ಪುಟ:ಅರಮನೆ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ಅರಮನೆ ಕಡೇಕ ಸವುಡು ಮಾಡಿಕೊಂಡು ತಾನು ಹೋಗದೆ ಯಿರುತಲಿರಲಿಲ್ಲ. ಮಾರಿ ಮಸಣಿ ಹೊಂದಿಸೋರ ಮರಿಗೆ, ಅಗಸೆ ಬಾಕುಲು ಪೂಜೆ ಮಾಡೋರ ಮರಿಗೆ, ಹಬ್ಬಹರಿದಿನ ಮಾಡೋರ ಮರಿಗೆ ತಾನು ಸವುಡು ಮಾಡಿಕೊಂಡು ಹೋಗದೆಯಿರುತಲಿರಲಿಲ್ಲ. ದತ್ತ ಮಂಡಲದ ಪಯ್ಲಿ ಕಡಪ ಅನಂತಪುರಗಳ ಆಜು ಬಾಜೂಕಿದ್ದ ಪ್ರತಿಯೊಂದು ಗ್ರಾಮವು ಆತನ ಬರುವಿಕೆಗಾಗಿ ತುದಿಗಾಲಲ್ಲಿ ನಿಂತು ಯಾವಾಗ ಬರುವನೋ ನಮಪ್ಪ ಯಂದು ಯದುರು ನೋಡುತಲಿತ್ತು. ವಂದೇ ಮಾತಲಿ ಹೇಳಲಕಂದರ ದತ್ತ ಮಂಡಲದ ಹಳ್ಳಿ ಮಂದಿಗೆ ಮನ್ನೋ ಯಂಬ ತಿಕ್ಕಡಿ ಬಡಕಂಡಿತ್ತು. ಅವಯ್ಯನ ಜಪ ಮಾಡಿಕೋತ ಮಲಗುತಲಿತ್ತು ಯೇಳುತಲಿತ್ತು. ಸಿಂಧವಾಡಿ ಸೀಮೆಯ ವುಳ್ಳವರ ಕಣ್ಣಿಗೆ ಮನೋನು ವುರುಕುಂದಿ ಝೀರಣ್ಣನ ಅಪರಾವತಾರವೆಂಬಂತೆ ಗೋಚರಿಸಿದರೆ, ಅನಂತಪುರ ಸೀಮೆಯವುಳ್ಳವರು ಕದಿರಿ ನರಸಿಮ್ಮ ಸೋಮಿಯೇ ಮನೋನ ಯಾಸದಲ್ಲಿ ಯಿರುವನು ಯಂದೇ ಭಾವಿಸಿದ್ದರು. ಬಲಕುಂದಿಯ ಪರಗಣಸೀಮೆಯ ಆರಾಧ್ಯ ದಯವವಾದ ಹಳೇಕೋಟೆ ಬೀರಭದ್ದರದೇವರೂ, ಬಲುನಾಡು ಪ್ರಾಂತದ ಲಚುಮೀನರಸಿಮ್ಮ, ಕುಂತಳ ಪ್ರಾಂತದ ನುಗ್ಗರನರಸಿಮ್ಮ ಯಿವೇ ಮೊದಲಾದ ಯಿಟ್ಟರೆ ಸಾಪ, ಕೊಟ್ಟರೆ ವರ ಜಾಯಮಾನದ ದೇವರುಗಳು ಮನೋನ ಸರೀರದೊಳಗೆ ಆಶ್ರಯ ಪಡಕೊಂಡವೆ ಯಂದು ವುಂಡು ವುಗುಳೋರೆಲ್ಲ ನಂಬುತಲಿದ್ದರು. ದತ್ತ ಮಂಡಲದ ಗವುಡ, ರೆಡ್ಡಿ, ಪಟುವಾರಿ, ಜಾಗೀರಿ, ಪಾಟಿಲು, ಪಟೇಲಾದಿಗಳ ಪಯ್ಕೆ ವಬ್ಬರಲ್ಲಾ ವಬ್ಬರು ಮನೋನ ಹೆಸರಲ್ಲಿ ಮಾಟ ಮಂತರ ಮಾಡಿಸೀ ಮಾಡಿಸಿ ಸುಸ್ತಾಗಿದ್ದರು. ಮಾಟಗಾರ, ಮಂತರಗಾರ, ಮೋಡಿಕಾರರಿಗೆ ತಮ್ಮ ತಮ್ಮ ಯಿಲಾಖಾದೊಳಗೆ ಕಣ್ಣಳತೆ ಕೂಗಳತೆಯಲ್ಲಿರಿಸಿ ಕೊಂಡಿದ್ದರು. ಅವರ ವಾಮಾಚಾರದ ವುದ್ದೇಶ ಬರೀ ಕಲೆಬ್ರುಸಾಹೇಬ ಆಗಿರಲಿಲ್ಲ. ವಬ್ಬರೊಬ್ಬರ ವರಸ್ಸು ಕುಂದಿಸಲು, ಅಂಗಾಂಗಗಳನ್ನು ಮನಮಾಡಲು, ನಾಶ ಮಾಡಲು ಮಂತರ ವಾಟಗಳ ಮೊರೆ ಹೋಗುತಲಿದ್ದರು. ಯೀ ಸಂಗತಿ ಮನೋ ಸಾಹೇಬನಿಗೆ ಗೊತ್ತಿರಲಿಲ್ಲ ಯಂದಲ್ಲ. ಆ ಯುದ್ಧ ವುಪಟಳವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತಲಿದ್ದನು. ಅಲ್ಲದೆ ಮಂತರಗಾರಿಕೆ, ಮೋಡಿಗಾರಿಕೆ ಯಿ ಎಲ್ಲ ಯಿದ್ಯೆಗಳನ್ನು ಕಲಾಪ್ರಕಾರಗಳ ಪಯ್ಲಿ ಎಂದೆಂದೇ ತಾನು ಭಾವಿಸಿದ್ದನು. ಅಂಥವರನ್ನು ತಾನಿದ್ದಲ್ಲಿಗೆ ಬರಮಾಡಿಕೊಂಡು ಸತ್ಕಾರ ಮಾಡಿ ಗವುರವಿಸುತಲಿದ್ದನು. ಅಂಥ ಪ್ರಯೋಗಗಳಿಗೆ ತನ್ನನ್ನು ತಾನು ವಡ್ಡಿಕೊಂಡು