ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯v ಯವನ ಯಾಮಿನೀ ವಿನೋದ ವಿಂಬ, ಹಿಂದೆಹಾಕಿ, ನನ್ನ ಪ್ರಾಣಕಾಂತಾ ! ಬಾಗಿಲಬಳಿಯಲ್ಲಿ ಏನುಮಾಡು ರುವೆ. ನಾನು ನಿನ್ನನ್ನು ಅಗಲಿ ಬಹುಕಾಲವಿದೆನಲ್ಲಾ! ನಿದ್ರೆಯಿಂದ ಎಚ್ಚತ್ತು ನೋಡುವಲ್ಲಿ, ನೀನು ಕಾಣದೆ ಹೋದುದರಿಂದ, ಬಹಳವಾದ ಆಸ್ಟ್ರ ವನ್ನು ಹೊಂದಿದೆನು, ಒಳಗೆ ಬಂದು ಸುಖಶಯನದಲ್ಲಿ ಮಲಗಿ ನಿದಿ ಸಲು, ನಿನಗೆ ಅಡ್ಡಿಯುಂಟಿ ? ಎಂದು ಹೇಳಿದಳು. ಆ ಮಾತನ್ನು ಕೇಳಿ, ತನ್ನ ಹೆಂಡತಿಯು ಮಾತನಾಡಿದಂತೆ ಧ್ವನಿಯು ಕೇಳಿಬಂದುದರಿಂದ ಒಳಹೊಕ್ಕು ತಾನು ಮೊದಲು ಹಾಕಿಕೊಂಡಿದ್ದ ಬಟ್ಟೆಗಳೊ ಸೆರ್ಕ್ಸಿಸಿನ ಚೀಲವೂ, ವೇದಲು ತನ್ನ ಮದುವೆಯ ದಿನದಲ್ಲಿ ತಾನಿದ್ದ ಸಲದಲ್ಲಿ ಇರುತ್ತಿರುವುದನ್ನು, ಆ ಮನೆಯ ಅಲಂಕಾರವನ್ನು ನೋಡಿ, ತನ್ನ ವಿವಾ ಹದದಿನವು ಇದೇ ಇರಬಹುದೇ ಎಂದು ಅನುಮಾನಿಸುತ್ತ, ಹುಸಿನಗೆ ಯನ್ನು ಬೀರಿ ನಗುತ್ತಾ, ಆ ಬಟ್ಟೆಗಳನ್ನಿಟ್ಟುಯಿರುವ ಕುರ್ಚಿಯು ಬಳಿಗೆ ಹೋಗಿ, ಅವುಗಳು ಎಂದಿನಂತೆಯೇ ಇದ್ದುದರಿಂದ, ಭಗವಂತನೇ ! ಇದೇನು ಬಹು ಆಶ್ರವಾಗಿ ತೋರುತ್ತಿದೆಯಲ್ಲಾ! ಎಂದು ಆಶ್ಚರ ಯುಕ್ರನಾಗಿ ಅತ ಂತವಾದ ಭ್ರಮೆಯನ್ನು ಹೊಂದಿದನು. ಆಗ ಸೌಂದರ ವತಿಯು, ಮಾ ಣನಾಥ ! ಆಲಸ್ಯವೇತಕ್ಕೆ ? ಮಂಚವು ಬರೀದಾಗಿರುವುದು, ಮಲಗಿ ನಿದ್ರಿಸಬಾರದೆ ಎಂದು ಎರಡನೆಯ ಸಾರಿ ಕೂಗಿದುದನ್ನು ಕೇಳಿದೊಡನೆ ಮಂಚದ ಬಳಿಗೆ ಬಂದು ಪ್ರಾಣಕಂತೆ ! ನಾನು ನಿನ್ನನ್ನು ಬಹುಕಾಲದವರೆಗೂ ಆಗಲಿದ್ದೆನೆ ? ಹೇಳು ಎಂದು ಕೇಳಿ ದನು, ಸಂದರವತಿಯು, ಆಹಾ ! ನೀನು ಕೇಳುವ ಪ್ರಶ್ನೆಯು ನನಗೆ ಆಸ್ಟ್ರವನ್ನುಂಟುಮಾಡುತ್ತಿದೆ. ನೀನು ಈಗತಾನೆ ಎದ್ದು ಹೋದೆ ಯಾ! ನಿನ್ನ ಮನಸ್ಸು ಸ್ವಾಧೀನದಲ್ಲಿಲ್ಲದೆ ಕಲಿಲಿಯಾಗಿದೆ ಎಂದು ತೋರುವುದೆನಲು, ಹೌದು! ನನ್ನ ಮನಸ್ಸು ಕಲಿವಿಲಿಯಾಗಿರುವುದೇನೋ ನಿಜ, ನಾನು ನಿನ್ನ ಬಳಿಯಲ್ಲಿದ್ದಂತೆಯ, ಮತ್ತು ದಮಾಸ್ಕಸ್ ನಗರದಲ್ಲಿ ಹತ್ತು ವರ್ಷ ವಾಸಮಾಡುತ್ತಿದ್ದಂತೆಯ, ಜ್ಞಾಪಕವಿದೆ. ರಾತ್ರಿ ನಿನ್ನ ಬಳಿಯಲ್ಲಿದ್ದೆನೋ ? ಅಥವಾ ಅಗಲಿದ್ದೆನೋ, ನಿಜವಾಗಿ ಹೇಳು, ಪರಸ್ಪರ ವಿರೋಧವಾಗಿ ತೋರುವ, ನನ್ನ ಮನಸ್ಸಿನಲ್ಲಿ ನನಗೆ ನಂಬಿಕೆ ಇಲ್ಲವೆಂದು, ನಾನು ಖಂಡಿತವಾಗಿ ಹೇಳುವನು. ಆದರೆ ನಾನು ನಿನ್ನನ್ನು ಮದುವೆ ಮಾಡಿಕೊಂಡು, ದಮಾಸ್ಕಸ್ಸಿನಲ್ಲಿದ್ದುದೂ, ಸುಳ್ಯ, ನೀನು ಹೇಳೆನಲು,