ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

k೬ ಯನನ ಯಾಮಿನೀ ವಿನೋದ ಎಂಬ, ವಂತನಾಗಿಯಾ, ಇರುವ ಹರ್ರೋ ಅಲರಾ ದನೆಂಬ ಏಳುಜನ ಕರೀ ಫರು, ಆಳುವದೇಶವನ್ನು ಸೇರುವವರೆಗೂ ಒಂದು ಕಡೆಯಾಗಲಿ ಒಂದೂ ರಿನಲ್ಲಾಗಲಿ, ನಿಲ್ಲಲೇ ಇಲ್ಲ. ಅಲ್ಲಿಗೆ ಬಂದಮೇಲೆ ಯಾವ ಭಯವೂ ಇಲ್ಲವೆಂ ದುತಿಳಿದು, ಬಾಗದಾದು ಪಟ್ಟಣವನ್ನು ಸೇರಿ, ಪರಾಕ್ರಮಶಾಲಿಯಾದ, ಅಲರಾಲ್ಡ್ದನಿಗೆ ಪಾದಾಕ |ಂತನಾಗಬೇಕೆಂದು ಕೊಂಡಿದ್ದನು. ಅವರ ಬಳಿಗೆ ಹೋಗಿ ನಾದದಮೇಲೆ ಬಿದ್ದು, ನಿರ್ಭಾಗ್ಯನಾದ ನನ್ನ ಚರಿತ್ರೆಯ ನ್ನು ಹೇಳಿಕೊಂಡರೆ ದೀನನಾದನನ್ನಲ್ಲಿ ಕರುಣವನ್ನು ತೋರಿಸದೆ ಇರಲಾರ ನಂದೆಂದುಕೊಂಡೆನು. ಹೆಚ್ಚಾಗಿ ಹೇಳಿದುದರಿಂದ ಫಲವೇನು ? ನಾನು ಈದಿನ ಸೂರ್ಯಾಸ್ತಮಯ ಸಮಯಕ್ಕೆ ಈ ಮೂರುಬಾಗಿ೬ಗಬಂದು, ಎಲ್ಲಿಗೆ ಹೋಗಬೇಕು, ಏನುಮೂಡಬೇಕು, ಎಂಬುದನ್ನು ಕುರಿತು, ಯಾ ಚಿಸುತ್ತಾ ಇದ್ದೆನು. ಆಗ ನನ್ನ ಪಕ್ಕದಲ್ಲಿರುವ ಮತ್ತೊಬ್ಬ ಸನ್ಯಾಸಿ ಯು, ನನ್ನ ಬಳಿಗೆಬಂದು, ವಂದನೆಗಳನ್ನು ನೋಡಿದನು. ನಾನು ಆತನಿ ಗ ಪ್ರತಿವಂದನೆಗಳನ್ನು ಸಮರ್ಪಿಸಿದೆನು. ಅಲ್ಲದೆ ಆತನನ್ನು ನೋಡಿ, ನೀವು ಈ ಪಟ್ಟಣಕ್ಕೆ ಹೊಸಬರೊ ಎಂದು ಕೇಳಲು, ಅವರು ಅದಕ್ಕೆ ನೂ ಸಂದೇಹವಿಲ್ಲವೆಂದರು. ಬಳಿಕ ನಾವಿಬ್ಬರೂ, ಸೇರಿ ನಮ್ಮ ಪಕ್ಕದ ಲ್ಲಿ ಕುಳಿತಿರುವ ಮೂರನೆ ಸನ್ಯಾಸಿಯಬಳಿಗೆ ಬಂದು, ವಂದನೆಗಳನ್ನು ಮಾ ಡಿ, ನೀವು ಇಲ್ಲಿಗೆ ಯಾವಾಗಬಂದಿರೆಂದು ಕೇಳಲು, ಅವರು ಅಯಾ ! ನಿಮ್ಮ ಹಾಗೆ ನಾನು ಈಗ ತಾನೇ ಬಂದೆನು, ನಿಮ್ಮನ್ನು ನೋಡಿದರೆ ಈವಣ ರಿಗೆ ಹೊಸಬರಾಗಿ ಕಾಣುತ್ತೀರಿ ಎಂದರು. ಬಳಿಕ ನಾವು ಮೂವರು ಒಂ ದೇಕಡೆ ಇರುವಂತೆ ಗೊತ್ತುಮೂಡಿಕೊಂಡು ನಾವು ಈವಟ್ಟಣಕ್ಕೆ ಹೊಸ ಬರಾಗಿರುವೆವು. ಇಲ್ಲಿ ನನ್ನ ಗುರುತು ಕಂಡವರಾರೂ ಇಲ್ಲ. ಆದುದ ರಿಂದ ಎಲ್ಲಿಗೆಹೋಗಬಹುದೆಂದು ಯೋಚಿಸುತ್ತಾ, ನಿಮ್ಮ ಮನೆಯ ಬಾಗಿಲ ಬಳಿಗೆ ಬಂದು, ಬಹಳ ಹೊತ್ತಾದುದರಿಂದ ದೈರ್ಯವಾಗಿ ಬಾಗಿಲನ್ನು ತಟ್ಟಿ ದೆವು, ಅದಕ್ಕೆ ತಕ್ಕ ಹಾಗೆ ನೀವು ದಯಮಡಿ, ನನ್ನನ್ನು ಒಳಹೊಗಿಸಿ ಕೊಂಡಿರಿ. ಇದಕ್ಕಾಗಿ ನಮ್ಮ ಕೈಲಾದ ಉಪಕಾರವನ್ನು ಮಾಡುವುದ ಕ್ಕೆ ಸಿದ್ಧರಾಗಿರುವೆವು. ನನ್ನ ಬಲಗಣ್ಣು ಕುರುಡಾಗಿರುವುದಕ್ಕೂ ಗಡ್ಡ ವನ್ನು ಕಣ್ಣುಹುಬ್ಬನ್ನು ಬೆಳೆಸುವುದಕ್ಕೂ ಕಾರಣವನ್ನೂ, ನಾನು ಇಲ್ಲಿಗೆ ಬಂದುದಕ್ಕೆ ನಿಮಿತ್ತವನ್ನು ತಿಳಿಯಹೇಳೆಂದು ನೀವು ಆಜ್ಞಾಪಿಸಿ