ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೯೧ ದಲ್ಲಿರುವ ಒಬ್ಬ ದೊರೆಸಾನಿಯು ಅದನ್ನು ತಿನ್ನಬೇಕಂದಿರುವಳೆಂದು ಹೇಳಲು ಬದರೋದೀನನು ಕೂಡಲೆ ತನ್ನಲ್ಲಿದ್ದ ಉತ್ತಮವಾದ ಪದಾರ್ಥಗಳನ್ನು ತೆಗೆದುಕೊಟ್ಟು, ಇಂತಹ ವಿಠಾ ಯಿಯನ್ನು ಮಾಡುವುದಕ್ಕೆ ನಮ್ಮ ತಾಯಿಗೆ ಹೊರತು, ಮತ್ತಾರಿಗೂ ಬರದು. ಆಕೆ ಈಗ ಬದುಕಿರುವ ಇಲ್ಲವೋ, ಕಾಣೆನೆಂದು ಹೇಳಿದನು. ನಂತರ ಅದನ್ನು ಆ ನಪುಂಸಕನು ವೇಗವಾಗಿ ತೆಗೆದುಕೊಂಡುಬಂದು ನೌರೋದೀನಲ್ಲಿಯ ಹೆಂಡತಿಯ ಆಗ ಕಟ್ಟನು. ಆಕೆ ಅದನ್ನು ನೋಡಿ, ಬಹು ಸಂಖದಿಂದ ಬಾಯಿ ಯಲ್ಲಿ ಹಾಕಿಕೊಂಡು, ಕೂಡಲೆ ಮೂರ್ಛಾಕಾ yಂತಳಾದಳು. ಆಗ ಸಂಕು ದೀನನು ಮೊದಲಾದವರು ಮಾಡಿದ ಶ ವಚಾರದಿಂದ ಮೂರ್ಛತಿಕ್ ದೆದು, ಹಾ ! ಆಹಾ ! ದೇವರೇ ! ಈ ಮಿಠಾಯಿಯನ್ನು ಮಾಡಿದವನು ನನ್ನ ಮಗನಾದ ಬದರೋದೀನನೇ ಹೊರತು ಮತ್ತಾರೂ ಅಲ್ಲವೆಂದು ಹೇಳಲು, ಸಂಸದೀನನು ಅದನ್ನು ಕೇಳಿ ಆಶ್ಚರ್ಯಯುಕ್ತನಾದನು ಎಂದ ಹೇಳುತ್ತಿರುವಾಗ, ಸೂರೋದಯವಾದುದರಿಂದ ಕಥೆಯನ್ನು ನಿಲ್ಲಿಸಿ, ಮಹರಜಾದಿಯು ಬೆಳಗಿನ ಜಾವದಲ್ಲಿ ಮತ್ತೆ ಹೇಳಲಾರಂಭಿಸಿದಳು. ೧೧V ನೆಯ ರಾತಿ ಕಥೆ. ಪ್ರಹರಜಾದಿಯು ಸುಲ್ತಾನರನ್ನು ಕುರಿತು, ಪಿಯರೇ ! ಪ್ರಧಾನಮಂತ್ರಿ ಯಾದ ಗಯವರನು ಕಲೀಫರನ್ನು ಕುರಿತು ಇಂಡಂದು ನುಡಿದನು. ವಂಸುದೀನನು ತನ್ನ ನಾದಿನಿಯ ಮಾತುಗಳನ್ನು ಕೇಳಿ, ಆನಂದಭರಿತನಾದನು. ಆದರೆ ತನ್ನ ಆನಂದವು ಎಲ್ಲಿ ವ್ಯರ್ಥವಾಗುವುದೊ, ಇಲ್ಲವೆ ನನ್ನ ನಾದಿನಿಯ ಮಾತುಗಳು ಸುಳಾಗುವವೊ, ಎಂದು ಯೋಚಿ ಸತ್ಯ, ತನ್ನ ನಾದಿನಿಯನ್ನು ಕುರಿತು ಅಮಾ ! ಈ ವಿಠಾಯಿಯನ್ನು ಮಾಡಿದವನೇ ನಿನ್ನ ಮಗನೆಂದು ಹೇಗೆ ಹೇಳುವೆ ? ಆತನಂತ ಮಿಠಾಯಿ ಯನ್ನು ಮಾಡತಕ್ಕವರು ಯಾರೂ ಇಲ್ಲವೆ ? ಎಂದು ಕೇಳಿದನು. ಆಯಾ ! ಲೋಕದಲ್ಲಿ ಉತ್ಕೃಷ್ಟವಾದ ವಿಠಾಯಿಯನ್ನು ಮಾಡತಕ್ಕವರು ಬಹು ಮಂದಿ ಇದ್ದರೂ, ನಾನು ಮಾಡತಕ್ಕ ತರಹೆಯ ಮಿಠಾಯಿಯನ್ನು ಮಾಡತಕ್ಕವನು ನನ್ನ ಮಗನುಚರತಾಗಿ ಮತ್ತಾರೂ ಇಲ್ಲ. ಅದನ್ನು ಮಾಡುವ ರಹಸ್ಯವು ಆತನಿಗೆ ತಿಳಿಯುವುದು. ಆದುದರಿಂದ ಇದನ್ನು