ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. 8oF ನಿನಗೆ ಕೊಟ್ಟುಬಿಡುತ್ತಿದ್ದನು. ಇಗೋ ಇ೭ ಕುಳಿತುಕೊಂಡಿರುವ ದೊಡ್ಡಮನುಷ್ಯನೇ ಇದಕ್ಕೆ ಯಜಮಾನನು. ಈದಿನ ನಾವು ನಮ್ಮ ಲೇಖಗಳನ್ನು ಫೈಸಲ್ಮಾಡಿಕೊಳ್ಳಬೇಕೆಂದಿರುತ್ತವೆಂದು ಹೇಳಲು, ಆಕಯು ಅತ್ಯಾಶ್ಚರದಿಂದ, ಅಯಾ ! ನಾನು ನಿನ್ನ ಅಂಗಡಿಗೆ ವರ್ತ ನೆಯ ಗಿರಾಕಿಯಲ್ಲವೆ ? ಎ ಸಾರಿ ಬಂದು, ಹಣವನ್ನು ಕೊಡದೆ ಸರಕುಗಳನ್ನು ತೆಗೆದುಕೊಂಡು, ಮರಳಿ ನಾಯಿದೆಗೆ ಸರಿಯಾಗಿ ಹಣವನ್ನು ತಲಪಿಸಲಿಲ್ಲವೋ ? ಎಂದು ಕೇಳಲು, ವರ್ತಕನು ಅಮಾ ನೀವು ಹೇಳಿದು ಬೆಲ್ಲಾ ನಿಜವೇಸರಿ ! ಆದರೆ ಈದಿನ ನನಗೆ ದುಡ್ಡು ಅಗತ್ಯವಾಗಿ ಬೇಕಾ ಗಿರುವುದರಿಂದ, ನಾನು ಹೀಗೆ ಹೇಳಬೇಕಾಯಿತು ಎನಲು ಆಕಯು, ಇಗ ನಿನ್ನ ಬಟ್ಟೆಯನ್ನು ನೀನೆ ಇಟ್ಟುಕೊ ? ನೀನಾಗಲಿ, ನಿನ್ನ ಜೊತೆಯುವ ರಾಗಲಿ, ಯಾರಾದರೇನೂ ! ನೀವುಗಳು ಯಾರನ್ನೂ ಲಹ,ಮಾಡದಂಥ, ಗರ್ವಿರೆಂದು ಹೇಳಿ, ಕೋಪದಿಂದ ಹೊರಟುಹೋದಳು ಎಂದು ಹೇಳಿದ ಕೂಡಲೆ, ಸರೋದಯವಾದುದರಿಂದ, ಮಹರಜಾದಿಯ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೩೩ ನೆಯ ರಾತಿ | ಕಥೆ. ಪ್ರಹರಜಾದಿಯು ಸುಲ್ತಾನರನ್ನು ನೋಡಿ, ಪ್ರಿಯರೇ ! ಕೆ ಪುತನು ತನ್ನ ಕಥೆಯನ್ನು ಬಳಾ೪ಗೆ ಹೀಗೆಂದು ಹೇಳಿದನು. ಹೀಗೆ ಆಭಾಲಿಕಾಮಣಿಯು ಕೊ ಏಸಿಕೊಂಡು ಹೊರಟುಹೋಗುತ್ತಿರುವುದನ್ನು ನೋಡಿ, ನನಗೆ ತುಂಬ ಕೊರತೆಯುಂಟಾದುದರಿಂದ, ಅವರಿಬ್ಬರನ್ನೂ ಸಮಾಧಾನ ಮಾಡಬೇಕೆಂದು ನಾನು ಆಕೆಯನ್ನು ಕರೆದೆನು. ಆಕಯಾ ದರೋ ಮರಳಬುದು ಕುಳಿತುಕೊಂಡು, ನೀನು ಕರೆದುದರಿಂದ ಬಂದಿರು ವೆನು ಎಂದು ಹೇಳಲು, ನಾನು ವರ್ತಕನನ್ನು ಕುರಿತು, ಅಯಾ ! ಈ ವಸ್ಮವು ನನ್ನದೇ ! ಅಲ್ಲವೇ ! ಇದರಮೇಲೆ ನೀನೇನು ಲಾಭವನ್ನು ಕೇಳುವೆ ? ಎಂದು ಕೇಳಿದೆನು. ಆತನು ನೂರುರೂಪಾಯಿ ಲಾಭಕ್ಕಿಂತಲೂ ಕಡಿಮೆಯಾಗಿ ನಾ > ಕೊಡಲಾರನೆಂದು ಹೇಳಿದನು. ನಂತರ ನೀನು ನನಗೆ ಕೊಡಬೇಕಾಗಿರುವ ಹಣದಲ್ಲಿ ನೂರುರೂಪಾಯಿ ಲಾಭವನ್ನು ಕಡಿಮೆ ಮಾಡಿಕೊಂಡು, ಕೆಡಬಹುದೆಂದು ಹೇಳಿ, ಆತನಿಗೆ ಚೀಟಿಯನ್ನು ಬರೆದು