ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೪೬೩ ಮಾತನ್ನು ಆಡದೆ ಸುಮ್ಮನಿದ್ದನು. ತಾನು ತಂದ ಸರಕಿನ ಬೆಲೆಯು, ತನಗೆ ತಿಳಿಯದುದರಿಂದಲೂ, ನಾನು ಯಾವಮಾತನ್ನೂ ಆಡದೆ ಸುಮ್ಮನೆ ನಿಂತುಕೊಂಡಿದ್ದುದರಿಂದ, ಆ ಅಂಗಡಿಯವನು ನ್ಯಾಯಾಧಿಪತಿಯು ಬಳಿಗೆ ಹೋಗಿ, ಈಸರವು ನನ್ನದು, ಇದನ್ನೊಬ್ಬಫೆರನನು ವಾರು ವುದಕ್ಕೆ ತಂದಿರುವನು. ಇದರ ಬೆಲೆಯು ಆತನಿಗೆ ತಿಳಿಯದು, ಎರಡು ಸಾವಿರ ರೂಪಾಯಿಗಳ ಈ ಸರವನ್ನು ಎಂಟುನೂರು ರೂಭಾಯಿಗಳಿಗೆ ಮಾರುವುದಕ್ಕೆ ಸಿದ್ಧನಾಗಿ ನಿಂತಿರುವುದೇ ಕದ್ದುದಕ್ಕೆ ಸಾಕ್ಷಿಯಾಗಿರುವು ದೆಂದುಹೇಳಲು, ನ್ಯಾಯಾಧಿಪತಿಯು ನನ್ನನ್ನು ತನ್ನ ಬಳಿಗೆ ಕರೆಸಿಕೊಂಡು, ನೀನು ಈ ಸರವನ್ನು ಮಾರುವುದಕ್ಕಾಗಿ, ಪೇಟೆಗೆ ತಂದೆಯೋ ? ಇದನ್ನು ಎಂಟುನೂರುರೂಪಾಯಿಗಳಿಗೆ ಮಾರುವುದಕಪ್ಪಿಕೊಂಡಿರೋ ? ಎನಲು, ಹೌದಾ ! ನಾನು ಮಾರುವುದಕ್ಕೆ ಎಂಟುನೂರುರೂಪಾಯಿಗಳಿಗೆ ಕ್ರಯವನ್ನು ಗೊತ್ತುಮಾಡಿ ಕೊಟ್ಟುಬಿಡಲು ಸಿದ್ಧನಾಗಿದ್ದನೆಂದು ಹೇಳಿದನು. ನ್ಯಾಯಾಧಿಪತಿಯು ಈತನಮಾತಿನಿಂದಲೆ ಇವನು ಕಳ್ಳನೆಂದು ತೋರುವುದು. ಆದುದರಿಂದ ವರ್ತಕನವೇಷವನ್ನು ಹಾಕಿಕೊಂಡಿರುವ ಈತನು ನಿಜವನ್ನು ಹೇಳುವವರೆಗೂ, ಚೆನ್ನಾಗಿ ದಂಡಿಸಿ ಎಂದು, ತನ್ನ ಭಟರಿಗೆ ಆಜ್ಞಾಪಿಸಲು, ಆಗ ಅವರು ಮಾಡುತ್ತಿದ್ದ ಉಪದ್ರವನ್ನು ತಡೆಯ ಲಾರದೆ, ನಾನು ಕದುದುಂಟೆಂದು ಸುಳ್ಳುಹೇಳಿ ಒಪ್ಪಿಕೊಂಡೆನು. ಬಳಿಕ ನ್ಯಾಯಾಧಿಪತಿಯು ಕೈಯ್ಯನ್ನು ಕೊಯಿದುಹಾಕು ವಂತ, ಆಜ್ಞಾಪಿಸಿದನು. ಅವರು ಅದರಂತೆ ನಡೆಸಿದಮೇಲೆ, ನಾನು ಬೇಟಿ ಯಲ್ಲಿ ಬರುತ್ತಿರುವಾಗ, ರತ್ನ ವಡಿ ವ್ಯಾಪಾರಗಾರನು ನೋಡಿ, ನನ್ನನ್ನು ಕುರಿತು, ಅಯ್ಯಾ ! ನೀನು ವಿದ್ಯಾವಂತನೂ, ಆಗಿರುವ ಜಾಣನೆಂದು ನಾನು ತಿಳಿದುಕೊಂಡಿದೆ. ಇಂತಹ ಅಯೋಗ್ಯಕರವಾದ ಕೆಲಸವನ್ನು ನೀನು ಮಾಡಬಹುದೆ ? ಹಣವಿಲ್ಲವಾಗಿದ್ದರೆ, ನನ್ನನ್ನು ಕೇಳದರೆ ಕೊಡು ತಿದೆ ನಾ ! ಅಯ್ಯೋ ! ನಾಸಿ, ನೀನು ಹೀಗಾದಮೇಲೆ ನನ್ನ ಮನೆ ಯಲ್ಲಿರಕೂಡದು, ಎಲ್ಲಿಯಾದರೂ, ಸ್ವಲವನ್ನು ನೋಡಿಕೊ ಎಂದು ಹೇಳಿದನು. ಆಗ ನಾನು ಅತ್ಯಂತ ಶಕಾಕಾಂತನಾಗಿ, ಅಯಾ ! ಇನ್ನು ಮರುದಿನಗಳು ನಿನ್ನ ಮನೆಯಲ್ಲಿರುವುದಕ್ಕೆ, ಅಪ್ಪಣೆ ಕೊಡಬೇಕೆಂದು