ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

88 ಯವನ ಯಾಮಿನೀ ವಿನೋದ ಎಂಖ, ಬರಮಾಡಿಕೊಂಡು, ಅಯಾ ! ನಮ್ಮ ಧೋರಸಾನಿಯು ನಿಮ್ಮನ್ನು ಬಹುತ್ತರೆಯಿಂದ ಕಾದುಕೊಂಡಿರುವಳು. ಎರಡುದಿನಗಳಿಂದಲೂ, ನಿಮ್ಮ ಧ್ಯಾನದಿ ಇವರದು ಹೇಳಲು, ನಾನು ಒಳ ಹೊಕ್ಕು ಹೋಗಿ ಮನೆ ಹರವಾದ ಹಜಾರವನ್ನು, ಅದರ ಮಧ್ಯದಲ್ಲಿರುವ ಉದ್ಯಾನವನವನ್ನು ಕಂಡು, ಸಂತಸಭರಿತನಾದನು, ಆ ಉದ್ಯಾನವನವು ಅತ್ಯಂತರಮಣೀಯ ವಾದ ಗಿಡಗಳ ನೆಳಲಿನಿಂದಲೂ, ಸುಗಂಧವನ್ನು ಬೀರುತ್ತಿರುವ ಪುಷ್ಯ ಸಮೂಹದಿಂದಲ, ಅಲ್ಲಲ್ಲಿ ನಿಬಿಡವಾಗಿ ಮಧುರಧನಿಯಿಂದ ಗೌನ ಮಾಡು ತಿರುವ ಮರಿದುಂಬಿಗಳಿಂದಲೂ, ನೋಟಕರ ಮನವನ್ನು ಆಕರ್ಷಿಸುವ ತರದಿಂದ ಕಾಣುತಿತ್ತು. ಆ ಉದ್ಯಾನವನದ ಮಧ್ಯದಲ್ಲಿರುವ ಸುಂದರ ವಾದ ಸುವರ್ಣನಿರ್ವಿತದ ಜಲಯಂತ್ರದಿಂದ, ಮೇಲಕ ಹಾರುತ್ತಿದ್ದ ಜಲಕಣಗಳು ನೋಡುವವರನ್ನು ಆನಂದಪರವಶರಾಗುವಂತೆ ಮಾಡುತ್ತಾ ಇದ್ದವು. ಇಂತಹ ಸಂದರವುಳ ಉದ್ಯಾನವನವನ್ನು ನಿದಾನಿಸಿ ನೋಡುತ್ತಾ, ಬಹಳ ಹೊತ್ತು ವಿಸ್ಮಯವನ್ನು ಹೊಂದಿದೆನು. ಆಗ ಒಬ್ಬ ದಾದಿಯು ತನ್ನ ದೊರೆಸಾನಿಗೆ, ನಾನುಬಂದಿರುವ ವರ್ತಮಾನವನ್ನು ಹೇಳುವುದಕ್ಕೆ ಹೋದಳು. ಮತಬ್ಬಳು ಆ ಉದ್ಯನವನದ ಮತ್ತು ಸಭಾಮಂಟಪದ ವಿಚಿತ್ರ ಗಳನ್ನು ನನಗೆ ತೋರಿಸುತ್ತಾ ಇದ್ದಳು ಎಂದು ಹೇಳಿ ಸೂರೋದಯವಾದಬಳಿಕ ಕಥೆ .ಖನ್ನು ನಿಲ್ಲಿಸಿ, ಮರುದಿನ ಬೆಳಗಿನ ಜೆ ವದಲ್ಲಿ ವಕರಿಯರಿನ ಕುತೂಹಲವನ್ನು ತೀರಿಸುವುದಕ್ಕಾಗಿ ರಾಣಿಯು ಹೀಗೆಂದು ಪುನಃ ಕೇಳಲಾರಂಭಿಸಿದಳು, ೧೩೬ ನೆಯ ರತ್ರಿ ಕಥೆ. ವಹರಚದಿಯ ಸುಲ್ತಾನರನ್ನು ನೋಡಿ, ಮತ್ತೆ ಇಂತೆಂದಳು, ನಾನು ಆ ಕೂಟದಲ್ಲಿಯೂ, ಉದ್ಯಾನವನದಲ್ಲಿದೆ,, ಇರುವ ಚಿತ್ರವಿಚಿತ್ರ ಪದಾರ್ಥಗಳನ್ನು ನೋಡುತ್ತಿರುವಾಗ, ಆ ನನ್ನ ಮೋಹನಾಂಗಿಯಾದ, ಬಾಲಿಕಾಮಣಿಯು ಮುತುವಜ ಗಳ ಆಭರಣವನ್ನು ಧರಿಸಿಕೊಂಡು, ನನ್ನ ಬಳಿಗೆ ಬರಲು, ಆ ಆಭರಣಗಳೆಲ್ಲವೂ ಆಕೆಯ ಕಟಾಕ್ಷದೃಷ್ಟಿಯ ಪ್ರತಿಭೆಯನ್ನು ನಿವಾರಿಸಲಾರದೆ ಹೋದುವು. ಆಕಯು ಆಕಾಲದಲ್ಲಿ ಮುಸು ಕಿಲ್ಲದೆ ಬಂದಿದ್ದುದರಿಂದ, ತನ್ನ ರೂಪವನ್ನು ಪ್ರಕಾಶಪಡಿಸುತ್ತಿದ್ದಳು.