ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೦ ಯವನ ಯಾಮಿನೀ ವಿನೋದ ಎಂಬ, ತಾರಕೈಯ್ಯಲ್ಲಿಯಾ, ಕೊಡುವುದಿಲ್ಲವೆಂದು, ಆತನು ಹೇಳುತ್ತಾನಾದು ದರಿಂದ ಆತನಬಳಿಗೆಹೋಗಿ ಮಾತನಾಡಿ ಬಾ ! ಎಂದನು. ಬಳಿಕ ಅವನ ಮನೆಯಬಾಗಿಲಿಗೆ ಬಂದು ಒಬ್ಬ ಮುದುಕನು ಕೂಗಿದನು. ಅದನ್ನು ಕೇ ೪ ನಾನು ಗಡಗಡನೆ ನಡುಗುತ್ತಿರುವ, ಬಾಗಿಲು ತನ್ನ ತಾನೆ ತೆರೆ ದುಕೊಂಡಿತು. ವೇಷಧಾರಿಯಾಗಿದ್ದ ಮುದುಕನು, ಕೊಡಲಿಯನ್ನು ಹಗ್ಗವನ್ನು ನನ್ನ ಮುಂದುಗಡೆ ಹಾಕಿದನು. ಇದೆಲಿದಿದದ ರಾಜಪುತ್ರಿ ಯನ್ನು ಬಲಾತ್ಕಾರವಾಗಿ ಎತ್ತಿಕೊಂಡುಹೋಗಿದ್ದ, ರಾಕ್ಷಸನು ಇವನೇ ಆದುದರಿಂದ ಆತನನ್ನು ನೋಡಿ ನಾನು ಪಿಶಾಚಿಗಳಿಗೆ ದೊರೆಯಾದ ಎಲ್ಲಿಸು ಎಂಬವನ ಮಾಮ್ಮಗನು. ಇದು ನಿನ್ನ ಕೊಡಲಿಯಲ್ಲವೆ ? ಇದು ನಿನ್ನ ದಾರವಲ್ಲವೆ ? ಎಂದು ಮಾತನಾಡುತ್ತಿದ್ದನು. ಇಸ್ಮರಿ ಬೆಳಗಾದು ದರಿಂದ, ಪ್ರಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನರು, ಈ ಮನೋಹರವಾದ ಕಾಲೆಂಡರು ಕಥೆಯನ್ನು ಪೂರ್ತಿಮಾಡಿ ಹೇಳುವವ ರೆಗೂ, ಕೇಳಬೇಕೆಂದು ಅಪೇಕ್ಷೆಯನ್ನು ಹೊಂದಿ, ಹೊರಟುಹೋದರು. ೪ ನೆಯ ರಾತ್ರಿ ಕಥೆ ದಿನರಜಾದಿಯು, ಮರುದಿನ ಬೆಳಿಗ್ಗೆ ಎದ್ದು, ರಾಣಿಯನ್ನು ಕುರಿತು, ಅಕ್ಕಾ ! ನೀನು ಎಚ್ಚರವಾಗಿದ್ದರೆ, ಆ ಎರಡನೆಕಾಲೆಂಡರಿನ ಕಥೆಯನ್ನು ಪೂರ್ತಿಮಾಡೆಂದು, ಕೇಳಲು ನಹರಜಾದಿಯು, ಸುಲ್ತಾನ ನನ್ನು ಕುರಿತು, ಕಥೆಯನ್ನು ಹೇಳಲಾರಂಭಿಸಿದಳು. ಕಾಲೆಂಡರು, ಜೋ ಬದಿಯನ್ನು ನೋಡಿ, ಅನಾ ! ಅ ರಾಕ್ಷಸನು ಇಂತಂದು ನನ್ನ ಸಂಗಡ ಹೇಳಿದಮೇಲೆ, ನಾನು ಆತನಿಗೆ ಪ್ರತ್ಯುತ್ತರವನ್ನು ಹೇಳದಿದ್ದರೂ ವಿಶೇಷವಾದ ಭೀತಿಯನ್ನು ಹೊಂದಿದವನಾದೆನು. ಆತನು ನನ್ನ ನಡುವ ನ್ನು ಹಿಡಿದು ಬಲಾತ್ಕಾರದಿಂದ ಎಳೆದುಕೊಂಡು, ಆಕಾಶಮಾರ್ಗಕ್ಕೆ ತೆಗೆದು ಕೊಂಡು ಬಹುದೂರದವರಿಗೆ ಹೋದರೂ, ಇಂತಹಸ್ಥಳಕ್ಕೆ ಬಂದಿರುವ ನೆಂದು, ನನಗೆ ಗೊತ್ತೇ ಆಗಲಿಲ್ಲ. ಆಗ ಆತನು ಭೂಮಿಯನ್ನು ಹೊಂದಿ ಕಾಲಿನಿಂದೊದೆದ ಕಾಡಲೆ, ಅದು ತೆರೆದುಕೊಂಡಿತು. ಆತನು ಆ ಬಾಗಿಲಿ ನಲ್ಲಿ ಹೊಕ್ಕು, ಒಳಗೆ ಹೋದಕೂಡಲೆ ಇದೆನಿದಿದದ ರಾಜಕುವರಿ