ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಹಸ ಯಾಮಿನೀ ವಿನೋದ ವಿಂಬು, ರಾಜನ ದರ್ಶನವನ್ನು ಮಾಡಿಸಿದನು. ಸುಲ್ತಾನನು ಆ ಹುಡುಗನ ಬು ಏತಕಿಗೂ, ಸೌಂದರ್ಯಕ್ಕೂ ಬಹಳವಾಗಿ ಮುಚ್ಚಿ ಹೊಗಳಿದನು, ಮಂತ್ರಿಯಾದ ನೌರೋದೀನನು ತನ್ನಧಿಕಾರವನ್ನು ತನ್ನ ಮಗನು ಅನು ಭವಿಸುವಂತ ಮಾಡಬೇಕು.ಭಿಲಾಷಯಿಂದ, ತಾನು ಮಾಡಬೇಕಾದ ಪ ಯತ್ನಗಳನ್ನು ಮಾಡಿ, ದೈವಯೋಗದಿಂದ ದೇಹಾಲಸ್ಯವುಂಟಾಗಿ ಸಾ ಯುವಹಾಗಾದನು. ಆಗಲೇ ತನ್ನ ಮಗನನ್ನು ಕರೆದು, ಅಯ್ಯಾ ! ಕು ಮಾರಕ, ಈ ವುಸಚವು ಶಾಶ್ವತವಾದುದಲ್ಲ, ನಾನು ಈಗ ಸಾಯುವುದ ಕ್ಕೆ ಸಿದ್ಧನಾಗಿರುವೆನು, ನೀನು ಕೂಡ ಇದಕ್ಕೆ ಹೆದರದ ನಡತೆಯನ್ನು ಯೋಗ್ಯರೀತಿಯಿಂದಿಟ್ಟುಕೊಂಡಿರುತ್ತಾ ಇರು, ಮರಣಕಾಲದಲ್ಲಿ ಮನ ಸ್ಸಿಗೆ ಬಹು ಕಮ್ಮವುಂಟಾಗುವುದರಿಂದ ನೀನು ಈ ವಿಷಯದಲ್ಲಿ ಜಾಗ ರೂಕನಾಗಿ, ಭಗವದಿಷಯವನ್ನು ನಿನ್ನ ಉವಾಧ ಯರಿಂದ ತಿಳಿದು ಕೊಂಡಿರುವ, ಇತರ ವಿಷಯಗಳನ್ನೂ ಆಗಾಗ್ಗೆ ನೆನೆಯುತ್ತಾ ಇರು, ಮನುಷ್ಯನಾದವನು ತನ್ನನ್ನು ತಾನುತಿಳಿದುಕೊಳ್ಳಲೇಬೇಕಾಗಿರುವುದರಿಂ ದ ಮೊದಲು ತಾನಂಥವನೆಂಬುದನ್ನು ತಿಳಿದುಕೊಳ್ಳಬೇಕು. ಅದನ್ನು ತಿಳಿಯದಿದ್ದರೆ ತನಗೆ ಸುಖವೆಂದಿಗೂ ಉಂಟಾಗಲಾರದು. ಆದುದರಿಂದ ನಾನು ಇಂಥವನೆಂಬ ಸುಗತಿಯನ್ನು ನಾನು ನಿನಗೆ ಹೇಳುತ್ತೇನೆ ಕೇಳು. ನಾನು ಈಜಿಫ್ಟ್ ದೇಶದವನು, ನನ್ನ ತಂದೆಯು ಸ್ವಭಾವತಃ ಆ ದೇಶದ ರಾಜನಿಗೆ ಮಂತ್ರಿಯಾಗಿದ್ದನು, ನಾನು ಕೆಲವು ಕಾಲ ಮಂತ್ರಿಪದವಿಯ ನ್ನು ಅನುಭವಿಸಿದೆನು, ಆದರೆ ನಿನ್ನ ದೊಡ್ಡಪ್ಪನಾದ ಸಂಸುದ್ದೀfಮಹ ಮೃದನಂಬ ನನ್ನ ಅಣ್ಣನಿಗೂ, ನನಗೂ ಸರಿಬೀಳದುದರಿಂದ ನಾನು ಇಲ್ಲಿ ಗ ಬಂದು, ಗೌರವವನ್ನು ಸಂಪಾದಿಸಿಕೊಂಡು ಸುಖವನ್ನು ಹೊಂದುತ್ತಿ ರುವನು. ಈ ವಿಷಯವನ್ನು ನನ್ನ ಬಳಿಯಲ್ಲಿರುವ ಓಲೆಯ ಬುಕ್ಕಿನ ಕ್ಲಿ ವಿಸ್ತಾರವಾಗಿ ಬರೆದಿರುವುದರಿಂದ ನೀನು ಅದನ್ನು ಓದಿದರೆ ಸಮಗ್ರವಾ ಗಿ ತಿಳಿಯುವುದೆಂದು ಹೇಳಿ, ತನ್ನ ಚರಿತ್ರೆಯನ್ನು ಸ್ಪಷ್ಟವಾಗಿ ಬರೆದಿ ರುವ ಸಣ್ಯಪುಸ್ತಕವನ್ನು ಜೇಬಿನಿಂದ ತೆಗೆದು, ಇಗೊ ! ಇದನ್ನು ತಗೆ ದುಕ! ನಿನಗೆ ಸಾವಕಾಶವಾದಕಾಲದಲ್ಲಿ ಓದಿಕೊಂಡರೆ, ನಿನಗಾವತ್ರವಾದ ವಿಷಯಗಳೆಲ್ಲವ, ಇದರಲ್ಲೇ ಇರುವುದೆಂದು ಹೇಳಿದನು.