ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಅವನ ಯಾಮಿನೀ ವಿನೋದೆ, ಎಂಬ ತಿದ್ದ ಪ್ರಜೆಗಳು, ತುಂಬ ವ್ಯಸನಾಕಾಂತರಾಗಿ ಮತ್ತೊಬ್ಬನನ್ನು ರಾಜನಾಗಿ ಏರ್ಪಡಿಸಿಕೊಳ್ಳಲು, ಒಪ್ಪಿಕೊಂಡರು ಇಸ್ಮರಕ್ಕೆ ರಾಜ ಕಮೂರನು ತನ್ನ ಭಂಡಾರದಿಂದ ಸಮಸ್ತವಾದ ಅಮೂಲ್ಯ ವಸ್ತುಗಳನ್ನು ತರಿಸಿ ಒಂಟೆಗಳಮೇಲೆ ಹೇರಿಸಿಕೊಂಡು, ಉತ್ತಮವಾದ ವಸ್ತ್ರಾಭರಣಗ ಳನ್ನು ಧರಿಸಿ, ಪರಿವಾರಸಮೇತನಾಗಿ ನಾನಾನಾದ್ಯಗಳು ಮೊಳಗುತ್ತಿರ ಲು, ಮುಂದೆಹರಟನು. ಇಸ್ಮರಲ್ಲಿಯೇ ಆ ಸುಲ್ತಾನನು, ಬಂದು ಬಹಳದಿನಗಳಾದರೂ ಪುನಹಹಿಂದಿರುಗಿ ಬಾರದೇ ಇರುವುದಕ್ಕೆ ಕಾರಣವ ನ್ನು ಆತನರಾದದಲ್ಲಿ ಸರ್ವರೂ ಸುಖವಾಗಿರುವರೆಂಬ ವಿಷಯವನ್ನು ತಿಳಿದುಕೊಂಡು, ಆತನನ್ನು ಇದಿರುಗೊಳ್ಳುವುದಕ್ಕಾಗಿ ಹೊರಟುಬರುತ್ತಿ, ರುವ ಪ್ರಜೆಗಳನ್ನು ಸಂತೋಕ್ಷದಿಂದ ಬರಮೂಡಿಕೊಂಡು, ಅವರೊಡನೆ ಕುಶಲವ ಕೈಯನ್ನು ಮೂಡಿ, ಪರಮೋತ್ಸಾಹದಿಂದಿದ್ದರು. ಬಳಿಕ ನು ಲ್ಯಾನನು, ತನ್ನ ರಾಜ್ಯವನ್ನು ಸೇರಿ, ಮರುದಿನ ಸಭಿಕರೆಲ್ಲರನ್ನೂ ಬರ ಮೂಡಿಕೊಂಡು, ತಾನುಮೂಡಿದ ಕೆಲಸವನ್ನು ನಡೆದಸಂಗತಿಯನ್ನು ಬರು ವುದಕ್ಕಾಗಿ ಗೊತ್ತುಮೂಡಿದ್ದ ಕಾಲಕ್ಕಿಂತಲೂ, ಸಮಯವು ಅಧಿಕವಾದು ದಕ್ಕೆ ಕಾರಣವನ್ನು ತಿಳಿಯಹೇಳಿ, ನೀಲದ್ವೀಪದ ರಾಜನನ್ನು ಅವರಿಗೆ ತೋರಿಸಿ ಈತನನ್ನು ಪುತ್ರನನ್ನಾಗಿ ಮೂಡಿಕೊಂಡಿರುವೆನೆಂದು ಹೇಳಿ ಅವರೆಲ್ಲರಿಗೂ ತಕ್ಕ ಬಹುಮನಗಳನ್ನು ಕೊಟ್ಟು ಸಂತೋಷದಿಂದಿದ್ದ ನು. ಹೀಗೆ ಸಂತೋಷವನ್ನು ಹೊಂದಿದ ಸುಲ್ತಾನನು, ಬೆಸ್ತರವನಿಗೆ, ವಿಶೇಷವಾಗಿ ಹಣವನ್ನು ಕೊಟ್ಟುದರಿಂದ, ಅವನ ಕುಟುಂಬದವರು, ಸು ಖವಾಗಿದ್ದರೆಂದು ಹೇಳಿ ಮಹರಜಾದಿಯು, ಕಥೆಯನ್ನು ಮುಗಿಸಿದಳು. ದಿನರಜಾದಿಯು, ಅಕ್ಕಾ! ನೀನು ಈಗಮುಗಿಸಿದ ಬೆಸ್ತರವನ ಮುತ್ತು, ಭೂತದ ಕಥೆಯು ಕೇಳುವುದಕ್ಕೆ ಅತ್ಯಂತಮನೋಹರವಾಗಿದ್ದಿತು, ನೀ ನು ಕಲಿತಿರುವ ಕಥೆಗಳಲ್ಲಿ ಇದಕ್ಕಿಂತಲೂ, ಅತಿಶಯವಾದ ಕಥೆಯನ್ನು, ಹೇಳಂದುಕೊಳಲು, ಸಹರಜಾದಿಯು, ತಂಗೀ ! ಈಗ ಬೆಳಗಾಗಿಹೋಯಿ ತು, ಸುಲ್ತಾನರು ಪ್ರೀತಿಯಿಂದ ನನ್ನ ಬಾಣವನ್ನುಳಿಸಿದರೆ, ನಾಳೆಯ ದಿನ ಇದಕ್ಕಿಂತಲೂ, ಅತಿಯವಾದ ಮತ್ತೊಂದುಕಥೆಯನ್ನು ಹೇಳುವ ನೆಂದು ಸೂಚಿಸಲು, ಸುಲ್ತಾನನು, ಸುಲ್ತಾನಿಯ ಕಥಾಸಾರಸ್ಯವನ್ನು