ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಹೋಗುವಾಗೋ ಮುಂದಿನ ಕಥೆಯನ್ನು ನಾಳೆದಿನಕೇಳಿ, ಆ ಮಾರುಜನ ಕಾಲೆಂಡರುಗಳಿಗೂ, ಬಲಗಣ್ಣು ಕುರುಡಾಗಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕೆಂದು ಹೇಳಿ ಹೊರಟುಹೋದನು. ೩೩ ನೆಯ ರಾತ್ರಿ ಕಥೆ, ಮರುದಿನ ಬೆಳಗಿನಜಾವದಲೆದು, ದಿನರಜಾದಿಯು, ಸುಲ್ತಾ ನನನ್ನು ಎಚ್ಚರಗೊಳಿಸಿ, ತಂಗಿಯಲ್ಲಿ ಮಿತಿಯುಳ್ಳವಳಾದ ಅಕ್ಕಾ ! ಆ ದೊರೆಸಾನಿಗಳಿಗೂ, ಮಾರುಜನ ಕಾಲೆಂಡರುಗಳಿಗೂ, ಸನ್ಯಾಸಿನಿಯ ರಿಗೂ, ನಡೆದ ಕಥೆಯನ್ನು ಹೇಳಬೇಕೆಂದುಕೊಳಲು, ಸಹರಜಾದಿಯು, ಕಥೆಯನ್ನು ಮುಂದೆ ಹೇಳಸಾಗಿದಳು. ಆಗ ತೃಪ್ತಿಯಾಗಿ ಊಟಮಾ ಡಿ ಸಂತೋಷದಿಂದ ಸಾನಮೂಡಿದ ಕಾಲೆಂಡರುಗಳು, ದೊರೆಸಾನಿಯನ್ನು ನೋಡಿ, ನಿಮ್ಮ ಮನೆಯಲ್ಲಿ ವಾದಗಳೇನಾದರೂ ಇದ್ದರೆ ತರಿಸಿಕೊಡಿ. ಅದರಿಂದ ನಿಮಗೆ ಅತ್ಯಂತವಾದ ಆನಂದವನ್ನುಂಟುಮಾಡುವೆನೆಂದು ಹೇಳಿ ದರು. ಅದಕ್ಕೆ ಅವರು, ಅನುವಾದಿಸಿದಕೂಡಲೆ, ಸಮಯ, ತಮ್ಮದೇಶ ದ ತರಹೆಯ ಎಂದುಕೊಳಲನ್ನು, ಪಾರಶಿಯದೇಶದ ತರತೆಯ ಮತ್ತೊಂ ದು ನಾಗಸರವನ್ನು ಅದರಸುಗಡ ಒಂದು ಮೃದಂಗವನ್ನು ತಂದು ಅವರ ಮುಂದಿಟ್ಟಳು. ಆಗ ಅವುಗಳಲ್ಲಿ ಒಬ್ಬೊಬ್ಬರೊಂದೊಂದನ್ನು ತೆಗೆದು ಕೊಂಡು, ಹೊಂದಿಕೆಯಾಗಿ ರಾಗವನ್ನು ಹಾಡುತ್ತಿದ್ದರು. ಆ ದೊರೆ ಸಾನಿಗಳು, ತಮಗೆ ಆ ರಾಗವು ತಿಳಿದಿದ್ದುದರಿಂದ ತಾವು ಅವರಸಂಗಡ ಹಾ ಕಳ ಡುತ್ತಾ ಆ ಹಾಡಿನಲ್ಲಿರುವ ಶಬ್ದಾರ್ಥಗಳನ್ನು ಕೇಳುವುದಕ್ಕಾಗಿ ನಿಲಿಸಿ, ತೃಪ್ತಿಕರವಾಗಿ ನಗುತ್ತಿದ್ದರು. ಇವರುಗಳು ಈ ತೆರದಿಂದ ಆನಂದಪರ ವಶರಾಗಿರುತ್ತಿರುವಾಗ, ತಲೆ ಬಾಗಿಲಬಳಿಯಲ್ಲಿ ಯಾರೋ ಬಂದು ಕದವನ್ನು ತಟ್ಟಿದರು. ಸಧಯೆಯು, ಹಾಡುವುದನ್ನು ಬಿಟ್ಟು, ಯಾರೋಬಂದಿರು ವರೆಂದು, ನೋಡುವುದಕ್ಕೆ ಹೋದಳು. ಸುಲ್ತಾನರೇ ! ಇನ್ನುಹೊತ್ತಿ ನಮೇಲೆ ತಮ್ಮ ಮನೆಯ ತಲೆಬಾಗಿಲನ್ನು ಹೊಡೆವುದಕ್ಕೆ ಕಾರಣವೇನೆಂ ದು, ತಿಳಿದುಕೊಳ್ಳಬೇಕಾದುದು, ಆವಶ್ಯಕವಾದುದಲ್ಲವೆ ? ಅದು ಏನಂದರೆ ಕಲೀಫಹರ್ರೋ ಅಲರಾದನೆಂಬ ರಾಜನು, ತಮ್ಮ ದಟ್ಟಣವು ಸುಂದರ ವಾಗಿಯಾ, ನಿರ್ಮಲವಾಗಿಯಾ, ಕ್ರಮವನ್ನು ತಪ್ಪದೆ ಇರುವುದಾಗಿ