ಪುಟ:ಅರಮನೆ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೮ ಅರಮನೆ ಯಿಟ್ಟುಕೊಂಡಿದ್ದನಷ್ಟೆ ಚವುಚ ಕಾರ ಮುಗಿಸಿಕೊಂಡು ಹಂಗೆ ಹೊರಟು ಬಂದಿದ್ದನಷ್ಟೆ) ಪಣಕ್ಕಿಟ್ಟನು. ಆದರೆ ಜಾಮಾತ್ತುಅದನ್ನು ತಿರಸ್ಕರಿಸಿದನಲ್ಲದೆ ಹೀಗಳೆದನು. ತಂಬಿಗೆಯ ಅಯ್ತಿಹಾಸವನ್ನೂ, ಅದರ ಗುಣ ಯಿಶೇಷಗಳನ್ನು ವರಣಿಸೀ ವರಣಿ ಸೀ ರಾಜಕುವರ ಸುಸ್ತಾದನು. ಆಗಿದ್ದು ಆಮಾತ್ಯನು 'ನಾಯಕರೇ, ಯೆಸ್ಥೆ, ಬಿಸ್ಥೆ ಬಂದು ತಿರುಪಾಲಯ್ಯನ ಮನೇಲಿ ಬೀಡು ಬಿಟ್ಟಿದ್ದಾರಂತೆ. ಯೀ ಕೂಡಲೆ ನೀವು ಹೋಗಿ ಯೇ ನಿಮ್ಮ ಅಮೂಲ್ಯ ವಸ್ತು ವನ್ನು ಅವರಿಗ್ಯಾಕೆ ಮಾರಬಾರದು?” ಯಂದು ಸಕಾಲಿಕ ಸಲಹೆ ನೀಡಿದನು. ವಲ್ಲದ ಮನಸ್ಸಿನಿಂದ ಕಾಟಯ್ಯನು ಆ ತಂಬಿಗೆಯೊಡನೆ.... ಶ್ರೇಷಿ« ಭೌವಚನಸಯ್ಯ ಸ್ವಾಗತಿಸದೆ ಯಿರಲಿಲ್ಲ, ಅವುಪಚಾರಿಕವಾಗಿ ಪರಂಗಿ ಮಂದಿಯನ್ನು ಪರಿಚಯಿಸದೆ ಯಿರಲಿಲ್ಲ, ನಿಂಬೆ ಪಾನಕಕೊಟ್ಟು ನಾಯಕನ ಹೊಟ್ಟೆ ತಣ್ಣಗೆ ಮಾಡದೆ ಯಿರಲಿಲ್ಲ. ರಾಜಪರಿವಾರದವರ ಪಯ್ಕೆ ಅಪರಿಮಿತ ಲೇವಾದೇವಿಯಿಟ್ಟುಕೊಂಡಿರುವ ನಾಯಕನನ್ನು ಅಲ್ಲಿಂದ ಸಾಗುಹಾಕಲು ಶ್ರೇಷಿ « ಮಾಡಿದ ಹತ್ತು ಹಲವು ಪ್ರಯತ್ನಗಳು ವಿಫಲಗೊಂಡವು. ತನಗೆ ತುತ್ತಾಗಿ ಸಾವುರ ರೂಪಾಯಿ ಬೇಕೆಂದು ಹೇಳುತ ನಾಯಕನು ತನ್ನ ಸೊಂಟದ ಮೂಲೆಯಿಂದ ಮಾಯಾವೀ(?) ತಂಬಿಗೆಯನ್ನು ತೆಗೆದು ಅವರ ಮುಂದಿಟ್ಟನು. ಯಿದೇನಿದ್ದೀತು ಅಂತ ಅವರು ತಿಕಿತಿಕ್ಕಿ ನೋಡುತ್ತಿರುವಾಗ್ಗೆ ಅದರ ಪ್ರಾಚೀನತೆಯನ್ನು ಯಿವರಿಸಿದನು. ಪರಂಗಿ ಮಂದಿಯು ಯಿದಕ್ಕೆ ಕಿಲುಬು ಕಾಸಿನ ಬೆಲೆಯಿಲ್ಲ ಯಂದು ಹೇಳಿ ದರಲ್ಲದೆ ಪಿಕದಾನಿ ತಂದುಕೊಟ್ಟಲ್ಲಿ ಅರವತ್ತು ರೂಪಾಯಿ ಕೊಡುವುದಾಗಿ ಹೇಳುತ್ತಿರುವಾಗ್ಗೆ ಅದನ್ನು ಕೇಳಿ ನಾಯಕನು ಪರಪರ ತಲೆಯನ್ನು ಕೆರೆದುಕೊಳ್ಳುತ್ತಿರುವಾಗ್ಗೆ... ಅದೇ ಕುದುರೆಡವು ಪಟ್ಟಣದ ಥಳಗೇರಿಯಲ್ಲಿ ಜರೆವ್ವ ತನ್ನ ಗಂಡನನ್ನು ತಾನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನದಿಂದ ಯಿರಮಿಸಿರಲಿಲ್ಲ. ತನ್ನ ಕೊಳ್ಳಾಗಿನ ತಾಳಿ ಭಾಗ್ಯ ವುಳುಕಿಸಿಕೊಳ್ಳಲಕ, ತನ್ನ ಹಣೆಯ ಕುಂಕುಮ ಬೊಟ್ಟು ವುಳುಸಿಕೊಳ್ಳಲಕ, ತನ್ನ ಸತೀತನದ ಗವುರವವ ಕಾಪಾಡಿಕೊಳ್ಳಲಕ ಆಕೆಯು ತನಗೆ ಆಶ್ರಯ ಕರುಣಿಸಿದ್ದಂಥಾ ಬೇಯಿನಮರದವ್ವನ ಅಗಾಧ ಬೊಡ್ಡೆಗೆ ಹಣೆ ಅಂಟಿಸಿ ಸಣುಮಾಡಿ ಚಾಲಕ ಹೋಗಿ ಮೋಡಿಕಾರ ಸಂಗಪ್ಪನನ್ನು ಕಂಡು ಬಂದಿದ್ದಳು, ಯಕ್ಕಶೇರಿಗೆ ಹೋಗಿ ಮಾಮಂತುರವಾದಿ ಮಶಲಪ್ಪನನ್ನು ಕಂಡು ಬಂದಿದ್ದಳು, ಬಂಡರೀಗೆ ಹೋಗಿ ಲಚ್ಚಯ್ಯ ಸಾನ ಕಂಡು ಬಂದಿದ್ದಳು, ಅವರು ಮಂತರಿಸಿ ಕೊಟ್ಟಿರುವಂಥಾ ತಾಯಿತ, ಲೋಬಾನ