ಪುಟ:ಅರಮನೆ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅರಮನೆ

೬೭


ಅರಮನೆಗೆ, ಯಿತಿಹಾಸಕ್ಕೆ ಸಂಬಂಧಪಟ್ಟವುಗಳಾಗಿರಲಿಲ ಸುತಮುತ್ತಲ ಗ್ರಾಮ
ಗಳಿಂದ ಸಂಗ್ರಹಿಸಿ ತಂದಂಥನೂಯಿದ್ದವು.. ಗುಲಗಂಜಿಗಾತುರದಿಂದ ಹಿಡಿದು
ವನಕೆ ಗಾತುರದ ವರೆಗೆ ಯಿಯಿಧ ರೀತಿಯಲ್ಲಿದ್ದವು.. ಪಲಾನ ಯಿಂಥ ಕಾಲದಲ್ಲಿ
ಯಿಂಥರಾಜನು ತನ್ನ ಕಿವಿಯ ಕೂಕಣಿ ತೆಗೆಯಲು ಯಿದನ್ನು
ವುಪಯೋಗಿಸುತಲಿದ್ದನು, ಪಲಾನ ಯಂಥ ಕಾಲದಲ್ಲಿ ಯಂಥ ರಾಜನು ತನ್ನ
ಹಲ್ಲು ಸಂದಿಯ ಮಾವುಸಾಹಾರದ ಕೂಳೆ ಗೆಬರಲು ಯಿದನ್ನು ವುಪಯೋಗಿಸುತ
ಲಿದ್ದನು ಯಂದು ಮುಂತಾಗಿ ಶ್ರೇಷಿಯು ವಂದೊಂದು ವಸ್ತುವಿನ ಕಾಲ
ಗುಣ ಯಿಶೇಷವನ್ನು ಪರಂಗಿ ಮಂದಿಗೆ ಯಿವರಿಸುತ್ತಿರುವಾಗ್ಗೆ, ತನ್ನ
ಪ್ರತಿಬಿಂಬವನ್ನು ನೋಡಿಕೊಂಡು ಕ್ರುತಾರಳಾಗುವ ಸಲುವಾಗಿ ಅಷ್ಟ ಲೋಹದ
ದರುಪಣವನ್ನು ಶ್ರೇಷಿ«ಯ ಧರುಮಪತ್ನಿ ರುಕ್ಕುಮಿಣಮ್ಮ ಕಳುವು ಮಾಡಿ
ತನ್ನ ಸಂದೂಕದೊಳಗೆ ತೂರಿಸುತ್ತಿರುವಾಗ್ಗೆ,
ಸದರಿ ಪಟ್ಟಣದ ಯಿನ್ನೊಂದು ಮನೆಯಲ್ಲಿ ಅಂದರೆ ಆಮಾತ್ಯ ಗವುಡಿಕೇ
ಸಣಸಿದ್ದಪ್ಪನ ಮನೆಯ ವುಪ್ಪರಿಗೆಯಲ್ಲಿ ಕೋಣನತಂಬಿಗೆ ರುದರೇಗವುಡಗೂ,
ರಾಜಕುಮಾರ ಕಾಟನಾಯಕನಿಗೂ ನಡುವೆ ಚದುರಂಗದಾಟವು ನಡಿತಾ ನಡಿತಾ
ಬಲು ಬಿಸಿಯೇರಿಬಿಟ್ಟಿತ್ತು. ಹಬ್ಬದೂಟ ವುಣಲಕಂತ, ಅಮಾತ್ಯನ ಖಾಸಾ
ಅಳಿಯನನ್ನು ಸಾಂಪ್ರತ ಮಾತನಾಡಿಸಲಕಂತ ಕಾಟಯ್ಯ ಮುಂಜಾನೆಯೇ ಅಲ್ಲಿಗೆ
ಬಂದು ತಲುಪಿದ್ದ. ತನ್ನ ಅಳಿಯ(ಅಂದರೆ ಮಗಳು ಗವುರಮ್ಮನ ಗಂಡ)ನು
ರಾಜಕುಮಾರನನ್ನು ಚದುರಂಗದಾಟ ದಲ್ಲಿ ಸೋಲಿಸಲೆಂದೇ ಅಮಾತ್ಯನು
ಕವಳದ ವ್ಯೂಹ ರಚಿಸಿ ಬರಮಾಡಿಕೊಂಡಿದ್ದನು. ಕಾಲಕ್ಷೇಪ ಮಾಡಲಕೆಂದೇ
ಅವರು ಆಟ ಆರಂಭಿಸಿದ್ದು. ಆದರೆ ಕಾವು ಯೇರುತಾ ಯೇರುತಾ ಹೋಗಿತ್ತು.
ಬೇಕೆಂದೇ ಅಮಾತ್ಯನು ಅರಮನೆ ಸಂಬಂಧೀ ಅಹಿತಕರ ಘಟನಾವಳಿಗಳನ್ನು
ವಂದರ ಮ್ಯಾಲೊಂದರಂತೆ ಪ್ರಸ್ತಾಪಿಸಿ ಪ್ರಸ್ತಾಪಿಸಿ ಕಾಟ ನಾಯಕ ಸೋಲುಗಳ
ಸರಮಾಲೆಯನ್ನಲಂಕರಿಸುವಂತೆ ಮಾಡಿದ್ದನು. ರಾಜಕುಮಾರನು
ಬಕ್ಕಣದಲ್ಲಿದ್ದುದನ್ನು, ಕಿವಿ, ಕೊಳ್ಳಲಿದ್ದುದನ್ನು ಅಮಾತ್ಯನಿಂದ ನೂರಾರು ಬೆಳ್ಳಿ
ರೂಪಾಯಿ ಗಳನ್ನು ಸಾಲ ಪಡೆದು ಪಣಕ್ಕಿಟ್ಟು ಕಳಕೊಂಡನು. ಆದರೂ ಆ
ಛಲದಂಕಮಲ್ಲನು ಆಟದಿಂದ ಯಿರಮಿಸಿಕೊಳ್ಳಲಿಲ್ಲ.. ರುದರೇಗವುಡನಂಥ
ಯಕಃಶ್ಚಿತ್ ಜಾಮಾತುಕ ಪುವ್ವಲ ರಾಜವಮುಸಸ್ಥನಾದ ತಾನು ವಂದು
ಆಟವನ್ನಾದರೂ ಗೆಲ್ಲಲೇಬೇಕೆಂದು ಕ್ರುತನಿಶ್ಚಯವಂ ಮಾಡಿ ತನ್ನ ಕಯ್ದಿದ್ದ
ಪಂಚಲೋಹದ ತಂಬಿಗೆಯನ್ನು (ಮಿಂಜಾನೆ ದೊಡ್ಡಿಯ ಸಲುವಾಗಿ ತನ್ನೊಂದಿಗೆ