ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

8೧8 ಯವನ ಯಾಮಿನೀ ವಿನೋದ ವಿಂಬ, ಆದರೂ ಆತನು, ಒಂದುತಿಂಗಳವರೆಗೂ ಬಾರದುದರಿಂದ, ಆತನಿಗೆ ನನ್ನಲ್ಲಿ ತುಂಬ ನಂಬಿಕೆ ಇರುವುದೆಂದ, ಇಲ್ಲವಾದರೆ ಗುರುತೇ ಇಲ್ಲದವನಾದ ನನ್ನಲ್ಲಿ ಇಷ್ಟೊಂದು ಹಣವನ್ನು ಸುಮ್ಮನೆ ಕೊಟ್ಟು ಹೋಗಲಾರನೆಂದು, ಯೋಚಿಸುತ್ತಾ, ಎರಡನೆ ತಿಂಗಳಲ್ಲಿ ಬರುವನೇನೋ ಎಂದು ತಿಳಿದುಕೊಂಡಿ ದನು. ಅವನು ಆಗಲೂ ಬರಲಿಲ್ಲ, ಆದರೆ ಮೂರನೆತಿಂಗಳ, ತಾನು ಮೊದಲು ಕುಳಿತುಕೊಂಡಿದ್ದ ಕುದುರೆಯಮೇಲೆ ಕುಳಿತುಕೊಂಡು ಉತ್ತಮ ವಾದ ವಸ್ತ್ರಗಳನ್ನು ಧರಿಸಿಕೊಂಡು, ನನ್ನ ಬಳಿಗೆ ಬಂದು ನಿಂತನು. ಇನ್ಮರಿ ಬೆಳಗಾದುದರಿಂದ ವಸರಳಾದಿಯು ಕಥೆಯನ್ನು ನಿರಿಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳತೊಡಗಿದಳು. ೧೩೦ ನೆಯ ರಾತ್ರಿ | ಕಥೆ. ಪ್ರಹರಳಾದಿಯು ಸುಲ್ತಾನರನ್ನು ನೋಡಿ, ಸ್ತ್ರೀಯರ ! ಕಿನ್ನಿ ಯಾನನು ಆ ರಾಜನನ್ನು ಕುರಿತು ಇಂತಂದನು, ದಳಾಯು ಆ ವರ್ತಕ ಪುತ್ರನನ್ನು ನೋಡಿದಕೂಡಲೆ, ಆತನಹತ್ತಿರಕ್ಕೆ ಬಂದು, ಸಾಮೂಾ ! ಕಾವು ಕುದುರೆಯನ್ನಿಳಿದುಬಂದು ನನ್ನ ಮನೆಯನ್ನು ಹೊಕ್ಕು ಸಂತೋಷ ಪಡಿಸಿ, ನಿನ್ನು ಹಣವನ್ನು ತೆಗೆದುಕೊಂಡು ಹೋಗಬಹುದೆಂದು ಹೇಳಿ ಧನು. ಆಗ ವರ್ತಕಪುತ್ರನು ಆಯಾ ! ನನಗೆ ಈಗ ಹಣವು ಅಗತ್ಯ ವಿಲ್ಲ. ನನ್ನಹಣವು ಉತ್ತಮವಾದ ಸೆಲದಲ್ಲಿ ಭದ ವಾಗಿರುವುದು, ನನ್ನಲ್ಲಿ ಹಣವಿಲ್ಲದಾಗ ಬಂದು ನಿನ್ನನ್ನು ಕೇಳಿ ತೆಗೆದುಕೊಳ್ಳುವನೆಂದು ಹೇಳಿ, ಹೊರಟುಹೋದನು. ಆದುದರಿಂದ ನಾನು ಈತನು ಇನ್ನು ಬಹುದಿನಗಳ ವರಿಗೂ ಬರಲಾರನು. ಆದುದರಿಂದ ಈ ಹಣದಲ್ಲಿ ವ್ಯಾಪಾರಮಾಡಿ ಲಾಭ ವನ್ನು ಸಂಪಾದಿಸಬಹುದೆಂದು ನಂದುಕೊಂಡನು. ಈ ನನ್ನ ಯೋಚನೆಯು ವ್ಯರ್ಥವಾಗಲಿಲ್ಲ. ಆತನು ಮರಣ ಒಂದುವರ್ಷದಮೇಲೆ ಮೊದಲಿಗಿಂತಲA. ಉತ್ತಮವಾದ ವಸ್ತ್ರಗಳನ್ನು ಧರಿಸಿಕೊಂಡು, ನನ್ನ ಮನೆಯಗೆ ಬಂದನು. ನಾನು ಆತನನ್ನು ಮರದೆಯಿಂದ ಕಂಡು, ಅಯಾ ! ತಾವು ದಯಮಾಡಿ, ನನ್ನ ಮನೆಗೆ ಬಂದು ಭೋಜನಮಾಡಿಕೊಂಡು ಹೋಗಬೇ ಕೆಂದು ಬೇಡಿಕೊಂಡನು. ಆಗ ಆತನು, ನಾನು ನಿನ್ನ ಮನೆಗೆ ಬರುವುದ ಕಡ್ಡಿಯೇನೂ ಇಲ್ಲ. ಆದರೆ ನೀನು ನನಗೊಸ್ಕರವಾಗಿ, ಹೆಚ್ಚಖರನ್ನು ಇಟ್ಟುಕೊಳ್ಳಬೇಡವೆಂದು ಹೇಳಿದನು. ನಾನು ಆತನಿಗೆ ಔತನವನ್ನು