ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦ ಯವನ ಯಾಮಿನೀ ವಿನೋದ ಎಂಟು, ದಲ್ಲಿ ಎರಡನೆಯ ಸಾರಿ ಪ್ರಯಾಣಮೂಡಿದ ಕಥೆಯನ್ನು ಹೇಳಬೇಕಂದಿ ರುಷನೆನಲು, ಅವರೆಲ್ಲರೂ, ಅನುಮೋದಿಸಿದರು. ಬಳಿಕ ನಿಂದುಬಾದನು ಹೀಗೆಂದು ಹೇಳಲಾರಂಭಿಸಿದನು. ಓ ನಿಂದು ಬಾದನ ಎರಡನೆಯ ಪ್ರಯಾಣ. ಅಯಾ ! ನಾನು ಮೊದಲನೆಯ ಪ್ರಯಾಣವನ್ನು ಮುಗಿಸಿ, ಬಗದಾದಿಗೆಬಂದು, ಸಸ್ಯನಾಗಿ ವಾಸಮೂಡಿಕೊಂಡಿರಬೇಕೆಂದು, ಬಹು ಕಾಲದವರೆಗೂ, ಸುಮ್ಮನೆ ಇದ್ದನು. ಆದರೆ ಯಾವಕಾರ್ಯವೂ ಇಲ್ಲ ದೆ ಸುಮ್ಮನೆ ಕಾಲ ಕಳೆಯುವುದಕ್ಕೆ ಮನಸ್ಸು ಬಾರದುದರಿಂದ, ಪುನಹ ವಾವಾರಮೂಡಬೇಕೆಂಬ ಅಭಿಲಾಷೆಯಿಂದ, ನನಗೆ ಬೇಕಾದ ಸರಕುಗಳೆಲ್ಲ ವನ್ನೂ, ಸಿದ್ದ ಮೂಡಿಕೊಂಡು, ಘನವಂತರಾದ ವರ್ತಕರನ್ನು ಸೇರಿ, ಹಡಗಿನಲ್ಲಿ ಸಾಮಾನುಗಳನ್ನು ತುಂಬಿಕೊಂಡು, ಪ್ರಯಾಣಮಾಡಿದೆನು. ಹೀಗೆ ಪ್ರಯಾಣಮಾಡುತ್ತಾ ದಾರಿಯಲ್ಲಿ ಸಿಕ್ಕಿದ ದಿನಗಳಲ್ಲಿ ಉತ್ತಮ ತರದ ಲಾಭವನ್ನು ಹೊಂದಿ, ನಮ್ಮ ಸರಕುಗಳನ್ನು ವರಿಕೊಂಡು, ಮುಂದೆ ಹೊರಟು ಒಂದಾನೊಂದು, ದಿನದಬಳಿಗೆ ಬಂದು, ಹಡಗನ್ನು ನಿಲ್ಲಿಸಿದೆವು. ಆ ದ್ವೀಪದಲ್ಲಿ ಮನುಷ್ಯರಾಗಲೀ, ಮೃಗಗಳಾಗಲಿ, ವ್ಯಕ್ತಿ ಗಳಾಗಲಿ, ಇರಲಿಲ್ಲ. ಹಸುರಾಗಿರುವ ಸ್ಥಳದಲ್ಲಿ ಪ್ರವಾಹಗಳು ಮತ ) ಹರಿಯುತ್ತಿದ್ದವು. ಆ ರಮಣೀಯವಾದ ಸ್ಥಳವನ್ನು ನೋಡುತ್ತಾ ಕೆಲವರು, ಹಣ್ಣುಗಳನ್ನೂ, ಇನ್ನು ಕೆಲವರು ಪುಪ್ಪಗಳನ್ನು ಕೊಯ್ದು ಸಂತೂ ನದಿಂದ ವಿಹರಿಸುತ್ತಿದ್ದರು. ನಾನಾದರೋ ಪ್ರವಾಹದ ಮಧ್ಯದಲ್ಲಿದ್ದ, ಒಂದು ಬಂಡೆಯಮೇಲೆ ಕುಳಿತು, ಸ್ವಲ್ಪ ಸಾರಾಯಿಯನ್ನು ಕುಡಿದು, ಹಣ್ಣುಗಳನ್ನು ತಿಂದು, ಬಳಿಕ ಆ ರಮಣೀಯವಾದ ಸ್ಥಳದಲ್ಲಿಯೇ ಮ ಲಗಿಕೊಂಡು, ನಿದ್ದೆ ಮಾಡುತ್ತಾ ಇದ್ದನು. ಆದರೆ ಎಷ್ಟು ಹೊತ್ತಿನವ