ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೨ ನೆಯ ರಾತ್ರಿ ಕಥೆ. ಸಹರಜಾದಿಯು, ಸುಲ್ತಾನರನ್ನು ಕುರಿತು, ಇಂತಂದಳು :ಆ ದರ್ಜೆಯವನು, ಅಲ್ಲಿಗೆ ಹೋಗುವುದಕ್ಕೆ ಸಿದ್ಧನಾಗಿರುವಲ್ಲಿ, ಕಾಸುಗಾರು ರಾಜನು, ತನ್ನ ಪ್ರೀತಿಪಾತ್ರ ನಾದ ನಕಲಯವನನ್ನು ನೋಡಬೇಕೆಂದು, ಕರೆಸುವಂತೆ ಹೇಳಿದನು. ಆಗ ಆತನ ಸಭಿಕರಲ್ಲೊಬ್ಬನು, ಅಯಾ ! ನಿಮ್ಮ ಗೂನನಾದ, ನಕಲಿಯವನು ಈದಿನ ಸಾರಾಯಿ ಕುಡಿದು ಮುತ್ತಿನಿಂದ ಒಬ್ಬ ವರ್ತಕನಮೇಲೆ ಬೀಳುವುದಕ್ಕೆ ಹೋ .ದುದರಿಂದ, ಆತನು ಕಳ್ಳನೆಂದು ತಿಳಿದು ಅವನನ್ನು ಗುದ್ದಿ ಕೊಂದನೆಂಬ ವರ್ತಮಾನದು, ನ್ಯಾಯಾಧಿ ಪತಿಗೆ ತಿಳಿದು, ಆತನನ್ನು ಅಪರಾಧಿಯೆಂದು ಗೊತ್ತುಮಾಡಿ, ಅವನನ್ನು! ಗಲ್ಲಿಗೆ ಹಾಕುತ್ತಿರುವಾಗ, ಮತ್ತೊಬ್ಬನು ಇನ್ನೊಬ್ಬನನ್ನು ಉರುಳು ಕಟ್ಟುವಾಗ ಮಗದೊಬ್ಬನೂ, ಈತರದಿಂದ ನಾಲ್ಕು ದಿನಗಳು ಬರಲು, ಕೊನೆಗೆ ತಾನಾಗಿ ತಪ್ಪನ್ನು ಒಪ್ಪಿಕೊಂಡಿರುವ, ಒಬ್ಬ ದರ್ಜಿಯನನನ್ನು ಮಂತ್ರಿಯು ಗಗಹಾಕಿಸುತ್ತಿರುವನೆಂದು ಹೇಳಲು ರಾಜನು ಆ ನಿರ್ಭಾಗ್ಯ ನಾದ ಗೊನನನ್ನು ನೋಡಬೇಕಾಗಿರುವುದರಿಂದ, ಆ ಶವವನ ಅಪರಾಧಿ ಗಳನ್ನೂ ಕರೆದುಕೊಂಡುಬರುವಂತೆ ಮಂತಿಗೆ ಹೇಳಿಬಾ ! ಎಂದು ಸೇವಕ ನನ್ನು ಕಳುಹಿಸಿದನು. - ಆ ಸೇವಕನು, ಬೇಗದಿಂವೊಡಿಬಂದು, ಕೊಲೆಗಾರನನ್ನು ನೋಡಿ ಅಯಾ ! ಸ್ವಲ್ಪ ನಿದಾನಿಸು. ನಾನು ಮಂತ್ರಿ ಯಸಂಗಡ ಮಾತನಾಡ ಬೇಕಾಗಿದೆ ಎಂದು ಹೇಳಿ, ರಾಜನು ಮಾಡಿದ ಅಪ್ಪಣೆಯನ್ನು ತಿಳಿಸಲು, ನಂತಿ ಯು ಆ ಗೂನನ ಶವವನ, ದರ್ಜಿಯವನನೂ, ವೈದ್ಯನನ್ನೂ, ವರಕನನ್ನು ಕ್ರಿಯಾನನ್ನು ಕರೆದುಕೊಂಡುಬಂದರು ಆಗ ಮಂತ್ರಿಯು ರಾಜನಿಗೆ ನಮಸ್ಕಾರ ಮಾಡಿ, ತಾನು ವಿಚಾರಿಸಿದ, ಸಕಲವಿಷಯಗಳನ್ನು ಆತನಿಗೆ ಅರಿಕೆಮಾಡಿದನು. ರಾಜನು ವಿಚಿತ್ರ ತರವಾದ ಈ ಕಥೆಯನ್ನು ಸುವರ್ಣಾಕ್ಷರಗಳಿಂದ ಬರೆಸಿ, ತನ್ನ ಬಂಡಾರದಲ್ಲಿರಿಸಿದನು. ಆಗ ರಾಜನು ತನ್ನ ಸಭೆಯುವ ವಿದ್ಯಾ೦ಸರನ್ನು ನೋಡಿ, ಇಂತಹ ವಿಚಿತಕರವಾದ ಚರಿತ್ರೆಯನ್ನು ನೀವು ಯಾವಾಗಲಾದರೂ ಕೇಳಿರುವಿರಾ ! ಎಂದು ನುಡಿ