ಪುಟ:ಅರಮನೆ.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಅರಮನೆ ಯಂದು ಸಂಬೋಧಿಸುತ್ತ ಜಗದೆಪ್ಪ ನಾಯಕನಿಗೆ ಹೇಳಿದಂತೆ ಹೇಳಿದನು. ಬಾಲಪ್ಪ ನಾಯಕನು ಅದಕಿದ್ದು ಜರಿಮಲೆ ಮ್ಯಾಲೆ ನೀವು ಮಾಡಬೇಕೆಂದಿರುವ ದಾಳಿಗೆ ನಾನು ದಂಡದವಲತ್ತು ಕಳಿಸಿ ಸಾಯ ಮಾಡುವೆನು” ಯಂದು ವಪ್ತಿಗೆ ಸೂಚಿಸಿದನಲ್ಲದೆ ಕರಾರಿಗೆ ದಸರತ್ತು ಹಾಕಿ ಬೀಳುಕೊಂಡು ಹೊರಟು ಹೋದನು. ಯಿ ಯರಡೂ ಕರಾರು ಪತ್ರಗಳನ್ನು ಆಧಾರವಾಗಿಟ್ಟುಕೊಂಡು ತಾನು ಯಾಕೆ ಬಡತಿ ಪಡೆಯಬಾರದು ಯಂದು ರೆಬೆರೋ ಯೋಚಿಸುತ್ತಿರುವಾಗ್ಗೆ... ಅತ್ತ ಕೂಡ್ಲಿಗಿ ಪಟ್ಟಣದೊಳಗೆ ತಾಲ್ಲೂಕಾಧಿಕಾರಿಯಾದ ಯಡ್ಡವರನು ಯನ್ನು ಮುಂದೆ ತಾನು ಕಾಡುಪ್ರಾಣಿಗಳನ್ನು ಸೋದರರಂತೆ ಕಾಣುವುದಾಗಿ ಸಂತ ಜೋಸೆಫರ ಮಾಲ ಕಕ್ಕಿಟ್ಟು ಪ್ರಮಾಣ ಮಾಡಿ ತನ್ನ ಹೆಂಡತಿ ಜೆನ್ನಿಫರಳನ್ನು ಸಮಾಧಾನಪಡಿಸಿದನು. ಆಕೆಯ ಅಪೇಕ್ಷೆಯಂತೆ ತನ್ನ ಯಿಲಾಖಾದೊಳಗಿದ್ದ ಗಿರಿದುರುಗ ಕಾಡು ಮೇಡುಗಳಲ್ಲಿ ಬೇಟೆ ಸಿಕಾರಿಗಳನ್ನು ನಿಷೇಧಿಸಿದನು. ಹೂಡೇಮು, ಕುಮಸಿ, ಹನಸಿ, ಕೊಪ್ಪು ಮೊದಲಾದ ಅರವತ್ತೆಂಟು ಹಳ್ಳಿಗಳ ಆದಿವಾಸಿ ಜನಾಂಗದವರು ತುಕುಡಪ್ಪ ಮತ್ತು ತುಂಡಪ್ಪರೆಂಬ ಹಿರೀಕ ಅವಳಿ ಸೋದರರ ಮುಖಂಡತ್ವದಲ್ಲಿ ಯಡ್ಡವರನಿದ್ದಲ್ಲಿಗೆ ಬಂದು “ದೊರೆಯೇ ಬೇಟೆಯಾಡುವುದು ನಮ್ಮ ಕುಲರು ಅಯ್ಕೆ.. ಯಿದನು ನಾವು ತಲತಲಾಂತರದಿಂದ ಮಾಡಿಕೊಂಡು ಬಂದಿರುವೆವು. ಕಾಡುಪ್ರಾಣಿಗಳೊಂದಿಗೆ ನಮ್ಮ ಬೀಗುಸ್ತನ, ತೆಗಸ್ತನ ಯಿರುವುದು ಸೋಮಿ, ಕಾಡುಪ್ರಾಣಿಗಳ ರಗುತ ಕೊಬ್ಬಿನಿಂದ ವಾತಾ ಪಿತ್ತ ಕಫ ಮುಂತಾದ ರೋಗಗಳಿಗೆ ಅವುಸಧ ತಯಾರು ಮಾಡತೇವಿ, ಕಲ್ಲು ಲೋಬಾನ, ಕವಡೆ ಲೋಬಾನ ಹುಡುಡುಕಿ ತರತೇವಿ. ಯಿದು ನಮ್ಮ ಕುಲ ಕಸುಬು ಅಯ್ಕೆ ದೊರೆಯೇ.. ಕಾಡು ನಮ್ಮ ತವರುಮನೆ ಅಯ್ಕೆ. ಅದರಿಂದ ನಮ್ಮನ್ನು ಬೇರೆ ಮಾಡಿ ವುಪಾಸ ಕೆಡವಬೇಡಿ ತಂದೆ ಯಂದು ಗಲಗಲಾಂತ ಬೇಡಿಕೊಂಡರು. ಅದಕ್ಕಿದ್ದು ಯಡ್ಡವರುನ ಮನಸ್ಸು ಕರಗಲಿಲ್ಲ. ಮೂರೊಳಗೆ ನಾಕಾರು ಮಂದಿಯಂತೆ ಭೂಮಿ ಸಾಮಿ ಮಾಡಿಕೊಂಡು ಹೊಟ್ಟೆ ಹೊರೀರಿಯಂದು ನಿಷ«ರವಾಗಿ ಹೇಳಿ ಕಳುವಿದನು. ಅವರು ಯಾರಿಗೂ ಅರವಾಗದ ಭಾಷೆಯಲ್ಲಿ ಅವನನ್ನು ಹಿಗ್ಗಾಮುಗ್ಗಾ ಸಾಪಳಿಸುತ್ತ ಹೊರಟುಹೋದರು. ಅದಾದ ಕೆಲ ದಿವಸಕ್ಕೆ ಸಂಡೂರು ಗೆಡ್ಡೆಯ ರಾಜ ಶಿವರಾವ್ ಘೋರೈಡೆ, ಸೀನೋಜಿ, ದಾಂಡೋಬ, ಖಾಂಡೋಬರೇ ಮೊದಲಾದ ಸಾಡೇಸಾತ್ ಸಾಮಂತರನ್ನು ಹಿಂದಿಟ್ಟುಕೊಂಡು