ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಯಜಮಾನರಾರೆ, ನಾನು ಕಾಣೆ. ಆತನನ್ನು ನಾನೇಕ ಕೊಲತಿ, ಆತನು ನನಗಾವ ಆವಕಾರವನ್ನು ಮಾಡಲಿಲ್ಲ ಅಲ್ಲವೇ ! ನೀವು ನನ್ನ ಮನೆಗೆ ಬಂದು ಧಾರಾಳವಾಗಿ ನೋಡಿಕೊಳ್ಳಿ ! ಎನಲು, ನಾಯಿಂದನು ಆಯ್ಕೆ ! ಮರುನಿವಸಗಳಮುಂಚೆ ನೀನು ನನ್ನ ಯಜಮಾನನನ್ನು ಹೊಡೆಯ ರಿಲ್ಲವೆ, ಆತನು ಅಳುತ್ತಿದ್ದುದನ್ನು ನಾನು ಚೆನ್ನಾಗಿ ಕೇಳಿದೆನಲ್ಲಾ! ಎಂದು ಹೇಳಿದನು. ನಿಮ್ಮ ಯಜಮಾನನನ್ನು ನಾನು ಹೊಡೆಯುವುದಕ್ಕೆ ಆತನು ನನ್ನ ಮನೆಯಲ್ಲಿರುವನೆ ? ಹೇಗಬಂದ ? ಯಾರು ಕರೆದುಕೊಂಡುಬಂದರು ? ಯಾರು ನೋಡಿದವರು ? ಎಂದು ಖಾಜಿ ಕೇಳಿದಕೂಡಲೆ, ಆಹಾ ! ನೀಚ ನಾದ ಕಲೆಗಾತಕನ ! ನಿನ್ನ ಮಾತುಗಳನ್ನು ನಾನು ನಂಬಲಾರೆ ! ನಿನ್ನ ದುಗಳು ನಮ್ಮ ಯಜಮಾನರನ್ನು ವಹಿಸಿ ಧಾನಕಾಲದಲ್ಲಿ, ಆತ ನನ್ನು ತನ್ನ ಬಳಿಗೆ ಬರಮಾಡಿಕೊಂಡಳು. ನೀನು ಮನೆಗೆ ಬಂದಮೇಲೆ ಆತನನ್ನು ನೋಡಿ ಆಶ್ಚರ್ಯಯುಕ್ತನಾಗಿ ನಿನ್ನ ಚಾರಕರಿಂದ ಆತನನ್ನು ನೀನು ಹೂಡೆಸುತ್ತಿರಲಿಲ್ಲವೆ ? ಇಂತಹ ದುರ್ಮಾರ್ಗವನ್ನು ಕಲೀಫರು ಕೇಳಿದರೆ, ನಿನಗೆ ಶಿಕ್ಷೆಯನ್ನು ಮಾಡದೇ ಬಿಡಲಾರರು. ನನ್ನ ಯಜಮಾನ ನನ್ನು ಹೊರಗೆಕಳುಹಿಸು, ನಾವು ಆತನನ್ನು ಕರೆದುಕೊಂಡು ಹೋಗಲಿ ಏವುಎಂದು ನಾಯಿಂದನು ಹೇಳಲು ಆ ಖಾಜಿಯು ಇನ್ನೂ ಕೂಗಾಟವೂ ದುಮ್ಮವಾದ ನಿನ್ನವಾದವೂ ಏಕ, ಮನೆಯೊಳಕ್ಕೆ ಬಂದು ನಿನ್ನ ಯುದ ಮಾನನನ್ನು ತೋರಿಸು ಕರೆದುಕೊಂಡು ಹೋಗುವೆಯಂತೆ ಎಂದು ಅಪ್ಪಣೆ ಮಾಡಲು, ಆ ನಾಯಿಂದನ, ನನ್ನ ಚಾಗರೂ, ಒಳಗೆಬಂದು ನನ್ನನ್ನು ಹುಡುಕುತ್ತಿದ್ದರು ಎಂದು ಮಕರಜೆದಿಯು ಹೇಳಿದಕೂಡಲೆ, ಸುಲಿ ನರು ಆಶ್ಚರ್ಯಯುಕ್ತರಾದರು. ಆಗ ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಸುಲ್ತಾನಿಯು ಮರಳಿ ಹೇಳಲಾರಂಭಿಸಿದಳು. ೧೬೫ ನೆಯ ರಾತ್ರಿ ಕಥೆ. ಹರಜಿದಿಯು ಸುಲ್ತಾನರನ್ನು ಕುರಿತು ಇಂತೆಂದಳು:ಹೀಗ ಜನರೆಲ್ಲರೂ ಹುಡುಕುತ್ತಿರುವಾಗ, ನಾನು ಎಲ್ಲಿಯಾದರೂ ಮರೆಯಾಗಿರ ಬೇಕಂದು, ಆ ಮನೆಯಲ್ಲಿದ್ದ ಒಂದು ಪೆಟ್ಟಿಗೆಯಲ್ಲಿ ಮಲಗಿಕೊಂಡು, ಭಾಗಿಲು ಮುಚ್ಛಿಕೊಂಡನು, ಆತನು ನನ್ನನ್ನು ಹುಡುಕುವುದಕ್ಕೆ ಬಂದು