ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೫೦ ಯವನ ಯಾಮಿನೀ ವಿನೋದ ಎಂಬ, ವೈದ್ಯಶಿಖಾಮಣಿಯೇ ! ನನಗೆ ಬಲಕ್ಕೆ ಇಲ್ಲದಿರುವುದನ್ನು ನೀನು ಕೇಳಿ, ಆಶ್ಚರ್ಯವನ್ನು ವ್ಯಸನವನ್ನು ಹೊಂದಿದವನಾಗಿರುವೆ, ಎಂಬುದನ್ನು ನಾನು ತಿಳಿದುಕೊಂಡನು. ಅದಕ್ಕೆ ಕಾರಣವನ್ನು ಹೇಳುವೆನು ಕೇಳು ! ಅದನ್ನು ಕೇಳಿದರೆ, ನೀನು ಇನ್ನೂ ಆಸ್ಟ್ರ ವನ್ನು ಹೊಂದಬಹುದೆ: ದು ಹೇಳಿದನು. ಬಳಿಕ ಸ್ನಾನವಾದಮೇಲೆ, ನಾವಿಬ್ಬರೂ ಊಟಮಾಡಿ ಸ್ವಲ್ಪಹೊತ್ತು ವಿನೋದವಾಗಿ ಮಾತನಾಡುತ್ತಿದ್ದಾಗ, ಆತನು ಅಯಾ ! ಅರಮನೆಯಬಳಿಯಲ್ಲಿರುವ, ಉದ್ಯಾನವನವನ್ನು ನಾವು ಸೇರಿದರೆ ನಮಗೆ ಆರೋಗ್ಯಕರವಾದ, ನಲಿಕೆಗಳೇನಾದರೂ, ದೊರಕುವುದೇ ಎಂದು ಕೇಳಿ ದನು, ಆತನು ಅಯಾ ! ನೀನು ಎಲ್ಲಿ ಹೋದರೂ, ನಿನ್ನ ಆರೋಗ್ಯಕ್ಕೆ ಅನುಕೂಲವಾಗಿರುವುದೆಂದು ಹೇಳಲು, ಆತನು ಅಯಾ ! ನೀನು ನನ್ನ ಸಂಗಡ ಉದ್ಯಾನವನಕ್ಕೆ ಬಂದರೆ, ನನ್ನ ಚರಿತ್ರೆಯನ್ನು ವಿಶದವಾಗಿ ತಿಳಿಯಪಡಿಸುವೆನೆನಲು, ನಾವಿಬ್ಬರೂ ಆ ಉದ್ಯಾನವನಕ್ಕೆ ಹೋಗಿ, ಅಲ್ಲಿನ ಸೊಬಗನ್ನು ನೋಡಿದನಂತರ ಒಂದಾನೊಂದು ಸ್ಥಲದಲ್ಲಿ ಕುಳಿತುಕೊಂಡು, ತನ್ನ ಕಥೆಯನ್ನು ಹೇಳಲಾರಂಭಿಸಿದನು. ನಾನು ಮಸಳಿನಗರದಲ್ಲಿರುವ ಒಬಾನೊಬ್ಬ ಮನುಷ್ಯನ ಮಗನು. ಆತನಿಗೆ ಹತ್ತು ಮಂದಿ ಅಣ್ಣತಮ್ಮಂದಿರಿರುವರು. ಆತನು ಸತ್ಯಕೂಡಲೆ ಉಳಿದವರು ವಿವಾಹ ಮಾಡಿಕೊಂಡರು. ಆದರೆ ನನ್ನ ತಂದೆಗೆ ಕೊರತು ಮತ್ತಾರಿಗೂ ಸಂತಾನ ಉಂಟಾಗಲಿಲ್ಲ. ನಾನು ನನ್ನ ತಂದೆಗೊಬ್ಬನ ಮಗನಾದುದರಿಂದ, ಆತನು ನನ್ನನ್ನು ಒಹುಪ್ರೀತಿಯಿಂದ ಸಾಕಿ, ಚೆನ್ನಾಗಿ ವಿದ್ಯೆಯನ್ನು ಕಲಿಸಿದ್ದನು. ಇಂತಂದು ಹೇಳಿ, ಷಹರಜಾದಿಯು ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವ ದಲ್ಲಿ ಪುನಹ ಹೇಳಲಾರಂಭಿಸಿದಳು. ೧೫೦ ನೆಯ ರಾತ್ರಿ | ಕಥೆ. ವಹರಜಾದಿಯು ಸುಲಾರನ್ನು ಕುರಿತು, ಇಂತಂದಳು :ಒಂದಾನೊಂದುದಿನ, ನಾನು ನನ್ನ ತಂದೆಯೊಡನೆಯ, ಚಿಕ್ಕಪ್ಪನೂಡ ನೆಯ, ದಮಾಸ್ಕಸ್‌, ಪಟ್ಟಣದ ಮುಖ್ಯವಾದ ಮಸೀತಿಗೆ ಹೋಗಿ, ಧ್ಯಾನವನ್ನು ಮಾಡಿಕೊಂಡಮೇಲೆ, ಜನರೆಲ್ಲರೂ ಗುಂಪುಕೋಡಿ, ಹಡಗಿನ ವ್ಯಾಪಾರದವಿಷಯದಲ್ಲಿ, ಬಹಳವಾಗಿ ಚರ್ಚೆ ಮಾಡುತ್ತಿದ್ದರು. ಅದರಲ್ಲಿ £d