ಪುಟ:ಅರಮನೆ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಅರಮನೆ ಸಮುದ್ಧರದಾಚೆಯ ಕೀಳು ಸಮುದ್ಧರ ಅಂತಾರಲ್ಲ.. ಹಾಗಿರುವುದು.. ಅದರೊಳಗೆ ವಂದು ನೊರಜು ಸಲೀಸಾಗಿ ಪುಸುಗುವಂತಿಲ್ಲ. ಆ ಅಂಥ ಕೋಣೆಯೊಳಗೆ ಯತ್ತರಕ್ಕಿಂತ ಹೆಚ್ಚು ಅಗಲ ಯಿರುವಂಥಾತನೂ, ಹನ್ನೊಂದು ಮಣ ತೂಕದ ವಲವು ಸರೀರಕ್ಕೊಡೆಯನೂ, ಬಡಬಗ್ಗರಿಂದಲೂ, ಲೇವಾದೇವಿಗಾರರಿಂದಲೂ ಸದಾ ಸೇವಿಸಿಕೊಳ್ಳು ತ್ತಿದ್ದಂಥಾತನೂ, ಕೂಡ್ಲಿಗಿ ಪಟ್ಟಣದ ವಂಕದಾರಿ ಗೋಯಿಂದ ಶ್ರೇಷಿ«ಯ ಭಾವಮಯ್ತುನನೂ, ಕೀರಿಸೇಷ ಟೀಕಾ ಸಂಜೀವಪ್ಪ ಶ್ರೇಷಿ«ಯ ಯೇಕ ಮಾತ್ರಪುತ್ರನೂ ಆದಂತ ತಿರುಪಾಲಯ ಶ್ರೇಷಿ«ಯು ಗಳಿಗೆ ಗಳಿಗೊಂದು ಸಲದಂತೆ ತನ್ನ ಕುಲದಯವವಾದ ತಿರುಪತಿ ಯಂಕಟೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡುತ ಚಿನ್ನದ ನಾಣ್ಯಗಳೊಳಗಿನಿಂದ ಬೆಳ್ಳಿ ನಾಣ್ಯಗಳನ್ನೂ, ಬೆಳ್ಳಿ ನಾಣ್ಯಗಳೊಳಗಿನಿಂದ ಚಿನ್ನದ ನಾಣ್ಯಗಳನ್ನು ಬೇರೆ ಮಾಡುತ, ಅವುಗಳನ್ನು ನೂರರ ಲೆಕ್ಕಾಚಾರದಲ್ಲಿ ಜಿಂಕೆ ಚರುಮದ ಚೀಲದಲಿ ತುಂಬುತ, ಬಾಯಿಗೆ ಸರಗುಣಿಕೆ ಬಿಗಿಯುತ, ಕಬ್ಬಿಣದ ಪೆಟಾರಿ ಯೊಳಗಿಡುತ ದೇವರೇ ಯಲ್ಲಾಪ್ರಕೊರಚರಟ್ಟಿ ಕಳ್ಳರ ಕಣ್ಣಿಗೆ ಬೀಳದಂತೆ ಮಾಡು ಯಂದು ಬೇಡಿಕೊಳುತ ಯಿರುವಾಗ್ಗೆ... ಸದರಿ ಮನೆಯಂಗಳದಲ್ಲಿ ಅದೇ ತಾನೆ ನಿಂತುಕೊಂಡ ವಂದೆರಡು ಕುದುರೆಗಳ ಡುಬ್ಬದ ಮ್ಯಾಲಿಂದ ಮೂರು ಮಂದಿ ಕೆಳಕ್ಕಿಳಿದರು. ಅವರ ಪಯ್ಕೆ ಯಿಬ್ಬರು ಪರಂಗಿ ಮಂದಿಯೂ, ವಬ್ದಾತನು ಜುಮೋಜನೂ ಆಗಿದ್ದನು. ಹುಡುಗರುಪ್ಪಡಿ ತೀರಾ ಅವರ ಸನೀಹಕ್ಕೆ ಹೋಗುವ ಹಠದಿಂದಾಗಿ ತುಸು ದೂರವೇ ನಿಂತಿದ್ದರು. ತಮ್ಮ ತಮ್ಮ ಮಕ್ಕಳು ಮರಿಗಳನ್ನಲ್ಲಿಂದ ಯಳದೊಯ್ಯ ಲೆಂದು ಬಂದಿದ್ದ ತಂದೆ ತಾಯಂದಿರು ಅವರ ಕೆಂದೊಗಲಿಗೆ ಮಳ್ಳಾಗಿ ತಮ್ಮ ಕರತವ ಮರೆತು ಅಲಲ್ಲೇ ನಿಂತು ವುಳಕೊಂಡುಬಿಟ್ಟಿದ್ದರು. ಆ ಪರಂಗಿ ಮಂದಿ ಸದರಿ ಪಟ್ಟಣಕ್ಕೆ ಹೊಸಬರೇನೂ ಅಲ್ಲ. ಚೂರುಪಾರು ದುಭಾಷಿಯೆನಿಸಿದ್ದ ಜುಮೋಬನೂ ಸಹ, ಪರಂಗಿ ಮುಂದಿಯ ಪಯ್ಕೆ ವಬ್ಬಾತ ಯಸಲೆ, ಯಿನ್ನೊಬ್ಬಾತ ಬಿಸಲೆ.. ಆದರೆ ಯಿದಾವುದು ಪಕ್ಕ ಅಲ್ಲ.. ಮಂದಿ ಬಾಯೊಳಗೆ ಯೇನೇನೋ ಯಿದ್ದದ್ದು ಯಿನ್ನೇನೋ ಆಗಿಬಿಟ್ಟಿತ್ತು. ರಾಜ ಮಾರಾಜರು ಬಳಸಿ ಬಿಸಾಡಿರುವ ಯಾದೇ ಹಳೇ ಪಳೆಯ ವಸ್ತುಗಳನ್ನು ಖರೀದಿ ಮಾಡಲಕೆಂದು ಅವರು ಆಗೊಮ್ಮೆ ಹೀಗೊಮ್ಮೆ ಯಂಥ ಪಟ್ಟಣಗಳಿಗೆ ಬಂದು ಹೋಗುವುದುಂಟು. ಅವರು ಬಂದೊಡನೆ ಮಂದಿಯು ನಂದಿದು ತಗಳ್ಳಪ್ಪ.. ನಂದದು ತಗಳ್ಳಪ್ಪ ಯಂದು ಅವರನ್ನು ಮುಕ್ಕರಿಸಿಕೊಳ್ಳುತ್ತಿದ್ದುದುಂಟು.. ಯೀ