ಪುಟ:ಅರಮನೆ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬಂದು ತಮ್ಮ ಮನರಂಜನೆಗೇನು ಮಾಡಬೇಕು? ವಾರಕ್ಕೆ ಮೂರು ಸಲವಾದರೂ ಕಾಡುಪ್ರಾಣಿಗಳ ಮಾಂಸಾಹಾರವನ್ನು ಭುಂಜಿಸುವ ತಮ್ಮ ರಾಣಿ ವಾಸದವರನ್ನು ಹೇಗೆ ಸಂತಯಿಸಬೇಕು? ಕಾಡುಪ್ರಾಣಿಗಳನ್ನು ಬೇಟೆಯಾಡದಿದ್ದಲ್ಲಿ ತಮ್ಮ ಪ್ರಜೆಗಳು ತಮ್ಮನ್ನು ಹೇಡಿಗಳೆಂದು ಹೀಯಾಳಿಸದೆ ಯಿದ್ದಾರೆಯೇ? ಯಂಬಿವೇ ಮೊದಲಾದ ಪ್ರಶ್ನೆಗಳನ್ನು ಹಾಕಲು ಯಡ್ಡವರನು ವುತ್ತರ ಕೊಡಲು ತಡವರಿಸಿದನು. ಹತ್ತಾರೂ ಸೂರ ಸರದಾರರಿಗೆ ವಡೆಯನಾಗಿರುವ ಘೋರಡೆಯು ಕುಂಪಣಿ ಸರಕಾರದ ನಿಷಾkವಂತ ಅನುಯಾಯಿಯು, ಆತನು ಹೇಗಾಗಲೇ ಕುಂಪಣಿ ಸರಕಾರದ ಮೇಲಧಿಕಾರಿಗಳಿಗೆ ಹುಲಿ ಯುಗುರು, ಹುಲಿ ಚರುಮ, ಕಾಡುಕೋಣದ ಮುಖ, ವುಡದೆಣ್ಣೆ ನವುಲು ಮಾಮುಸ ಯಿವೇ ಮೊದಲಾದ ಕಾಡಿನ ವುತ್ಪನ್ನಗಳನ್ನು ಸರಬರಾಜು ಮಾಡಿ ಸಯ್ಯ ಅನ್ನಿಸಿಕೊಂಡಿರುವನು. ಅದೂ ಅಲ್ಲದೆ ಹುಲಿ ಸಿಕಾರೀ ಯಿದ್ಯೆಯನ್ನು ತನಗೆ ಹೇಳಿಕೊಟ್ಟ ಪ್ರಪ್ರಥಮ ಗುರುವು ತಾನಾಗಿರುವನು. ನಿಜ ಹೇಳಬೇಕೆಂದರೆ ಹೋದ ಸಲ ಹುಲಿಯನ್ನು ಅವನೇ ಕೊಂದು ಅದರ ಪರಾಕ್ರಮವನ್ನು ವುದಾರವಾಗಿ ತನಗೆ ನೀಡಿ ವಯ್ಯಸ್ಸು ಹೆಚ್ಚಿಸಿದ್ದನು. ಅಂಥಾತನು ಬಂದು ಕೇಳುತ್ತಿರುವುದಕ್ಕೆ ಯೇನೆಂದು ಸಮಾಧಾನ ನೀಡುವುದು? ಧರುಮ ಸಂಕಟದಲ್ಲಿ ಸಿಲುಕಿದ ಯಡ್ಡವರನು ಕೊನೆಗೂ ಬೇಟೆಯಾಡಿಕೊಳ್ಳಲು ಪರವಾನಿಗಿ ನೀಡಿ ಕಳುವಿದನು. ಸಿಡಿಮಿಡಿಗುಟ್ಟಿದ ಹೆಂಡತಿ ಜೆನ್ನಿಫರಳಿಗೆ ಯಿದೇ ಮುತ್ಸದ್ದಿತನ ಯಂದು ಹೇಳಿ ಸಿಟ್ಟು ತಮಣಿ ಮಾಡಿದನು. ಆಕೆಯ ಪ್ರೀತ್ಯಕ್ಷವಾಗಿ ಹಲವು ಕಡೆ ಅಭಯಾರಣ್ಯಗಳನ್ನು ನಿರುಮಿಸಿದನು. ಸದರೀ ಪಟ್ಟಣದೊಳಗೆ ವಂದು ಮುಗಾಲಯ ಸ್ಥಾಪಿಸಿ ಅದರ ಮೇಲುಸ್ತುವಾರಿಕೆಯನ್ನು ತನ್ನ ಪತ್ನಿಗೆ ವಹಿಸಿದನು. ಮಾಂಸಾಹಾರಿ ಪ್ರಾಣಿಗಳನ್ನು ಸಸ್ಯಾಹಾರಿ ಪ್ರಾಣಿಗಳನ್ನಾಗಿ ಮಾಡುವುದು ಹೇಗೆ ಯಂದು ಅಧ್ಯಯನ ನಡೆಯಲು ಆಕೆಯು ಗುಣಸಾಗರ ಅಗ್ರಹಾರದ ಯೇದಾಂತಿ ಯಂಕಟರಮಣ ಸಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ವಂದು ಸಮಿತಿಯನ್ನು ರಚಿಸಿದಳು.. ಆ ಸಮಿತಿಯ ಸದಸ್ಯರು ಯಾರು ಯಾರು ಅಂದರೆ ಯಾಕರಣ ಸಾರ ಚಂದ್ರೋದಯ.... ಅತ್ತ ಕುದುರೆಡವು ಪಟ್ಟಣದ ಕನ್ನಿಕಾಪರಮೇಶ್ವರಿ ದೇವಾಲಯ ಕಟ್ಟಡ ಯಬ್ಬಿಸಲಕಂದು ಕಳೆದ ಯಪ್ಪತ್ತಾರು ವರುಷಗಳ ಹಿಂದೆಯೇ ಮೀಸಲಿರಿಸಿರುವ ನಿವೇಶನಕ್ಕಂಟಿಕೊಂಡಿರುವ ಗಾರೆ ಮನೆ ಯಷ್ಟುಗಟ್ಟಿಮುಟ್ಟಾಗಿರುವುದೆಂದರೆ ಅಷ್ಟು ಗಟ್ಟಿ ಮುಟ್ಟಾಗಿರುವವು.. ಅದರೊಳಗಿರುವ ವಂದು ಕೋಣೆಯು ಯೇಳು