ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೩ (8) ಅರೇಬಿಯನ್ ನೈಟ್ಸ್ ಕಥೆಗಳು, ಆಮಾತುಗಳನ್ನು ಬಹುಜಾಗರೂಕನಾಗಿ ಕೇಳಿ, ತಿಳಿದುಕೊಂಡು, ಕಣ್ಣೀ ರನ್ನು ಸುರಿಸುತ್ತ, ತಂದೆಯೇ ಇದನ್ನು ಭದ ವಾಗಿಟ್ಟುಕೊಂಡು, ನಿನ್ನ ಆಜ್ಞೆಯಂತೆ ನಡೆಯುತ್ತೇನೆಂದು ಹೇಳಲು, ನೌರೋದೀನನು ಮೂರ್ಛಾಕಾಂತನಾಗಿದ್ದು, ಸ್ವಲ್ಪ ಹೊತ್ತು ಹೋದನಂತರ ಮಗನನ್ನು ನೋಡಿ ಇಂತೆಂದನು, ಮಗುವೆ ! ನೀನು ಎಲ್ಲರಲ್ಲಿಯೂ ಸಾಮಾನ್ಯವಾಗಿ ರಬೇಡ, ನಿನ್ನ ಮನೋಭಿಪ್ರಾಯವನ್ನು ಇತರರು ಸುಲಭವಾಗಿ ತಿಳಿದು ಕೊಳ್ಳುವಂತೆ ಮಾಡಿಕೊಳ್ಳಬೇಡ, ಇತರರಿಗೆ ಕೇಡನ್ನು ಬಯಸಬೇಡ, ವರ ರು ದೂಷಿಸುವಕಾಲದಲ್ಲಿ ಮಾತನಾಡುವುದನ್ನು ಮರೆತುಬಿಡು, ಮದ್ಯಪಾ ನವನ್ನು, ಮಾದಕವೃತ್ತಿಯನ್ನು ತೊರೆದುಬಿಡು, ಹೆಚ್ಚಾಗಿಯಾಗಲಿ, ಅ ಥವಾ ಕಡಿಮೆಯಾಗಿಯೇ ಆಗಲಿ, ಧನವನ್ನು ವ್ಯಯಮಾಡಬೇಡ, ನಿನ್ನ ಆದಾಯವನ್ನು ಕುರಿತು ವ್ಯಯವನ್ನು ಸರಿಪಡಿಸು, ನಿನಗೆ ಅತ್ಯಂತಪ್ರೀತಿ ಪಾತ್ರರಾದ ಸ್ನೇಹಿತರು ಬಹುಮಂದಿ ಇರುವುದರಿಂದ, ನಿನ್ನ ಆಸ್ತಿಯನ್ನು ಯುಕಾ ಯಕ್ಕೆ ಜ್ಞಾನವಿಲ್ಲದೆ, ಖರ್ಚುಮಾಡಬೇಡ, ನಾನು ಹೇಳಿರು ನ ಸಂಗತಿಗಳಲ್ಲಿ ಯಾವುದಕ್ಕಾದರೂ, ನೀನು ವಿರೋಧವಾಗಿ ನಡೆದರೆ, ನಿನಗೆ ತೊಂದರೆಯುಂಟಾಗುವುದು, ಅಲ್ಲದೆ ಜನರು ನಿನ್ನ ಬಳಿಯಲ್ಲಿ ಸೇ ರಲಾರರೆಂದು ತನ್ನ ಪ್ರಾಣವಿರುವವರೆವಿಗೂ ಮಗನಿಗೆ ಬುದ್ದಿವಾದವನ್ನು ಹೇಳಿ, ಮಂತ್ರಿಯು ಸತ್ತುಹೋಗಲು ಮಗನು ಉತ್ತರಕ್ರಿಯಾದಿಗಳನ್ನು ನೆರವೇರಿಸಿದನು. ಎಂದು ಹೇಳಿ ಸಹರಜಾದಿ ಕಥೆಯನ್ನು ನಿಲ್ಲಿಸಿ, ಬೆಳ ಗಾದಕೂಡಲೆ ಹೇಳಲಾರಂಭಿಸಿದಳು. F೬ ನೆಯ ರಾತ್ರಿ ಕಥೆ, ಪಹರಜಾದಿಯು ತನ್ನ ಗಂಡನಾದ ಸುಲ್ತಾನನ್ನು ನೋಡಿ, ಆಳಿದ ವರಾದ ಮಹಾಸ್ವಾಮಿಯವರೇ ! ಗಯವರನು ಹೇಳಿದ ವಿಚಿತ್ರವಾದ ಈ ಕಥೆಯನ್ನು ಕಲೀಫನು ಅತದರದಿಂದ ಕೇಳುತಿದ್ದುದರಿಂದ, ಪ್ರಧಾನ ಮಂತ್ರಿಯು ಮುಂಗಥೆಯನ್ನು ಹೇಳಸಾಗಿದನು. ನೌರೋಜಿನನಉತ್ತರ ಕ್ರಿಯಾದಿಗಳು ಗೌರವಕ್ಕೆ ತಕ್ಕಂತೆ ನಡೆದಮೇಲೆ, ಬದರದೀನನು ತನ್ನ ಕುಲಾಚಾರಾನುಗತವಾಗಿ ಬಂದಿರುವ ಕ್ರಮವನ್ನು ಅನುಸರಿಸಿ, ವ್ಯಸನಕಾ ಲವನ್ನು ಏಕಾಂತದಲ್ಲಿ ಕಳೆಯುವುದಕ್ಕಾರಂಭಿಸಿ, ಎರಡು ತಿಂಗಳವರಿಗೂ,