆ. ಖಬುಣ ಆಗುವುದಿಲ್ಲ. ಯೀ ಪಟ್ಟಣದಲ್ಲಿ ಆಗುವಂಥಾ ಪಯಿರುಗಳು ಯಾವುವುಯಂದರೆ ಜೋಳ, ಸಜ್ಜೆ, ನವಣೆ, ಹೆಸರು, ಅಲಸಂದಿ, ಅವರೆ, ಕಡಲೆ, ಪುಂಡಿ, ಅವುಡಲ, ತೊಗರಿ, ಹುರುಳಿ ಮುಂತಾದುವುಗಳು, ಅಸಾಧ್ಯ ಮನುವಂತರ ಲಗಾಯು ಪಟಣಕ ಆಜು ಬಾಜುದಲ್ಲಿ ಕೂರುವಕ್ಕೆ ಬೋಳು ಬಂಡೆ ಯಂಟಾಪುರ, ಮಿಂಚೇರಿ, ಪಡುವಣ ಗಡೇಕ ಸಿಡೇಗಲು. ಕಂದಗಲ್ಲು, ಹೂಡೇವು, ಕುಮತಿ ಖಾನಾಮಡುಗು, ತೆಂಕಣಕ್ಕೆ ಜರಿಮಲೆ, ಗಜಾಪುರ, ಅಕ್ಕಲಾಪುರ, ಜಾಜರಕಲ್ಲು, ಬಡಗಣಕ್ಕೆ ಮೋಬುಳಾಪುರ, ಹಲಕುಂದಿ ಯಿಠಲಾಪುರ, ಅಂತಾಪುರ, ಗಬ್ಬಳಗುಂಡಿ ಮುಂತಾದ ಅಯೂರು ಸಣಪುಟ್ಟ ಗ್ರಾಮಗಳುಂಟು. ವಂದೊಂದು ಊರಿಗೂ ವಂದೊಂದು ಯಿಧದ ಸ್ಥಳ ಪುರಾಣಗಳುಂಟು. ಚಿತ್ತ ಚಂಚಲಗಳು ಸಾಯಿರಕ್ಕೂ ಮಿಕ್ಕುಂಟು.... ಪಟ್ಟಣದ ವಳಗಸೆ ಬಾಕುಲ ಬಳಿಯಿರುವ ಪೆದ್ದನುಮ೦ದೇವರ ಗುಡಿ ಗುಂಡಾಂತರದ ಮೇಲಿರುವ ದ್ವಿಭಾಗ ಶಿಥಿಲವಾದಂಥಾ ಸೈತ ಶಿಲಾದ ಮೇಲಿರುವ ಶಾಸನದಲ್ಲಿ ಕನಡಾದಲ್ಲಿ ಬರದು ಯಿರುವ ಪ್ರಕಾರ ಜೆನರು ಹಂಗ ನಡದುಕೊಳ್ಳಬೇಕೆಂಬುದರ ಯವರ ಅದೆ... ನ ಅಧಿಕಾರಿಗಳಿಗೆ ನಯನಾಜೂಕು ಕಲಿಸೂತ, ಪ್ರಜೆಗಳ ರುದಯ ಗೆಲ್ಲುವ ಬಗೆ ಹೇಗೆಂದು ಬಿಡಿಸಿ ಹೇಳೂತ, ಹಠಮಾರಿ ಅಧಿಕಾರಿಗಳನ್ನು ಏರುತ್ತಂಗಡಿ ಮಾಡತ, ಪ್ರಜೆಗಳ ಪಾಲಿಗೆ ಕುಠಾರಪ್ರಾಂತರಾಗಿರುವ ಜಮೀಂದಾರರಿಗೆ ತಕ್ಕ ಪಾಠ ಕಲಿಸೂತ ಕಲೆಬ್ರುಥಾಮಸು ಮನೋ ಸಾಹೇಬಗೆ ಪುರುಸೊತ್ತೆಂಬುದು ಯಿಲ್ಲದಂಗಾಗಿತ್ತು. ಅದು ಬದುಕುತ್ತಿರುವ ಭೂತಕಾಲದ ಕಪಿಮುಷಿ«ಯಿಂದ ಸದರಿ ಯಿಂಡಿಯಾದ ವರಮಾನವನ್ನು ಹೆಂಗಪ್ಪಾ ಪಾರು ಮಾಡುವುದು ಯಂದೂ, ಸದರಿ ಯಿಂಡಿಯಾದ ಮಂದಿ ವರಮಾನವನ್ನು ಕೂಲಂಕಷವಾಗಿ ಬದುಕಲಕ ತಾನೇನು ಮಾಡಬೇಕೆಂದೂ ಸದಾ ಚಿಂತಿಸುತಲಿದ್ದ ಆತನು ವಂದು ಕಡೇಕ ನೆಟ್ಟಗ ನಿಲ್ಲುತಲಿರಲಿಲ್ಲ.. ರೆಪ್ಪೆಗೆ ರೆಪ್ಪೆ ಅಂಟಿಸಿ ಸರಿಯಾಗಿ ನಿದ್ದೆ ಮಾಡುತಲಿರಲಿಲ್ಲ.. ಸುಂಟರ ಗಾಳಿಯಂಗ ತಾನು ಸದಾ ಸುತ್ತಾಡುತಲಿದ್ದನು. ಕಾಗೆ ಹೊಕ್ಕವರ ಮನೆಗೆ, ಹಂದಿ ಹೊಕ್ಕವರ ಮನೆಗೆ, ಹೆರಿಗೆ ಆದೋರ ಮನೆಗೆ, ನಾಮಕರಣ ಮಾಡೋರ ಮನೆಗೆ, ಮದುವೆ ಮುಂಜಿ ಮಾಡೋರ ಮನೆಗೆ, ಸಾವು ಸಂಭವಿಸಿದೋರ ಮನೆಗೆ, ಗಂಗಾಜಲ ಸ್ವಾಗತಿಸೋರ ಮನೆಗೆ ಹಿಂಗ ಕರೆದಲ್ಲೆಲ್ಲ