ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8೦೬ ಯವನ ಯಾಮಿನೀ ವಿನೋದವಿಂಬ, ೧೨೫ ನೆಯ ರಾತಿ ಕಥೆ. ವಹರಜಾದಿಯು ಸುಲಾ_ನರನ್ನು ಕುರಿತು ಇಂತಂದು, ಬಳಿಕ ಆ ಮುಸಲ್ಮಾನವರ್ತಕನು, ತಾನು ಯೋಚಿಸದೆ ಮುಂದರಿದು ದುಡುಕಿ ದುದಕ್ಕಾಗಿ, ಅತ್ಯಂತ ವ್ಯಸನಾಕಾಂತನಾಗಿ, ಆದ್ರೆ ನಾನು ಮೊದಲೇ ನಿನ್ನನ್ನು ನೋಡಿದರೆ, ಈ ನಿನ್ನ ಗೂನುಬೆನ್ನಿಗಾಗಿ ವ್ಯಸನಪಡುವ ಹಾಗಾಗುತ್ತಿರಲಿಲ್ಲವೆಂದು ಕೋಪಿಸಿ, ಬಳಿಕ ರಾಜಭಟರ ಹಾವಳಿಯನ್ನು ತಪ್ಪಿಸಿಕೊಳ್ಳಬೇಕೆಂದು ಬಗೆದು, ಆ ಶವವನ್ನು ತನ್ನ ಬೆನ್ನಿನಮೇಲೆ ಹೊತ್ತಕಂಡುಹೋಗಿ ಆ ಬೀದಿಯಲ್ಲಿರುವ ಅಂಗಡಿಮುಂದೆ ನಿಲ್ಲಿಸಿ, ಅಸ್ಲಿಂದ ಹೊರಟು ಯಾರಿಗೂ ತಿಳಿಯದಂತೆ, ತನ್ನ ಮನೆಯನ್ನು ಸೇರಿ ದನು. ಆಗ ಆ ಊರಿನ ಸುಲ್ತಾನನಿಗೆ ಸಾಮಾನುಗಳನ್ನು ಸರಬರಾಯಿ ಮಾಡುವ, ಕಿ ಸಿಯಾನನೆಂಬ ವರ್ತಕನು ರಾತ್ರಿಯೆಲ್ಲಾ ಲ ನಾಗಿದ್ದು ತಾನು ಮೊದಲು ಕುಡಿದಿದ್ದ ಸಾರಾಯಿಯನತ್ತು ಇನ್ನೂ ಹೋಗದಿದ್ದುದರಿಂದ, ಬೆಳಗಾಗುವುದಕ್ಕೆ ಸ್ವಲ್ಪ ಹೊತ್ತು ಇರುವಸಮಯ ದಲ್ಲಿ, ಈ ಊರಿನವರು ಕಂಡರೆ, ನನ್ನ ನಾ ಕುಡುಕನೆಂದು ನಿಂದಿಸಿ, ತಮ್ಮ ಸಭೆಗೆ ಸೇರಿಸಲಾರರೆಂಬ ಭಯದಿಂದ ಬೇಗದಿಂದ ಬಂದು ಮಸೀತಿಯಲ್ಲಿ ರುವ ಕೊಳದಲ್ಲಿ, ಸನ ಮಾಡುವುದಕ್ಕಾಗಿ ಬರುತ್ತಾ, ಕೊಬ್ಬಿನ ವ್ಯಾಪಾರಮಾಡುವ ಮುಸಲ್ಮಾನನು ತಂದುನಿಸ್ಲಿತಿದ್ದ ಗೂನನ ಶವದ ಬಳಿ ಯಲ್ಲಿ, ಜಲಸ್ಪರ್ಶಕ್ಕಾಗಿ, ಕುಳಿತುಕೊಂಡನು. ಆ ಶವವು ಗಾಳೆಯಿಂದ ಜಾರಿ ಆತನಮೇಲೆ ಬೀಳಲು, ಕಿ ಸಿ ಯಾನನು ಕೋಪದಿಂದ ತಳ್ ಕಳ್ಳನೆಂದು ಕೂಗು, ಬೆನ್ನಿನಮೇಲೆ ಬಲ ವಾದೊಂದು ಗುದನ್ನು ಹಾಕಿ, ನೆಲಕ್ಕೆ ಕೆಡವಿ, ಬಳಿಕ ಒದೆದು, ಹಾ, ಕಳ ! ಅಯ್ಯೋ ! ಕಳ್ಳ ! ಎಂದು ಗಟ್ಟಿಯಾಗಿ ಕೂಗಲು, ಹತ್ತಿರದ ಮನೆಯಲ್ಲಿದ್ದ ಒಬ್ಬ ಮನುಷ್ಕನು ಅಲ್ಲಗೆಬಂದು, ನೀನು ಏತಕ್ಕಾಗಿ ಹೀಗೆ ಕಾಗಿಕೊಂಡೆ ಎಂದು ಕೇಳಿದನು, ಅಯಾ ! ಅಗೋ ಅವನು ಏನು ನನ್ನನ್ನು ಸೂರೆಮಾಡುವುದಕ್ಕಾಗಿ, ನನ್ನ ಮೇಲೆ ಬಿದ್ದು ಕತ್ತನ್ನು ಹಿಸುಕಿದನು. ಆದುದರಿಂದ ನಾನು ಕೂಗಿಕೊಂಡೆನೆನಲು, ಆಮನುಷ್ಯನು