ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರೇಬಿಯಂ ನೈಟ್ಸ್ ಕಥೆಗಳು, ೪೧ ಆಸ್ತಿಯು ಸೇರಿತು ಎಂದು ಹೇಳಿದನು. ಬಳಿಕ ನಾನು ನನ್ನ ಬಿಡಾರವನ್ನು ಸೇರಿ, ರಾತ್ರಿ ಭೋಜನವನ್ನು ಮಾಡುವುದಕ್ಕೆ ಕುಳಿತುಕೊಂಡುದೇನೋ ಉಂಟು. ಆದರೆ ಊಟವೇ ಬೇಕಾಗಿಲ್ಲ. ಬೇಗ ಊಟದ ಶಾಸ್ತ್ರವನ್ನು ಮಾಡಿಕೊಂಡು, ರಾತ್ರಿಯೆಲ್ಲ ನಿದ್ದೆ ಬರದೆ ಕುದಿಯುತ್ತಿರುವ ಮನ ಸೃನ್ನು ಸಮಾಧಾನಪಡಿಸಲಾರದೆ, ಬೆಳಗಿನ ಜೆವದಿ, ಆಹಾ ! ನನ್ನ ಚಿತ್ತವೃತ್ತಿಯನ್ನೆತ್ತಿಕೊಂಡುಹೋದ ವ್ಯಕ್ತಿಯನ್ನು ಮತ್ತೊಂದುಸಾರಿ ನೋಡಬಹುದಲ್ಲಾ ! ಎಂದು, ಆಕೆಗೆ ಮೋಹ ಉಂಟಾಗುವಂತೆ ಉತ್ತಮ ನಾದ, ವಸ್ತ್ರಗಳನ್ನು ಧರಿಸಿಕೊಂಡೆನು ಎಂದು ಹೇಳಿ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. ೧೩೪ ನೆಯ ರಾತ್ರಿ ಕಥೆ, ವಹರಜಾದಿಯು ಸುಲ್ತಾನರನ್ನು ಕುರಿತು, ಇಂತಂದಳು :ನಂತರ ಆತನು ಉತ್ತಮಾಲಂಕಾರಭೂಷಣನಾಗಿ, ನಿನ್ನಯಂತ ಆ ಪರ್ತ ಕನ ಅಂಗಡಿಗೆ ಬಂದು ಕುಳಿತುಕೊಂಡಿರುವ ಕಾಲದಲ್ಲಿ ಆ ಬಾಲಿಕಾವುಣಿಯು ನಿನ್ನಗಿಂತಲೂ, ಶ್ರೇಷ್ಟವಾದ ಉಡುಪನ್ನು ಹಾಕಿಕೊಂಡುಬಂದು, ಅಂಗಡಿ ಯವನನ್ನು ಲಕ್ಷ್ಯಮಾಡದೆ, ನನ್ನನ್ನು ಕುರಿತು, ಇಗೋ ! ನಾನು ನಿನ್ನೆ ಹೇಳಿದಂತೆ ನಿನ್ನ ಬಳಿಗೆ ಮರಳಿ ಬಂದಿರುವೆನು. ಹಣವನ್ನು ತೆಗೆದುಕೊ ? ನೀನು ನನ್ನ ಗುರುತಿಲ್ಲದವನಾದರೂ, ನಾನು ವಾಯಿದೆಗೆ ಸರಿಯಾಗಿಬಂದು ನಿನ್ನ ಹಣವನ್ನು ಒಪ್ಪಿಸಿರುವನೆಂದಳು. ನಾನು ಆಹಾ ! ಹಣಕ್ಕಾಗಿ ಅಷ್ಟೇನೂ ವಿಚಾರ ಮಾಡಲಿಲ್ಲವಲ್ಲಾ! ನೀನು ಇದಕ್ಕಾಗಿ, ಇನ್ನೊಂದು ತೊಂದರೆ ತೆಗೆದುಕೊಂಡುದಕ್ಕಾಗಿ, ತುಂಬ ವ್ಯಸನವಡವೆನು ಎಂದು ಹೇಳಲು, ಬಾಲಕಾಮಣಿ ಅಯಾ ! ನೀನು ಧಾರಾಳವಾಗಿ ಸರಕನ್ನು ಕೊಟ್ಟಂತೆ, ನಾನು ಧಾರಾಳವಾಗಿ ಹಣವನ್ನು ಕೊಡದೆಹೋದರೆ, ನನ್ನನ್ನು ಉತ್ತಮಳೆಂದು ಹೇಳುವರೆ ? ಎಂದಂದುಕೊಂಡು, ಹತ್ತಿರದಲ್ಲಿ ಕುಳಿತು ಕೊಂಡಳು. ಬಳಿಕ ಸ್ವಲ್ಪ ಹೊತ್ತಿನವರಿಗೆ ಮಾತನಾಡುತ್ತಿದ್ದು, ನನಗೆ ಉಂಟಾಗಿರುವ ಮೋಹವನ್ನು ಆಕೆಗೆ ತಿಳಿಸಿದನು. ಕೂಡಲೆ ಅವಳು ಕೋಪಿಸಿಕೊಂಡವಳಂತೆ, ಬಿರುಬಿರನೆನಡೆದು ಹೊರಟುಹೋದಳು, ಅವಳು ಕಣಿಗೆ ಕಾಣುವವರಿಗೂ, ನೋಡ ತಿನ್ನು ಮರಯಾದಬಳಿಕ, ಅಂಗಡಿ -