ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ಯವನ ಯಾಮಿನೀ ವಿನೋದ, ಎಂಬ ಗ ರಾತ್ರಿ ಯಾಗುವುದ ! ಎಂದು ಆತುರದಿಂದ ಇರುಳನ್ನೇ ಎದುರು ನೋಡುತ್ತಿದ್ದನು. - ೩.೪ ನೆಯ ರಾತ್ರಿ, ಕಥೆ ಆ ದೊರಸನಿಗಳ ಮನೆಗೆ ಕಲೀಫನು ಬಂದಮೇಲೆ, ನಡೆದನಂ ಗತಿಯನ್ನು ತಿಳಿದುಕೊಳ್ಳಬೇಕೆಂದು, ಸುಲ್ತಾನನಿಗಿದ್ದ ಅಪೇಕ್ಷೆಗಿಂತಲೂ, ಅಧಿಕವಾದ ಅಭಿಲಾಷೆಯು, ದಿನರಜಾದಿಗೆ ಇದ್ದುದರಿಂದ, ಬೆಳಗಿನ ಜಾವ ದಿದ್ದು, ಅಕ್ಕಾ! ಆ ಕಾಲೆಂಡರುಗಳ ಕಥೆಯನ್ನು ಕೊನೆಸಾಗಿಸಿ ಹೇಳೆಂದು, ಕೇಳಿದಕೂಡಲೇ ನಹರಜಾದಿಯು, ಸುಲ್ತಾನನಿಂದಪ್ಪಣೆಯ ನ್ನು ಪಡೆದು, ಹೇಳಲಾರಂಭಿಸಿದಳು. ನಾಯಿಯು, ಆ ಮಾರುಜನಗ ಳನ್ನು ಕರೆದುಕೊಂಡು ಒಳಹೊಕ್ಕ ಕೂಡಲೇ ಅಲ್ಲಿದ್ದ ದೊರೆಸಾನಿಯರೂ, ಕೂಲಿಯವನ್ನೂ, ಕಾಲೆಂಡರುಗಳೂ, ಅವರನ್ನು ನೋಡಿ, ಬಹುಮರ್ಯಾ ದೆಯಿಂದ ವಂದನೆಗಳನ್ನು ಮಾಡಿದರು. ಬಳಿಕ ಆ ದೊರೆಸಾನಿಗಳಲ್ಲಿ ಮು ಖಳಾದ ಜೋಬದಿಯು, ಆ ವರ್ತಕರನ್ನು ನೋಡಿ, ತನ್ನ ಗಂಭೀರವಾದ ಸ್ವರದಿಂದ ಮುಖವಿಲಾಸವನ್ನು ಬೀರುತ್ತಾ, ಅಯಾ! ನಿಮ್ಮಗಳಿಗೆ ಇಲ್ಲಿಗೆ ಬಂದಮೇಲೆ ಉಪಚಾರಕ್ಕಾಗಿ ಅಲ್ಲದೆ ನಿಮ್ಮ ಆಗಮನವು, ನಿಜವಾ ಗಿಯಾ ನನಗೆ ಶುಭಸೂಚಕವಾದ ಸಂತೋಷವನ್ನುಂಟು ಮೂಡಿರುವು ದು. ಆದುದರಿಂದನಿನಗೆ ನಾನು ಮುಖ್ಯವಾಗಿ ಹೇಳಬೇಕಾಗಿರುವ ಬಹು ಆವಶ್ಯಕವಾದ ಒಂದಾನೊಂದು ವಾಕ್ಯವಿರುವುದೆನಲು, ಮಂತಿ ಯು, ಅಯಾ ! ಇಂತಹ ಸುಂದರಾರದಸ್ಮಿಯರು, ನಮ್ಮನ್ನು ಬೇಡಿಕೊಳ್ಳ ಬೇಕಾಗಿರುವ ಬಿನ್ನಹವೇನೋ ಹೇಳ ಬೇಕೆಂದು, ಮಂತ್ರಿಯು ಗಂಭೀರ ವಾಕ್ಕಿನಿಂದ ಮಾತನಾಡಿದನು. ಆಗ ಜೋಬದಿಯು ಅಯಾ! ನೀವುಗ ೪ು ಈಸ್ಮಳದಲ್ಲಿರುವವರೆಗೂ ಕಣ್ಣುಳ್ಳವಗಂತಿರಬೇಕೇ ಹೊರತು, ಎಷ್ಟು ಮಾತ್ರ ಕೂ, ನಾಲಗೆಯುಳ್ಳವರಂತೆ ಇರಕೂಡದು. ಅಲ್ಲದೆ ನೀವು ಇ ಕ್ಲಿನ ವಿಷಯಗಳನ್ನು ನೋಡಿದರೂ, ಅದರಕಾರಣವನ್ನು ಕುರಿತು, ಪ್ರ) ಮಾಡಕೂಡದೆಂದು, ಹೇಳಿ ನಿಮಗೆ ಸಂಬಂಧಪಡದಿರುವ ವಿಷಯವನ್ನು ಕುರಿತು, ನೀವುಗಳು ಮಾತನಾಡಕೂಡದು. ಈ ಸಂಗತಿಗಳಿಗೆ ಸಮ್ಮತಿ ಸಿ ನೀವುಗಳು, ನಡೆದುಕೊಳ್ಳಬೇಕೆಂದು ಹೇಳಿದಳು. ಅದನ್ನು ಕೇಳಿ