ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ೧೧೯" ಸಂಭಾರದ ವ್ಯಗಳನ್ನು ತೆಗೆದುಕೊಂಡು, ಗೂಡೆಯಲ್ಲಿಟ್ಟು ಗೂಡೆಯು ತುಂಬಿಹೋಗಿದ್ದರೂ, ಹಿಂದೆ ಬಾ ಎಂದು ಹೇಳಿದಳು. ಅವರಿಬ್ಬರೂ ಒಂದಾನೊಂದು ಮನೋಹರವಾದ ದೊಡ್ಮನೆ ಯ ಬಾಗಿಲಿಗೆ ಬಂದು, ಕದವನ್ನು ತಟ್ಟಿದರು. ಆ ಕದವು ದಂತಮಯ ನಾದ ಕೆತ್ತನೆಯಕಲಸದಿಂದ ಕೂಡಿದ್ದಿತು. ಕೂಡಲೆ ಕದವನ್ನು ತೆರೆಯ ತು, ಅವರಿಬ್ಬರೂ ಒಳಗೆ ಪ್ರವೇಶಮೂಡಿದರು. ಇಲ್ಲಿಗೆ ಬೆಳಗಾದುದರಿಂ ದ ನಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ದಿನರಜಾದಿಯು, ಅಕಾ ಈ ಕಥೆಯು ಪಾ ರಂಭದಲೆ ಇನ್ನೊಂದು ವಿನೋದಕರವಾಗಿರುವುದರಿಂ ದ ಇದರಲ್ಲಿರುವ ಸಂಪೂರ್ಣವಾದ ಆನಂದವನ್ನು ಸುಲ್ತಾನರು, ಅನುಭವಿ ಸುವರೆಂದು ನಾನು ನಂಬಿರುವೆನೆಂದು ಹೇಳಲು ಸುಲ್ತಾನನು ಮುಂದಿನ ಕಥಾಸಂದರ್ಭವನ್ನು ಕೇಳಬೇಕೆಂಬ ಕುತೂಹಲದಿಂದ ನರಜೆದಿಯು ನ್ನು ಕೊಲ್ಲಕೂಡದೆಂದು ಹೇಳಿ ಹೊರಟು ಹೋದನು. ೨೯ ನೆಯ ರಾತ್ರಿ ಕಥೆ ಮರುದಿನ ರಾತ್ರಿ ಕಳೆದು, ಪೂರ್ವದಿಕ್ಕ ಕೆಂದಳಿರಬಣ್ಣವನ್ನು ಹೊಂದಿತು. ದಿನರಜಾದಿಯು, ವಿಚ್ಚ ತಳು. ಕೂಡಲೆ ಪಹರಜಾದಿ ಯನ್ನು ನೋಡಿ ಅಕ್ಕಾ ! ನಿನ್ನೆ ದಿನ ನೀನು ಆರಂಭಿಸಿದಕಥೆಯನ್ನು ಕೊ , ನೆಗಾಣಿಸೆಂದು ಬೇಡಿಕೊಳ್ಳುವೆನೆಂದು ಹೇಳಿದಳು, ನಹರಜಾದಿಯು, ಅವಳ ಇಷ್ಟಾನುಸಾರವಾಗಿ, ಕಥೆಯನ್ನು ಹೇಳತೊಡಗಿದಳು. ಬಾಗಿಲ ನ್ನು ತೆಗೆಯುವವರೆಗೂ, ಆ ಕೂಲಿಯವನು, ದೊರೆಸಾನಿಯನ್ನು ನೋಡಿ ನಾನಾಯೋಚನೆಗಳಿಂದ ಕೊರಗಿದನು. ಇಂತಹ ರೂಪವತಿಯಾದ ದೊರೆ ಸಾನಿಯು, ಆಹಾರಪದಾರ್ಥಗಳನ್ನು ಕೊಳ್ಳುವುದಕ್ಕಾಗಿ ಹೊರಗೆಬರಬ ಹುದೆ ? ಇವಳಮುಖವನ್ನು ನೋಡಿದರೆ ಇವಳು ರಾಜಪುತ್ರಿ ಯಂತ ಕಾ ಣುವಳು. ಆದುದರಿಂದ ಇವಳೆಂದಿಗೂ ಕೂಲಿಕಾರಳಾದ ದಾದಿಯಲ್ಲ. ಇವೆಲ್ಲವನ್ನು ಗೊತ್ತುಮಾಡಿ ತಿಳಿದುಕೊಳ್ಳುವುದಕ್ಕಾಗಿ, ಆಕಯನ್ನೇ ಕೇಳಿ ನಿಸ್ಸಂದೇಹವಾಗಿ ತಿಳಿದುಕೊಳ್ಳಬೇಕೆಂದು, ಪ್ರಯತ್ನ ಮಾಡುತ್ತಿದ್ದನು. ಆಗ ಬಾಗಿಲನ್ನು ತೆಗೆವುದಕ್ಕಾಗಿ ಮತ್ತೊಬ್ಬ ರೂಪವತಿಯಾದ ಹೆಂಗಸು ಹೊರಗೆಬರಲು ಅವಳನ್ನು ನೋಡಿ ಕೂಲಿಕಾರನು, ಅತ್ಯಂತಭ್ರಾಂತಿಯ